ಸುದ್ದಿಗಳು

ಇಂದಿನಿಂದ ಗಲ್ಫ್ ದೇಶದಲ್ಲಿ ‘ರುಸ್ತುಂ’

ಜೂನ್ 28 ರಂದು ರಾಜ್ಯಾದ್ಯಂತ ತೆರೆ ಕಂಡಿದ್ದ ‘ರುಸ್ತುಂ’ ಸಿನಿಮಾ ಸದ್ಯ ಭರ್ಜರಿಯಾಗಿ ಪ್ರದರ್ಶನವಾಗುತ್ತಿದೆ. ಇದೀಗ ಚಿತ್ರತಂಡ ಮತ್ತೊಂದು ಸಂತಸದ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ.

ಇಂದಿನಿಂದ ‘ರುಸ್ತುಂ’ ಚಿತ್ರವು ಗಲ್ಪ್ ದೇಶದಲ್ಲಿ ಒಂದು ವಾರಗಳ ಕಾಲ ಪ್ರದರ್ಶನವಾಗಲಿದೆ. ಹೌದು, ಇಂದಿನಿಂದ ಈ ಚಿತ್ರವು ದುಬೈ, ಕತ್ತಾರ್, ಶಾರ್ಜಾ, ಅಬುದಾಭಿ, ಓಮನ್, ಕತ್ತಾರ್, ಸೇರಿದಂತೆ ಅನೇಕ ಕಡೆಗಳಲ್ಲಿ ಒಂದು ವಾರಗಳ ಕಾಲ ಪ್ರದರ್ಶನವಾಗಲಿದೆ. ಈ ವಿಷಯವನ್ನು ಚಿತ್ರತಂಡ ಹಂಚಿಕೊಂಡಿದೆ.


ಇನ್ನು ಚಿತ್ರದ ಬಗ್ಗೆ ಹೇಳಬೇಕೆಂದರೆ, ಈ ಚಿತ್ರವು ಪೊಲೀಸ್ ಅಧಿಕಾರಿಗಳ ಕಥೆಯನ್ನು ಹೊಂದಿದ್ದು, ಶಿವಣ‍್ಣ ಹಾಗೂ ಬಾಲಿವುಡ್ ನ ವಿವೇಕ್ ಓಬೆರಾಯ್ ಸೂಪರ್ ಕಾಪ್ ಆಗಿ ಕಾಣಿಸಿಕೊಂಡಿದ್ದಾರೆ.

ಉಳಿದಂತೆ ರಚಿತಾ ರಾಮ್, ಶ್ರದ್ದಾ ಶ್ರೀನಾಥ್, ಮಯೂರಿ ಸೇರಿದಂತೆ ಅನೇಕರು ನಟಿಸಿದ್ದು, ಸದ್ಯ ಈ ಚಿತ್ರವು 25 ನೇ ದಿನದತ್ತ ಮುನ್ನಗ್ಗುತ್ತಿದೆ. ಚಿತ್ರವನ್ನು ಜಯಣ್ಣ-ಭೋಗೇಂದ್ರ ನಿರ್ಮಿಸಿದ್ದು, ರವಿವರ್ಮ ಸಾಹಸದೊಂದಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಶಿವಣ್ಣನ ಶಸ್ತ್ರ ಚಿಕಿತ್ಸೆ ಯಶಸ್ವಿ: ಫಲಿಸಿತು ಅಭಿಮಾನಿಗಳ ಪ್ರಾರ್ಥನೆ

#rustum #movie #telecost #gulf #balkaninews #kannadasuddigalu, #shivarajkumar

Tags