ಸುದ್ದಿಗಳು

ಮೇ ಅಂತ್ಯದ ವೇಳೆಗೆ ‘ರುಸ್ತುಂ’ ಬಿಡುಗಡೆ!!?!!

ಬೆಂಗಳೂರು,ಏ.16: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟಿಸಿರುವ ಬಹು ನಿರೀಕ್ಷಿತ ‘ರುಸ್ತುಂ’ ಚಿತ್ರದ ಜಬರ್ ದಸ್ತ್ ಟ್ರೈಲರ್ ರಿಲೀಸ್ ಆಗಿದೆ. ಚಿತ್ರದಲ್ಲಿ ಶಿವಣ್ಣ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ಮಾಸ್ ಪಂಚಿಂಗ್ ಡೈಲಾಗ್ಸ್ ಮೂಲಕ ಅಬ್ಬರಿಸಿದ್ದಾರೆ.

Image result for rustum kannada movie

ಚಿತ್ರದಲ್ಲಿ ರೌಡಿಗಳಿಗೆ ಸಿಂಹ ಸ್ವಪ್ನವಾಗಿ ಕಾಡುವ ಮೂಲಕ ರೌಡಿಸಂ ಅಂದರೆ ನಂಗೆ ತುಂಬಾನೇ ಅಲರ್ಜಿ ಅಂತಾ ಏನ್ಕೌಂಟರ್ ನಲ್ಲೇ ಖದರ್ ತೋರಿಸಿದ್ದಾರೆ ಶಿವಣ್ಣ. ಹೆಸರಿಗೆ ತಕ್ಕಂತೆ ಇದೊಂದು ಮಾಸ್ ಸಿನಿಮಾವಾಗಿದ್ದು, ಸಾಹಸ ನಿರ್ದೇಶಕ ರವಿವರ್ಮ ಇದೇ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ

Image result for rustum kannada movie

ಕೌಟುಂಬಿಕ ಚಿತ್ರ

ರುಸ್ತುಂ ಖ್ಯಾತ ನಿರ್ದೇಶಕ ರವಿ ವರ್ಮಾ ಅವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದ್ದು, ಇದು ಪಕ್ಕಾ ಕೌಟುಂಬಿಕ ಚಿತ್ರ ಎಂದು ನಿರ್ದೇಶಕ ರವಿವರ್ಮಾ ಹೇಳಿದ್ದಾರೆ. ಪ್ರಮುಖವಾಗಿ ಈ ಚಿತ್ರದ ಮೂಲಕ ಅಭಿಮಾನಿಗಳು ಹೊಸ ಬಗೆಯ ಶಿವರಾಜ್ ಕುಮಾರ್ ಅವರನ್ನು ನೋಡಲಿದ್ದಾರೆ.ಚಿತ್ರದಲ್ಲಿ ಬಾಲಿವುಡ್ ನಟ ವಿವೇಕ್ ಒಬೆರಾಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಾಯಕಿಯಾಗಿ ಶ್ರದ್ಧಾ ಶ್ರೀನಾಥ್ ಅಭಿನಯಿಸಿದ್ದು, ನಟಿ ಮಯೂರಿ ಹಾಗೂ ನಟಿ ರಚಿತಾರಾಮ್ ಕೂಡ ಚಿತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ..

\Image result for rustum kannada movie

ಮೇ ತಿಂಗಳ ಅಂತ್ಯದಲ್ಲಿ ಚಿತ್ರ ಬಿಡುಗಡೆ

ಸದ್ಯ ಚಿತ್ರದ ರೀ-ರೆಕಾರ್ಡಿಂಗ್ ನಡೆಯುತ್ತಿದೆ, ಮೇ ತಿಂಗಳ ಅಂತ್ಯದಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ..ಒಂದು ವೇಳೆ ಚಿತ್ರ ಕೆಲಸ ಮುಕ್ತಾಯವಾದ ಬಳಿಕ ಸೆನ್ಸಾರ್ ಬೋರ್ಡ್ ಗೆ ನೀಡಲಾಗುತ್ತದೆ ಎಂದು ನಿರ್ದೇಶಕರು ಹೇಳಿದ್ದಾರೆ. ಮೇ ತಿಂಗಳ ಮಧ್ಯಭಾಗದಲ್ಲಿ ಚಿತ್ರದ ಹಾಡುಗಳು ಬಿಡುಗಡೆ ಮಾಡಲಿದ್ದು , ಮೇ ತಿಂಗಳ ಅಂತ್ಯದಲ್ಲಿ ಚಿತ್ರ ಬಿಡುಗಡೆಗೆ ತಯಾರಿ ಸಾಗಿದೆ.. ಅಂತೂ ಶಿವಣ್ಣನನ್ನು ಪೋಲೀಸ್ ಗೆಟಪ್ ನಲ್ಲಿ ನೋಡಲು ಅಭಿಮಾನಿಗಳು ಕಾದು ಕುಳಿತಿದ್ದಾರೆ

Tags