ಸುದ್ದಿಗಳು

‘ಆರ್ ಆರ್ ಆರ್’ ಚಿತ್ರದಲ್ಲಿ ಈ ಬಾಲಿವುಡ್ ಸ್ಟಾರ್ ಗಳು!!?!!

ಹೈದರಾಬಾದ್, ಫೆ.9:

ರಾಮ್ ಚರಣ್ ಮತ್ತು ಜೂನಿಯರ್ ಎನ್.ಟಿ.ಆರ್ ಒಳಗೊಂಡ ಎಸ್.ಎಸ್. ರಾಜಮೌಳಿ ಅವರ ಮುಂಬರುವ ಮಲ್ಟಿಸ್ಟಾರರ್ ಚಿತ್ರ ‘ಆರ್ ಆರ್ ಆರ್’ ಈಗಾಗಲೇ ಬಹುನಿರೀಕ್ಷಿತವಾದದ್ದು. ಈಗಾಗಲೇ ಈ ಚಲನಚಿತ್ರದ ಬಗ್ಗೆ ಹಲವಾರು ಸುದ್ದಿಗಳು ಸುತ್ತುವರಿಯುತ್ತಿವೆ ಮತ್ತು ಈ ಚಿತ್ರದಲ್ಲಿ ಕೆಜಿಎಫ್ ಸ್ಟಾರ್ ಯಶ್ ಪ್ರಮುಖ ಪಾತ್ರ ವಹಿಸಬಹುದು ಎಂಬ ಗಾಳಿ ಸುದ್ದಿ ಹರಡಿತ್ತು.. ಬಾಲಿವುಡ್ ಸುಂದರಿಯರಾದ ಆಲಿಯಾ ಭಟ್ ಮತ್ತು ಪ್ರಿಯಾಂಕ ಚೋಪ್ರಾ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದು ಮಾತುಕತೆ ನಡೆಯುತ್ತಿದೆ ಎನ್ನಲಾಗುತ್ತಿತ್ತು.. ಆದರೆ ಸಂಭಾವನೆ ಕೇಳಿ ಚಿತ್ರತಂಡ ಬೇರೆ ನಾಯಕಿಯರನ್ನು ಹುಡುಕಾಟ ನಡೆಸುತ್ತಿದೆ ಎನ್ನಲಾಗುತ್ತಿದೆ…

Related image

ಬಾಲಿವುಡ್ ನಟ ಅಜಯ್ ದೇವಗನ್ ನಟಿಸುತ್ತಿಲ್ಲ

ಈಗಿರುವ ಮಾಹಿತಿಯ ಪ್ರಕಾರ ರಾಜಮೌಳಿ ಆರ್ ಆರ್ ಆರ್ ನಲ್ಲಿ ಬಾಲಿವುಡ್ ನಟ ಅಜಯ್ ದೇವಗನ್ರನ್ನು ಸಂಪರ್ಕಿಸಿದ್ದು, ಅಜಯ್ ದೇವಗನ್ ಬ್ಯುಸಿ ಇರುವುದರಿಂದ ನಟಿಸುತ್ತಿಲ್ಲ… ಹಾಗಾಗಿ, ಬಾಹುಬಲಿ ನಿರ್ದೇಶಕ ಅಕ್ಷಯ್ ಕುಮಾರ್ ಅವರನ್ನು ಈ ಚಿತ್ರಕ್ಕೆ ತರಲು ಯೋಚಿಸುತ್ತಿದ್ದಾರೆ ಎನ್ನಲಾಗುತ್ತಿದೆ.. ಅವರು ಇತ್ತೀಚೆಗೆ ರಜನಿಕಾಂತ್ ಅವರ 2.0 ರಲ್ಲಿ  ಚಿತ್ರದಲ್ಲಿ ನಟಿಸಿದ್ದಾರೆ

Image result for ajay devgan

 ಅಕ್ಷಯ್ ಕುಮಾರ್  ಆರ್ ಆರ್ ಆರ್ ಚಿತ್ರದ ಭಾಗವಾಗಿ ಒಪ್ಪಿಕೊಳ್ಳುತ್ತಾರೆಯೇ?

ಹಾಗಾಗಿ ಅಕ್ಷಯ್ ಕುಮಾರ್  ಆರ್ ಆರ್ ಆರ್ ಚಿತ್ರದ ಭಾಗವಾಗಿ ಒಪ್ಪಿಕೊಳ್ಳುತ್ತಾರೆಯೇ ಎಂದು ನೋಡಬೇಕು. ಬಾಹುಬಲಿಯ ನಂತರ, ದೇಶಾದ್ಯಂತ ಹಲವು ನಟರು ರಾಜಮೌಳಿಯ ಚಿತ್ರದಲ್ಲಿ ಕೆಲಸ ಮಾಡಲು ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಿದ್ದು ಮತ್ತು ಅವರಲ್ಲಿ ಕೆಲವರು ಅಮೀರ್ ಖಾನ್, ಅಕ್ಷಯ್ ಕುಮಾರ್, ಶಾರುಖ್ ಖಾನ್ ಮತ್ತು ಇತರರು ಸೇರಿದ್ದಾರೆ.

Related image

Tags