ಸುದ್ದಿಗಳು

ಕೇಳುಗರಿಗೆ ಗುಂಗು ಹಿಡಿಸಿದ ‘ರುಸ್ತುಂ’ ಚಿತ್ರದ ಸಾಂಗ್

ಯೂ ಆರ್ ಮೈ ಪೋಲೀಸ್ ಬೇಬಿ.. ಎಂದು ಭರ್ಜರಿ ಸ್ಟೆಪ್ ಹಾಕಿದ ಶಿವಣ‍್ಣ

ಬೆಂಗಳೂರು.ಮೇ.16: ನಿನ್ನೆ ಸಂಜೆಯಷ್ಟೇ ಆನಂದ್ ಆಡಿಯೋ ಸಂಸ್ಥೆಯ ಯುಟ್ಯೂಬ್ ಚಾನಲ್ ನಲ್ಲಿ ರಿಲೀಸ್ ಆದ ‘ರುಸ್ತುಂ’ ಚಿತ್ರದ ಯೂ ಆರ್ ಮೈ ಪೋಲೀಸ್ ಬೇಬಿ.. ಸಾಂಗ್ ಕೇಳುಗರಿಗೆ ಗುಂಗು ಹಿಡಿಸುತ್ತಿದೆ.

ನಿರ್ದೇಶಕ ಎ. ಪಿ ಅರ್ಜುನ್ ರಚಿಸಿರುವ ಈ ಹಾಡಿಗೆ ಜೆ ಅನೂಪ್ ಸಿಳಿನ್ ಸಂಗೀತ ನೀಡಿದ್ದು, ರಘು ದಿಕ್ಷೀತ್, ಅಪೂರ್ವ ಶ್ರೀಧರ್ ಹಾಡಿಗೆ ಧ್ವನಿಯಾಗಿದ್ದಾರೆ. ಸದ್ಯ ಚಿತ್ರದ ಈ ಲಿರಿಕಲ್ ವಿಡಿಯೋದಲ್ಲಿ ಚಿತ್ರದ ಮೇಕಿಂಗ್ ಅನ್ನು ಸಹ ತೋರಿಸಲಾಗಿದೆ.

ಸಾಹಸ ನಿರ್ದೇಶಕ ರವಿವರ್ಮ ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಈ ಚಿತ್ರವೀಗ ಪ್ರೇಕ್ಷಕರ ಆಸಕ್ತಿಯ ಕೇಂದ್ರ ಬಿಂದು. ಯಾಕೆಂದರೆ ಈ ಸಿನಿಮಾ ಶಿವಣ್ಣನ ವೃತ್ತಿ ಜೀವನದಲ್ಲಿಯೇ ಮೈಲಿಗಲ್ಲಾಗುವಂತಹ ಹೂರಣ ಹೊಂದಿದೆಯೆಂಬ ಮಾತು ಎಲ್ಲೆಡೆ ಕೇಳಿ ಬರಲಾರಂಭಿಸಿದೆ. ಸೂಪರ್ ಕಾಪ್ ಆಗಿ ಅಬ್ಬರಿಸಿರೋ ಶಿವಣ್ಣನ ಫೋಟೋಗಳು ಈಗಾಗಲೇ ಟ್ರೆಂಡ್ ಸೆಟ್ ಮಾಡಿವೆ.

ಇನ್ನು ಕೆಲವು ವರ್ಷಗಳ ಹಿಂದೆ ತೆಲುಗಿನ ‘ಮಾರಿ’ ಚಿತ್ರದ ‘ರೌಡಿ ಬೇಬಿ’ ಹಾಡು ಗುಂಗು ಹಿಡಿಸಿತ್ತು. ಈ ಹಾಡು ಸಹ ಇದೇ ದಾಟಿಯಲ್ಲಿದ್ದು, ಚಿತ್ರದ ಹಾಡು ಸಾಹಿತ್ಯ, ಟಪ್ಪಾಂಗುಚ್ಚಿ ಶೈಲಿಯ ಸಂಗೀತ ಮತ್ತು ಎಂಥವರನ್ನೂ ಎದ್ದು ಕುಣಿಯುವಂತೆ ಮಾಡುತ್ತಿದೆ.

ಟೈಟಲ್ ಗೆ ತಕ್ಕಂತೆ ನಿರ್ದೇಶಕ ರವಿವರ್ಮಾ ಕಥೆಯನ್ನು ವಿಭಿನ್ನವಾಗಿ ಮಾಡಿದ್ದಾರೆ. ಈ ಚಿತ್ರ ಜಯಣ್ಣ ಭೋಗೇಂದ್ರ ಬ್ಯಾನರ್ ನ ಅಡಿಯಲ್ಲಿ ನಿರ್ಮಾಣವಾಗುತ್ತಿದ್ದು, ಜಯಣ್ಣ ಅವರೇ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ಚಿತ್ರಕ್ಕೆ ಶ್ರದ್ದಾ ಶ್ರೀನಾಥ್ ಮತ್ತು ರಚಿತಾ ರಾಮ್ ಇಬ್ಬರು ನಾಯಕಿಯರು ಶಿವರಾಜ್ಕುಮಾರ್ ಜೊತೆ ತೆರೆ ಹಂಚಿಕೊಂಡಿದ್ದು, ಮಯೂರಿ ತಂಗಿಯ ಪಾತ್ರವನ್ನು ನಿರ್ವಹಿಸಿದ್ದಾರೆ.

ವಿಜಯ್ ದೇವರಕೊಂಡ ಅತ್ತಿದ್ಯಾಕೆ?

#rustum, #song, #policebaby, #shivarajkumar, #filmnews, #kannadasuddigalu

Tags