ಸುದ್ದಿಗಳು

‘ರುಸ್ತುಂ’ ಟ್ರೇಲರ್ ಗೆ ಫಿದಾ ಆದ ಪುನೀತ್!!

ಬೆಂಗಳೂರು,ಏ.15: ಶಿವಣ್ಣ ಅಭಿನಯದ ಬಹುನಿರೀಕ್ಷಿತ   ಚಿತ್ರ ’ರುಸ್ತುಂ’ ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರದ ಟ್ರೇಲರ್ ರಿಲೀಸಾಗಿದೆ. ಆನಂದ್‌ ಆಡಿಯೋ ಸಂಸ್ಥೆಯ ಅಧಿಕೃತ ಯುಟ್ಯೂಬ್‌ ಚಾನೆಲ್‌ ಮೂಲಕ ಟ್ರೇಲರ್‌ ಲಾಂಚ್‌ ,ಆಡಿದ್ದಾರೆ ಶಿವಣ್ಣ ಖಡಕ್ ಲುಕ್ ನಲ್ಲಿ ನೋಡಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಶಿವಣ್ಣ ಇದೀಗ ಖಡಕ್ ಪೊಲೀಸ್ ಅಧಿಕಾರಿ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಶಿವಣ್ಣನಿಗೆ ನಾಯಕಿಯಾಗಿ ಶ್ರದ್ಧಾ ಶ್ರೀನಾಥ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ..

Related image

ಅರೆಸ್ಟ್ಅಂದ್ರೆ ನನಗೆ ಅಲರ್ಜಿ, ಎನೌಕೌಂಟರ್ಅಂದ್ರೆ ಎನರ್ಜಿ

ರವಿವರ್ಮ- ಶಿವಣ್ಣ ಕಾಂಬಿನೇಷನ್ನ ಬಹುನಿರೀಕ್ಷಿತ ರುಸ್ತುಂ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು ಅದರಲ್ಲೂ “ಅರೆಸ್ಟ್‌ ಅಂದ್ರೆ ನನಗೆ ಅಲರ್ಜಿ, ಎನೌಕೌಂಟರ್‌ ಅಂದ್ರೆ ಎನರ್ಜಿ’ ಸೇರಿದಂತೆ ಚಿತ್ರದಲ್ಲಿ ಬರುವ ಡೈಲಾಗ್‌ಗಳು ಮಾಸ್‌ ಪ್ರಿಯರ ಶಿಳ್ಳೆಗೆ ಕಾರಣವಾಗುವುದರಲ್ಲಿ ಎರಡು ಮಾತಿಲ್ಲ. ಬಾಲಿವುಡ್‌ ನಟ ವಿವೇಕ್‌ ಒಬೆರಾಯ್‌ ಕೂಡಾ ಚಿತ್ರದಲ್ಲಿ ನಟಿಸಿದ್ದು, ಅವರ ಆ್ಯಕ್ಷನ್‌ ದೃಶ್ಯಗಳೊಂದಿಗೆ “ರುಸ್ತುಂ’ ಖದರ್‌ ಹೆಚ್ಚಿದೆ..

ಅಣ್ಣನಿಗೆ ಅಪ್ಪು ವಿಶ್!!

ಇನ್ನು ಅಣ್ಣನ ಚಿತ್ರ ತಮ್ಮ ಪುನೀತ್ ಶುಭಾಶಯ ಕೋರಿದ್ದಾರೆ.. “ರುಸ್ತುಂ ಟ್ರೇಲರ್ ನೋಡಿ ಇದೀಗ ಪುನೀತ್ ಫುಲ್ ಫಿದಾ ಆಗಿದ್ದಾರೆ .. ಶಿವಣ್ಣನನ್ನು ಪೊಲೀಸ್ ಗೆಟಪ್ನಲ್ಲಿ ನೋಡೋಕೆ ತುಂಬಾನೇ ಖುಷಿಯಾಗುತ್ತಿದೆ. ಟ್ರೇಲರ್ ತುಂಬಾ ಚೆನ್ನಾಗಿದೆ ನಿರ್ದೇಶಕ ರವಿವರ್ಮ , ಶಿವಣ್ಣ ಹಾಗೂ ಇಡೀ ತಂಡಕ್ಕೆ ಆಲ್ ದಿ ಬೆಸ್ಟ್ ಎಂದು ಬರೆದುಕೊಂಡಿದ್ದಾರೆ..

ಲೋಕಸಭೆ ಚುನಾವಣೆ ಪ್ರಚಾರ ಮಾಡುವಾಗ ಮೃತಪಟ್ಟ ನಟ!!

#rustum #shraddhasrinath #shivarajkumar #sandalwood

Tags