ಸುದ್ದಿಗಳು

ಸಿನಿಮಾದಿಂದ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಲು ಯೋಜಿಸುತ್ತಿರುವ ರೋಸಾಮುಂಡ್ ಪೈಕ್

ಹಾಲಿವುಡ್ ನಟಿ ರೋಸಾಮುಂಡ್ ಪೈಕ್

ಬೆಂಗಳೂರು, ಡಿ.17: ನಟಿ ರೋಸಾಮುಂಡ್ ಪೈಕ್ ಅವರು “ಎ ಪರ್ಫೆಕ್ಟ್ ವಾರ್” ಮತ್ತು “ರೇಡಿಯೋ ಆಕ್ಟಿವ್” ನಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ ನಂತರ ಸಣ್ಣ ವಿರಾಮ ತೆಗೆದುಕೊಳ್ಳುವ ಕುರಿತು ಯೋಚಿಸುತ್ತಿರುವುದಾಗಿ ಹೇಳಿದ್ದಾರೆ.

“ಎ ಪರ್ಫೆಕ್ಟ್ ವಾರ್” ಮತ್ತು “ರೇಡಿಯೋ ಆಕ್ಟಿವ್” ಚಿತ್ರಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ನಟಿ

39ರ ಹರೆಯದ ನಟಿ, ‘ಎ ಪರ್ಫೆಕ್ಟ್ ವಾರ್’ ಚಿತ್ರದಲ್ಲಿ ಯುದ್ಧದ ವರದಿಗಾರ್ತಿ ಮೇರಿ ಕೋಲ್ವಿನ್ ಮತ್ತು ‘ರೇಡಿಯೋಆಕ್ಟಿವ್’ ಚಿತ್ರದಲ್ಲಿ ವಿಜ್ಞಾನಿ ಮೇರಿ ಕ್ಯೂರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರು ಸ್ವಲ್ಪ ಸಮಯ ತಾನಾಗಿಯೇ ಇರಲು ಬಯಸುವುದಾಗಿ ಹೇಳಿದ್ದಾರೆ.

”ನಾನು ಸ್ವಲ್ಪ ಹಿಂದಕ್ಕೆ ಕುಳಿತುಕೊಳ್ಳಲು ಬಯಸುತ್ತೇನೆ. ಬೇರೆ ಕಲಾವಿದರಂತೆ ಅಭಿನಯಿಸುವುದು ನನಗೆ ಕಷ್ಟವಾಗುತ್ತದೆ. ಆದ್ದರಿಂದ ಸ್ವಲ್ಪ ಸಮಯದವರೆಗೆ ನಾನು ನಾನಾಗಿರುವುದು ಬಹಳ ಮುಖ್ಯ” ಎಂದು ಮೇರಿ ಕ್ಲೇರ್ ನಿಯತಕಾಲಿಕೆಗೆ ಪೈಕ್ ಹೇಳಿದ್ದಾರೆ.

ಆದರೆ, ಅವರು ಭವಿಷ್ಯದಲ್ಲಿ ಸಹಕರಿಸಲು ಬಯಸುತ್ತಿರುವ ನಿರ್ದೇಶಕರ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ”… ಈ ವರ್ಷ ನಾನು ಕೆಲ ನಿರ್ದೇಶಕರೊಂದಿಗೆ ಕೆಲಸ ಮಾಡಲು ನಾನು ಬಯಸುತ್ತೇನೆ. ಅಲ್ಫೊನ್ಸೊ ಕೌರನ್‍ ನಿಂದ ‘ರೋಮಾ’ ಅತ್ಯಂತ ಸುಂದರವಾದ ಕೃತಿಯಾಗಿದೆ. ನಾನು ಅವರೊಂದಿಗೆ ಕೆಲಸ ಮಾಡಲು ಇಷ್ಟಪಡುತ್ತೇನೆ. ಏಕೆ ಹೇಳಬಾರದು…? ನಾನು ಭಯ ಹುಟ್ಟಿಸುವವಳಾಗಿದ್ದೇನೆ ಎಂದು ನೀವು ಭಾವಿಸಬಹುದು. ಆದರೆ ನೀವು ಅದನ್ನು ಎಂದಿಗೂ ಹೇಳದಿದ್ದರೆ, ನೀವು ಎಂದಿಗೂ ಕಂಡುಕೊಳ್ಳಲು ಸಾಧ್ಯವಿಲ್ಲ. ನೀವು ನಿಮ್ಮ ಸತ್ಯವನ್ನು ಮಾತನಾಡಬೇಕು” ಎಂದು ಅವರು ಹೇಳಿದರು.

Tags

Related Articles