ಸುದ್ದಿಗಳು

‘ಆರ್ ಆರ್ ಆರ್’ ಚಿತ್ರತಂಡದಿಂದ ಹೊರ ಬಿತ್ತು ಅಚ್ಚರಿಯ ಸಂಗತಿಗಳು

ಹೈದ್ರಾಬಾದ್, ಏ.11:

ರಾಜಮೌಳಿ ನಿರ್ದೇಶನದ ಮುಂದಿನ ಚಿತ್ರ ಆರ್ ಆರ್ ಆರ್ ಕುರಿತಂತೆ ನಿರೀಕ್ಷೆಗಳು  ಹೆಚ್ಚುತ್ತಿದ್ದು, ರಾಮ್ ಚರಣ್ ಹಾಗೂ ಯಂಗ್ ಟೈಗರ್ ಎನ್ ಟಿಆರ್ ಅಭಿನಯದ ಚಿತ್ರ ಸದ್ಯಕ್ಕೆ ಸ್ಥಗಿತಗೊಂಡಿದೆ. ರಾಮ್ ಚರಣ್ ತೇಜಾ ಗಾಯಗೊಂಡಿರುವ ಕಾರಣ ಚಿತ್ರೀಕರಣವನ್ನು ರದ್ದುಪಡಿಸಲಾಗಿದೆ ಎನ್ನಲಾಗಿದೆ. ಬಾಹುಬಲಿ ಚಿತ್ರದ ನಂತರ ರಾಜಮೌಳಿ ಈ ಚಿತ್ರವನ್ನು ನಿರ್ದೇಶಿಸುತ್ತಿರುವುದರಿಂದ ಸಹಜವಾಗಿಯೇ ಬಾಹುಬಲಿ ಹ್ಯಾಂಗೋವರ್ ನಲ್ಲಿ ಇರುವ ಜನರಿಗೆ ಇದೇ ರೀತಿಯ ನಿರೀಕ್ಷೆಯನ್ನು ಆರ್ ಆರ್ ಆರ್ ಚಿತ್ರದ ಮೇಲೂ ಇಟ್ಟಿದ್ದಾರೆ . ಹೀಗಾಗಿ ಚಿತ್ರ ಬಿಡುಗಡೆಗಾಗಿ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.

ಬಿಗ್ ಶಾಕ್ ನೀಡಿದ ಡೈಸಿ

ರಾಜಮೌಳಿ ತಮ್ಮ ಚಿತ್ರದಲ್ಲಿ ಆಲಿಯಾ ಭಟ್ , ಅಜಯ್ ದೇವಗನ್, ಮತ್ತು ಡೈಸಿ ಎಡ್ಗರ್ ಜೋನ್ ನಟಿಸಲಿದ್ದಾರೆ ಎಂದು ಘೋಷಿಸಿದ್ದರಿಂದ ಪ್ರೇಕ್ಷಕರು ಸಿಕ್ಕಾಪಟ್ಟೆ ಎಕ್ಲೈಟ್ ಆಗಿದ್ದರು. ಆದರೆ ಡೈಸಿ ಚಿತ್ರದಿಂದ ಹೊರನಡೆದಿದ್ದು ಚಿತ್ರತಂಡಕ್ಕೆ ಶಾಕ್ ನೀಡಿತ್ತು. ಇದರ ಬೆನ್ನಲ್ಲೆ ಹೊಸ ಮತ್ತೊಬ್ಬ ಬ್ಯೂಟಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ನಿರ್ದೇಶಕರು. ಒಂದು ಮೂಲಗಳ ಪ್ರಕಾರ ರಾಜಮೌಳಿ ತಮ್ಮ ಚಿತ್ರದಲ್ಲಿ ನಿತ್ಯಾಮೆನನ್ ಗೆ ಪ್ರಮುಖ ಪಾತ್ರವೊಂದನ್ನು ನೀಡುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ತನ್ನ ಚಿತ್ರಕತೆಯನ್ನು ಕೇಳಿರುವ ನಿತ್ಯಾಮೆನನ್  ಸಿಕ್ಕಾಪಟ್ಟೆ ಖುಷಿಯಾಗಿದ್ದು, ಪಾತ್ರಕ್ಕೆ ಓಕೆ ಅಂದ್ದಿದ್ದಾರೆಂತೆ.

ಈ ನಡುವೆ ಬಂದಿರುವ ಮತ್ತೊಂದು ಸುದ್ದಿಯ ಪ್ರಕಾರ, ಸಾಹೋ ಚಿತ್ರದ ಮೂಲಕ ಟಾಲಿವುಡ್ ಗೆ ಎಂಟ್ರಿಯಾಗಿರುವ ಶ್ರದ್ಧಾಕಪೂರ್, ಡೈಸಿ ಅವರ ಜಾಗವನ್ನು ತುಂಬಲಿದ್ದಾರೆ ಎನ್ನಲಾಗಿದ್ದು,ಒಂದು ವೇಳೆ ಸದ್ಯಕ್ಕೆ ಬಂದಿರುವ ಸುದ್ದಿ ನಿಜವಾದರೆ, ರಾಜಮೌಳಿ ಚಿತ್ರದಲ್ಲಿ ಆಲಿಯಾ ಭಟ್ ಹಾಗೂ ಶ್ರದ್ಧಾ ಕಪೂರ್ ನಟಿಸಲಿದ್ದಾರೆ.

ಕಾಲಿವುಡ್ ಗೆ ಕನ್ನಡದ ಸೂಪರ್ ಸ್ಟಾರ್ ಜೆಕೆ ಎಂಟ್ರಿ..!

#balkaninews #tollywood #telugumovies #rrrmovie #rrrtelugumovie #ramcharanandjuniorntr #rajamoulirrrmovie

Tags