ಸುದ್ದಿಗಳು

ರೋರಿಂಗ್ ಸ್ಟಾರ್ ಮೀಟ್ಸ್ ಟಾಲಿವುಡ್ ಪ್ರಿನ್ಸ್!!

ಬೆಂಗಳೂರು,ಫೆ.13:

ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಗೂ “ಕಿಸ್’ ಶ್ರೀಲೀಲಾ ಅಭಿನಯಿಸುತ್ತಿರುವ “ಭರಾಟೆ’ ಚಿತ್ರದ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ.. ಇನ್ನು ಚಿತ್ರಕ್ಕೆ “ಭರ್ಜರಿ’ ಚೇತನ್ ಆ್ಯಕ್ಷನ್ ಕಟ್ ಹೇಳುವುದರ ಜೊತೆಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಸಹ ರಚಿಸಿದ್ದಾರೆ.
ಸದ್ಯ ಚಿತ್ರತಂಡ ಹೈದರಾಬಾದ್​​ನ ರಾಮೋಜಿ ಫಿಲ್ಮ್​ ಸಿಟಿಯಲ್ಲಿ ಝಂಡಾ ಊರಿದೆ.. ಹೌದು, ರಾಮೋಜಿಯಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು,  ಬಿಡುವಿನ ವೇಳೆ ಶ್ರೀ ಮುರಳಿ ಟಾಲಿವುಡ್​ ಪ್ರಿನ್ಸ್ ಮಹೇಶ್ ಬಾಬು ಅವರನ್ನು ಭೇಟಿಯಾಗಿದ್ದಾರೆ.

ತಮ್ಮ ಸಿನಿಮಾ ಬಗ್ಗೆ ಚರ್ಚೆ

ಮಹೇಶ್ ಬಾಬು ಅವರ 25 ನೇ ಚಿತ್ರ ‘ಮಹರ್ಷಿ’.. ಈ ಚಿತ್ರದ ಶೂಟಿಂಗ್ ಕೂಡಾ ‘ರಾಮೋಜಿ ಫಿಲ್ಮ್​ ಸಿಟಿ’ಯಲ್ಲಿ ಭರದಿಂದ ಸಾಗುತ್ತಿದೆ… ಇನ್ನು ಮಹೇಶ್ ಬಾಬು ಅವರು ಇರುವ ವಿಷಯ ತಳಿದ ಶ್ರೀ ಮುರಳಿ ಮಹೇಶ್ ಬಾಬು ಅವರನ್ನು ಭೇಟಿ ಮಾಡಿ, ಇಬ್ಬರೂ ತಮ್ಮ ಸಿನಿಮಾ ಬಗ್ಗೆ ಚರ್ಚಿಸಿದ್ದಾರೆ.. ಶ್ರೀಮುರಳಿಗೆ ಗೆಳೆಯ, ಸ್ಟಿಲ್ ಫೋಟೋಗ್ರಾಫರ್ ಚಂದನ್ ಸಾಥ್ ನೀಡಿದ್ದಾರೆ.

ಹ್ಯಾಟ್ರಿಕ್ ನಿರೀಕ್ಷೆ

ಈಗಾಗಲೇ ಚೇತನ್ “ಭರ್ಜರಿ’, “ಬಹದ್ದೂರ್’ ಚಿತ್ರಗಳ ಮೂಲಕ ಸಿನಿ ಪ್ರಿಯರಿಗೆ ಭರ್ಜರಿ ರಸದೌತಣವನ್ನು ನೀಡಿದ್ದಾರೆ. ಅಲ್ಲದೇ ಈ ಚಿತ್ರದ ಮೂಲಕ ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದಾರೆ. ಈ ಚಿತ್ರವನ್ನು ಸುಪ್ರೀತ್‌ ನಿರ್ಮಿಸುತ್ತಿದ್ದು, ಭುವನ್‌ ಗೌಡ ಛಾಯಾಗ್ರಹಣ, ಅರ್ಜುನ್‌ ಜನ್ಯ ಸಂಗೀತ, ದೀಪು ಎಸ್‌ ಕುಮಾರ್‌ ಅವರ ಸಂಕಲನ ಈ ಚಿತ್ರಕ್ಕಿದೆ.

ವೈಯಕ್ತಿಕ ಸಂಬಂಧಗಳು ಹಳಸುತ್ತಾ ಬರಲು ಕಾರಣ!!?!!

#balkaninews #sandalwood #mahrashi #bahrate

Tags