ಸುದ್ದಿಗಳು

ಪ್ರಜ್ವಲ್ ಗೆ ಜೋಡಿಯಾದ ಮಲೆಯಾಳಿ ಕುಟ್ಟಿ

‘ರುಧೀರ’ ಚಿತ್ರಕ್ಕೆ ನಾಯಕಿಯಾದ ಸನುಷಾ

ಬೆಂಗಳೂರು, ಡಿ.12: ‘ಅಂದರ್ ಬಾಹರ್’ ಚಿತ್ರದ ನಂತರ ನಿರ್ದೇಶಕ ಫಣೀಶ್ ನಿರ್ದೇಶನ ಮಾಡುತ್ತಿರುವ ‘ರುಧೀರ’ ಚಿತ್ರಕ್ಕೆ ನಾಯಕನಾಗಿ ಪ್ರಜ್ವಲ್ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಚಿತ್ರಕ್ಕೆ ಮುಹೂರ್ತ ನೆರವೇರಿಸಲಾಗಿತ್ತು.

ನಾಯಕಿಯಾದ ಸನುಷಾ

ಚಿತ್ರಕ್ಕೆ ಮುಹೂರ್ತವಾಗಿ, ಚಿತ್ರ ಶುರುವಾಗಿದ್ದರೂ ಸಹ ನಾಯಕಿಯಾಗಿ ಯಾರು ಅಭಿನಯಿಸಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿತ್ತು. ಇದೀಗ ಚಿತ್ರದಲ್ಲಿ ನಟಿಸಲು ಮಲಯಾಳಿ ಬೆಡಗಿ ಸನುಷಾ ಆಯ್ಕೆಯಾಗಿದ್ದಾರೆ. ಇವರು ಈ ಹಿಂದೆ ಶಿವರಾಜ್ ಕುಮಾರ್ ರೊಂದಿಗೆ ‘ಸಂತೆಯಲ್ಲಿ ನಿಂತ ಕಬೀರ’ದಲ್ಲಿ ಅಭಿನಯಿಸಿದ್ದರು.ಇನ್ನು ಸನುಷಾ 1998 ರಲ್ಲಿ ಬಾಲನಟಿಯಾಗಿ ಬಣ್ಣದ ಲೋಕ ಪ್ರವೇಶಿಸಿ 35ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೇರಳ ಸರ್ಕಾರದಿಂದ ಎರಡು ಬಾರಿ ಅತ್ಯುತ್ತಮ ಬಾಲ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಹೀಗಾಗಿ ಈ ಚಿತ್ರದಲ್ಲಿ ಪ್ರಜ್ವಲ್ ಮತ್ತು ಸನುಷಾರ ಕಾಂಬಿನೇಷನ್ ಹೇಗೆ ಮೂಡಿಬರಲಿದೆ ಎಂಬ ಕುತೂಹಲ ಮನೆ ಮಾಡಿದೆ.ಚಿತ್ರದ ಬಗ್ಗೆ

ಇದೊಂದು ನಕ್ಸಲಿಸಂ ಕುರಿತ ಕಥಾಹಂದರವನ್ನು ಒಳಗೊಂಡಿದ್ದು, ಚಿತ್ರದ ಚಿತ್ರೀಕರಣ ಬಹುತೇಕ ಶೂಟಿಂಗ್ ಕಾಡಿನಲ್ಲೇ ನಡೆಯಲಿದೆ. ಇನ್ನು ನಾಯಕ ಪ್ರಜ್ವಲ್ ಈ ಚಿತ್ರದಲ್ಲಿ ಗಡ್ಡ ಬಿಟ್ಟು ಸಂಪೂರ್ಣ ಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ನಾಯಕಿಗೆ ಡಾಕ್ಟರ್ ಪಾತ್ರ ಇರಲಿದೆ. ಆ ಪಾತ್ರಕ್ಕೆ ಸನುಷಾ ಸೂಕ್ತ ಆಗುತ್ತಾರೆ ಎಂಬ ಅಭಿಪ್ರಾಯ ಚಿತ್ರತಂಡದ್ದು.

ಪಾತ್ರವರ್ಗದಲ್ಲಿ ತಬಲಾನಾಣಿ, ದೇವರಾಜ್, ದೀಪಕ್ ಸುಬ್ರಹ್ಮಣ್ಯ ಸೇರಿದಂತೆ ಮುಂತಾದವರು ಇರಲಿದ್ದು, ಚಿತ್ರಕ್ಕೆ ವಿಜಯ್ ಪ್ರಕಾಶ್ ಸಂಗೀತ, ನವೀನ್ ಕುಮಾರ್ ಛಾಯಾಗ್ರಹಣವಿದೆ.

Tags

Related Articles