ಸುದ್ದಿಗಳು

ಭಾರತದ ಮೊದಲ ಮಹಿಳಾ ಶಿಕ್ಷಕಿ ‘ಸಾವಿತ್ರಿಬಾಯಿ ಪುಲೆ’ ಅವರ ಜೀವನ ಚರಿತ್ರೆಯ ಸಿನಿಮಾ

ಬೆಂಗಳೂರು, ಆ. 10: ಯಾವುದೇ ದೇಶ ಅಭಿವೃದ್ದಿ ಹೊಂದಬೇಕಾದರೇ ಅಲ್ಲಿನ ಪ್ರಜೆಗಳು ನಿರಕ್ಷರ ಪಕ್ಷಿಗಳು ಎಂಬ ಶಿರೋನಾಮೆ ಧರಿಸಿರಬಾರದು. ಮೂರು ಶತಮಾನದ ಗುಲಾಮಗಿರಿಯಲ್ಲಿ ನರಳಿದ ಭಾರತೀಯರು ನೂರಾರು ಪ್ರಮುಖ ಸ್ವಾತಂತ್ರ್ಯ ಹೋರಾಟದ ಮಹಾನ್ ನಾಯಕರ ಕರೆಗೆ ಎಚ್ಚೆತ್ತರೂ ಅವರಲ್ಲಿ ಮುಕ್ಕಾಲು ವಾಸಿ ಜನ ಅಶಿಕ್ಷಿತರೇ ನಿಮಗೆ ಈ ಸತ್ಯ ತಿಳಿದಿರಲಿ.

1946 ರಲ್ಲಿ ಸಮಗ್ರ ಭಾರತದ ಒಟ್ಟು ಜನಸಂಖ್ಯೆ 63 ಕೋಟಿಯಷ್ಟೇ.  ಅದರಲ್ಲಿನ ಅಕ್ಷರಸ್ತರ ಸಂಖ್ಯೆ 21 .8 % ಇತ್ತು.ಎಂತಹ ದುರಂತ ನೋಡಿ. ಶಿಕ್ಷಣಕ್ಕೂ ಮತ್ತು ಗುರಾಮಗಿರಿಗೂ, ಗುಲಾಮಗಿರಿಗೂ ಶಿಕ್ಷಣಕ್ಕೂ ಇಲ್ಲಿದೆ ಅಲ್ಲವೇ ಸಂಭಂದ.

ಬ್ರಿಟಿಷರಿಂದ “ಭಾರತದ ಮೊದಲ ಮಹಿಳಾ ಶಿಕ್ಷಕಿ” ಎಂಬ ಬಿರುದನ್ನು ಪಡೆದಿರುವ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜೀವನಾಧಾರಿತ ಚಿತ್ರವೊಂದು ಇಂದು ‘ಸಾವಿತ್ರಿಬಾಯಿ ಪುಲೆ-ಪ್ರೈಡ್ ಆಫ್ ನೇಶನ್’ ಎಂಬ ಹೆಸರಿನಲ್ಲಿ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

ನಟಿ ತಾರಾ ಅವರು ‘ಸಾವಿತ್ರಿಬಾಯಿ’ ಪಾತ್ರದಲ್ಲಿ ಮತ್ತು ಮಹಾತ್ಮ ಜ್ಯೋತಿಬಾ ಫುಲೆ ಪಾತ್ರದಲ್ಲಿ ಸುಚೇಂದ್ರ ಪ್ರಸಾದ್ ಅಭಿನಯಿಸಿದ್ದಾರೆ. ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ದೊಡ್ಡ ಕ್ರಾಂತಿಯನ್ನೇ ಹುಟ್ಟು ಹಾಕಿದ ಶಿಕ್ಷ ಕಿ ಸಾವಿತ್ರಿಬಾಯಿ ಫುಲೆ ಒಂದು ವಿಶ್ವವಿದ್ಯಾಲಯದಂತೆ ಕೆಲಸ ಮಾಡಿದ ಮಹಾನ್ ಸಾಧಕಿ.

ಅವರ ದಿಟ್ಟ ಹೋರಾಟದ ಬದುಕು-ಬವಣೆ ಕೇಳುವ ಮೂಲಕ ನಮ್ಮಲ್ಲಿ ಕ್ರಾಂತಿಕಾರಿ ವಿಚಾರಗಳನ್ನು ತುಂಬಿದ್ದಾರೆ. ಹಾಗೂ “ಭಾರತದ ಮೊದಲ ಮಹಿಳಾ ಶಿಕ್ಷಕಿ” ಎಂಬ ಬಿರುದನ್ನು ಬ್ರಿಟಿಷರಿಂದ ಪಡೆದಿದ್ದರು.

ಬ್ರಿಟಿಷರ ಆಳ್ವಿಕೆ ಸಂದರ್ಭದ ಕಾಲದಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣ ಸಿಗಬೇಕು ಎಂದರೆ ಅದು ಸವಾಲಿನ ಸಂಗತಿ. ಅಂಥ ಕೆಲಸವನ್ನು ಮಾಡಿ ತೋರಿಸಿದವರು ಸಾವಿತ್ರಿಬಾಯಿ. ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಬೇಕು, ಮಧ್ಯಾಹ್ನ ಊಟ ನೀಡಿದರೆ ಆ ನೆಪದಲ್ಲಾದರೂ ಮಕ್ಕಳು ಶಾಲೆಗೆ ಬರುತ್ತಾರೆ ಎಂಬುದನ್ನು ಅರಿತಿದ್ದ ಅವರು, ದೇಣಿಗೆ ಸಂಗ್ರಹಿಸಿ ಶಾಲೆಯಲ್ಲಿ ಊಟ ಹಾಕುತ್ತಿದ್ದರು. ಇಂಥ ಮಹಾನ್ ವ್ಯಕ್ತಿಯ ಕಥೆಯನ್ನು ಚಿತ್ರವನ್ನಾಗಿ ಮಾಡಿದ್ದಾರೆ.

 

 

 

 

Tags

Related Articles