ಸುದ್ದಿಗಳು

ಕೊನೆಗೂ ‘ಸಾಹೋ’ ಗೆ ಸಿಕ್ತು ಹೊಸ ರಿಲೀಸ್ ಡೇಟ್!!

ಸಾಹೋ ಪ್ರಭಾಸ್ ಅಭಿನಯದ ಬುನಿರೀಕ್ಷೆಯ ಚಿತ್ರ. ಹೈ ಬಜೆಟ್ ಸಿನಿಮಾ ಇದಾಗಿದ್ದರಿಂದ ಚಿತ್ರದ ಮೇಲೆ ನಿರೀಕ್ಷೆಯೂ ಇಷ್ಟೇ ಇದೆ.. ಈಗ  ಹೊಸ ಬಿಡುಗಡೆ ದಿನಾಂಕವನ್ನು ತಯಾರಕರು ಫಿಕ್ಸ್ ಮಾಡಿದ್ದಾರೆ. ಈ ಮೊದಲು ಇದು ಆಗಸ್ಟ್ 15 ರಂದು ಚಿತ್ರಮಂದಿರಗಳನ್ನು ತಲುಪಬೇಕಿತ್ತು ಆದರೆ ಈಗ ಅದು ಆಗಸ್ಟ್ 30 ರಂದು  ಚಿತ್ರ ರಿಲೀಸ್ ಆಗಲಿದೆ. ‘ಯುವಿ ಕ್ರಿಯೇಷನ್ಸ್’ ಅಧಿಕೃತವಾಗಿ ಪ್ರೆಸ್ ನೋಟ್ ಬಿಡುಗಡೆ ಮಾಡಿದೆ ಮತ್ತು ಆಗಸ್ಟ್ 30 ರಂದು ಸಾಹೋ ರಿಲೀಸ್ ಆಗಲಿದೆ ಎಂದು ಕನ್ಫರ್ಮ್ ಮಾಡಿದ್ದಾರೆ..

Image result for saaho movie

ಪ್ರೊಡಕ್ಷನ್ ಹೌಸ್ ಯುವಿ ಕ್ರಿಯೇಷನ್ಸ್ ಟ್ವೀಟ್ ಮಾಡಿದ್ದು, “ವಿಷಯ ಮತ್ತು ಗುಣಮಟ್ಟದ ಬಗ್ಗೆ ಯಾವುದೇ ರಾಜಿ ಇಲ್ಲ! ಆಗಸ್ಟ್ 30 ರಿಂದ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತದೆ. # ಸಾಹೋ 30.08.2019 ರಂದು ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ”. ಎಂದು ಟ್ವೀಟ್ ಮಾಡಿದ್ದಾರೆ

ಪ್ರಭಾಸ್ ಮತ್ತು ಶ್ರದ್ಧಾ ಕಪೂರ್ ಅಭಿನಯದ ಚಿತ್ರ ಪೋಸ್ಟ್ ಪೋನ್ ಮಾಡಲು ಕಾರಣಗಳನ್ನು ಪ್ರೆಸ್ ನೋಟ್ ನಲ್ಲಿ ಬರೆದಿಲ್ಲ, ಆದರೆ ಚಿತ್ರದ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಲು ಅವರು ಬಯಸುವುದಿಲ್ಲ ಎಂದು ತಿಳಿದುಬಂದಿದೆ.

ಸಾಹೋ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಪ್ರಭಾಸ್ ಮತ್ತು ಶ್ರದ್ಧಾ ಕಪೂರ್ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಮಂದಿರ ಬೇಡಿ, ಅರುಣ್ ವಿಜಯ್, ಚಂಕಿ ಪಾಂಡೆ ಮತ್ತು ಇತರರು ಪೋಷಕ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಈ ಚಿತ್ರ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ  ಬಿಡುಗಡೆಯಾಗುತ್ತಿದೆ

‘ಭರಾಟೆ’ಗೆ ಡಬ್ಬಿಂಗ್ ಶುರು ಗುರು..!!

#saaho #saahomovie #saahochapter1 #saahoaugust30th #prabhas

Tags