ಸುದ್ದಿಗಳು

‘ಸಾಹೋ’ ಅಭಿಮಾನಿಗಳಿಗೆ ಸಿಹಿ ಹಾಗೂ ಕಹಿ ಸುದ್ದಿ!!

ಸಾಹೋ ಬಿಡುಗಡೆಗಾಗಿ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾಗ, ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ಹೊರ ಬಿದ್ದಿದೆ.. ಸ್ವಾತಂತ್ರ್ಯ ದಿನಾಚರಣೆಯಾಗಿ ಆಗಸ್ಟ್ 15 ರಂದು ಬಿಡುಗಡೆಯಾಗಬೇಕಿದ್ದ ಈ ಚಿತ್ರವನ್ನು ತಾತ್ಕಾಲಿಕವಾಗಿ ಆಗಸ್ಟ್ 30 ಕ್ಕೆ ಮುಂದೂಡಲಾಗಿದೆ.

ಸಾಹೋ ಚಿತ್ರತಂಡವು ಮತ್ತೊಂದು ರಿಲೀಸ್ ಡೇಟ್  ಹೇಳಿದೆ… ಗಾಸಿಪ್ ಪ್ರಕಾರ ಟಿ-ಸೀರೀಸ್‌ನಲ್ಲಿ ಸಾಹೋ ಚಿತ್ರದ ಬಾಲಿವುಡ್ ವಿತರಕರು  ದೀಪಾವಳಿ ಹಬ್ಬದ ವಾರಾಂತ್ಯಕ್ಕೆ ರಿಲೀಸ್ ಮಾಡುವ ಪ್ಲಾನ್ ನಲ್ಲಿದೆ.

Image result for sahoo

ಇಲ್ಲಿಯವರೆಗೆ ವಿತರಿಸಲಾದ ವಿಎಫ್‌ಎಕ್ಸ್ ಗುಣಮಟ್ಟದಲ್ಲಿ ಪ್ರಭಾಸ್ ಮತ್ತು ನಿರ್ದೇಶಕ ಸುಜೀತ್ ಸಂಪೂರ್ಣವಾಗಿ ತೃಪ್ತರಾಗಿಲ್ಲ ಎಂದು ಹೇಳಲಾಗಿದೆ. ಆದ್ದರಿಂದ, ಅವರು ಅವಸರದ ಬಿಡುಗಡೆಗೆ  ಬೇಡ ಎಂದು ಡಿಸೈಡ್ ಮಾಡಿದ್ದಾರೆ..

ಸೆಪ್ಟೆಂಬರ್‌ನಲ್ಲಿ ಯಾವುದೇ ಪ್ರಮುಖ ರಜಾದಿನಗಳು ಮತ್ತು ದಸರಾ  ಗೆ ಯಾವುದೇ ಸಿನಿಮಾ ರಿಲೀಸ್ ಗೆ ಇಲ್ಲವಾದ್ದುದರಿಂದ ಸಾಹೋವನ್ನು ದೀಪಾವಳಿಗೆ ಬಿಡುಗಡೆ ಮಾಡಲು ಟಿ-ಸೀರೀಸ್‌ ಗೆ ಉಳಿದಿರುವ ಏಕೈಕ ಆಯ್ಕೆಯಾಗಿದೆ.

‘ಚೀಪ್ ಆಕ್ಟರ್’ ಅಂದವರಿಗೆ ತಾಪ್ಸಿ ಪನ್ನು ಕೊಟ್ಟ ಉತ್ತರ ಹೇಗಿತ್ತು ನೋಡಿ…

#saaho #saahochaptermovie #saahopostponed

Tags