ಸುದ್ದಿಗಳು

ಮಾಧ್ಯಮಗೋಷ್ಠಿಯಲ್ಲಿ ಆರ್ ಆರ್ ಆರ್ ಬಗ್ಗೆ ಮಾಹಿತಿ ಬಿಟ್ಟಿಕೊಟ್ಟ ರಾಜಮೌಳಿ!!

ಹೈದರಾಬಾದ್,ಮಾ,14: ಅಂದಹಾಗೆ ಆರ್ ಆರ್ ಆರ್ ಚಿತ್ರದ ಬಗ್ಗೆ ಹಲವು ಕಥೆಗಳು ಹರಿದಾಡುತ್ತಿದ್ದರು ನಿರ್ದೇಶಕರು ಮಾತ್ರನನಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತ್ತಿದ್ದರು. ಇನ್ನೂ ಚಿತ್ರದಲ್ಲಿ ಜೂನಿಯರ್ ಎನ್ ಟಿಆರ್ ಹಾಗೂ ರಾಮ್ ಚರಣ್ ತೇಜಾ ಅಭಿನಯಿಸುತ್ತಿದ್ದು, ಇವರಿಬ್ಬರ ಪಾತ್ರಗಳ ಬಗ್ಗೆಯೂ ಅಂತೆಕಂತೆಗಳು ಹರಿದಾಡುತ್ತಿತ್ತು. ಈಗ ಅದೆಲ್ಲದಕ್ಕೂ ಇಂದು ಬಿಗ್ ಬ್ರೇಕ್ ನೀಡಿದ್ದಾರೆ ..

ಚಿತ್ರಕಥೆ ರಿವೀಲ್

ಆರ್ ಆರ್ ಆರ್ ಸೆಟ್ಟೇರಿದಾಗಿನಿಂದಲೂ ಒಂದೆಲ್ಲಾ ಒಂದು ಸುದ್ದಿ ಮಾಡುತ್ತಲೇ ಇದೆ.. ಕುತೂಹಲದ ಕೇಂದ್ರ ಬಿಂದುವಾಗಿದ್ದ ಆರ್ ​ಆರ್ ​ಆರ್​ ಚಿತ್ರದ ಮಾಹಿತಿ ಇಂದು ರಿವೀಲ್ ಆಗಿದೆ.. . ಇಂದು ಆರ್ ​ಆರ್ ​ಆರ್ ಚಿತ್ರತಂಡ ಮಾಧ್ಯಮಗೋಷ್ಠಿ ನಡೆಸಿದ್ದರು.. ನಿರ್ದೇಶಕ ಎಸ್​​ಎಸ್​ ರಾಜಮೌಳಿ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಆರ್ ​ಆರ್​ ಆರ್ ಚಿತ್ರದ ಬಗ್ಗೆ ಸಾಕಷ್ಟು ಮಾಹಿತಿ ಬಿಚ್ಚಿಟ್ಟಿದ್ದಾರೆ.. ಈ ವೇಳೆ ಚಿತ್ರಕಥೆ ರಿವೀಲ್ ಮಾಡಿದ ಅವರು, ಇದು  ಅಲ್ಲರು ಸೀತಾರಾಮರಾಜು ಹಾಗೂ ಕೋಮರಾಮ್ ಭೀಮ ಸ್ವಾತಂತ್ರ್ಯ ಹೋರಾಟಗಾರ ಕುರಿತಾದ ಚಿತ್ರ ಎಂದರು.

10 ಭಾಷೆಗಳಲ್ಲಿ ಆರ್ಆರ್ಆರ್

ಇನ್ನುಈ ಚಿತ್ರದ ನಟರ ಬಗ್ಗೆ ರಿವೀಲ್ ಮಾಡಿದ ರಾಜಮೌಳಿ, ಈ ಚಿತ್ರದಲ್ಲಿ ಬಾಲಿವುಡ್ ನಟ ಅಜಯ್​ದೇವಗನ್ ಮುಖ್ಯ ಪಾತ್ರದಲ್ಲಿ ಕಾಣಿಸಲಿದ್ದಾರೆ… ರಾಮ್ ಚರಣ್​ಗೆ ನಾಯಕಿಯಾಗಿ ಬಾಲಿವುಡ್ ನಟಿ ಆಲಿಯಾ ಭಟ್ ಹಾಗೂ ಜ್ಯೂನಿಯರ್​ ಎನ್​ಟಿಆರ್​ಗೆ ಜತೆಯಾಗಿ ನಟಿ ಡೈಸಿ ಎಡ್ಗಾರ್​ ಜೊನ್ಸ್ ಅಭಿನಯಿಸಲಿದ್ದಾರೆ ಎಂದರು. ರಾಮ್ ಚರಣ್ ಅವರು ಅಲುರಿ ಪಾತ್ರವನ್ನು ನಿರ್ವಹಿಸುತ್ತಾರೆ, ಎನ್ಟಿಆರ್  ಭೀಮ್ ,ಪಾತ್ರದಲ್ಲಿ ಮಿಂಚಲಿದ್ದಾರೆ. ಇದೇ ವೇಳೆ ಆರ್ ​ಆರ್​ ಆರ್​ ಎಲ್ಲ ಭಾಷೆಗಳಿಗೂ ಕಾಮನ್​ ಟೈಟಲ್ ಆಗಿರಲಿದ್ದು ಆದರೆ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಟೈಟಲ್ ಬೇರೆ ಬೇರೆಯಾಗಿರುತ್ತದೆ ಎಂದರು.

ಇನ್ನು10 ಭಾಷೆಗಳಲ್ಲಿ ಆರ್​ಆರ್​ಆರ್ ಚಿತ್ರ ಬಿಡುಗಡೆಗೆ ಪ್ಲ್ಯಾನ್ ಮಾಡಿರುವುದಾಗಿ ಇದೇ ವೇಳೆ ಚಿತ್ರತಂಡ ಹೇಳಿಕೊಂಡಿದೆ.   2020 ಜುಲೈ ತಿಂಗಳಿನಲ್ಲಿ ಈ ಚಿತ್ರ ತೆರೆಗೆ ಬರಲಿದೆ. 350 ರಿಂದ 400 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಚಿತ್ರ ರೆಡಿಯಾಗಲಿದೆ.

ಗುಲಾಬಿ ಟೀ ಕುಡಿಯಿರಿ, ತೂಕ ಇಳಿಸಿ..!

Tags

Related Articles