ಸುದ್ದಿಗಳು

‘ರುಸ್ತುಂ’ ಮೇಕಿಂಗ್ ವಿಡಿಯೋ : ಶಿವಣ್ಣನ ಎನರ್ಜಿಗೆ ಫ್ಯಾನ್ಸ್ ಫಿದಾ…!!!

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್, ಶ್ರದ್ದಾ ಶ್ರೀನಾಥ್ ಅಭಿನಯದ ‘ರುಸ್ತುಂ’ ಚಿತ್ರವು ಜನಮೆಚ್ಚುಗೆ ಗಳಿಸುವುದರೊಂದಿಗೆ ಬಾಕ್ಸ್ ಆಫೀಸ್ ನಲ್ಲೂ ಕಮಾಲ್ ಮಾಡಿತ್ತು. ಸಾಕಷ್ಟು ವಿಶೇಷಗಳನ್ನು ಹೊಂದಿರುವ ಈ ಚಿತ್ರದ ಒಂದೊಂದೇ ವಿಡಿಯೋ ಸಾಂಗ್ ಗಳು ಬಿಡುಗಡೆಯಾಗುತ್ತಲೇ ಬಂದಿದ್ದವು. ಇದೀಗ ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆಯಾಗಿದೆ.

‘ರುಸ್ತುಂ’ ಚಿತ್ರದ ಮೇಕಿಂಗ್ ವಿಡಿಯೋ ನೋಡುತ್ತಿದ್ದರೆ ಒಂದು ಕ್ಷಣ ಥ್ರಿಲ್ ಎನಿಸುತ್ತದೆ. ಚಿತ್ರದ ಸಾಹಸ ಸನ್ನಿವೇಶಗಳು ಚಿತ್ರದ ಹೈಲೆಟ್ಸ್. ಏಕೆಂದರೆ ಚಿತ್ರ ನಿರ್ದೇಶಕ ರವಿವರ್ಮ ಹೇಳಿ ಕೇಳಿ ನಂಬರ್ ಒನ್ ಆ್ಯಕ್ಷನ್ ಡೈರೆಕ್ಟರ್. ಹೀಗಾಗಿ ಈ ಚಿತ್ರದ ಟೈಟಲ್ ಟ್ಯಾಕ್ ನೊಂದಿಗೆ ಸಾಹಸ ದೃಶ್ಯಗಳ ಮೇಕಿಂಗ್ ವಿಡಿಯೋ ನೋಡುವುದು ಮಜಾ ಕೊಡುತ್ತದೆ.

ಇನ್ನು ಈ ಮೇಕಿಂಗ್ ವಿಡಿಯೋದ ಮತ್ತೊಂದು ಹೈಲೆಟ್ ಅಂದರೆ ಅದು ಶಿವಣ್ಣನ ಸ್ಟೈಲ್ ಮತ್ತು ಎನರ್ಜಿ. ತೆರೆಯ ಮೇಲೆ ಅವರ ಸ್ಟೈಲ್ ಮತ್ತು ಎನರ್ಜಿಯನ್ನು ನಾವು ನೋಡಿದ್ದೇವೆ. ಆದರೆ ಅವರು ಶೂಟಿಂಗ್ ಸೆಟ್ ನಲ್ಲಿ ಅವರು ಹೇಗೆ ಇರುತ್ತಾರೆ ಎನ್ನುವುದು ತೆರೆ ಮರೆಯ ಸೀಕ್ರೆಟ್ ಆಗಿತ್ತು. ಅದನ್ನು ಈ ವಿಡಿಯೋದಲ್ಲಿ ನೋಡಿ ಎಂಜಾಯ್ ಮಾಡಬಹುದು.

ಮನೆ ಮಗನನ್ನು ಕೊಂಡಾಡಿದ ಸಂಸದೆ ಸುಮಲತಾ..!!

#rustummovie #rustummoviemakingvideo #kannadafilm, #kannadamovie, #kannadanews, #kannadanewmovie, #kannadacine, #latestkannadamovie

Tags