ಸುದ್ದಿಗಳು

“ಸಾವಿತ್ರಿಬಾಯಿಫುಲೆ” ಅವರ ಜೀವನಚರಿತ್ರೆ ಆಧಾರಿತ ಚಿತ್ರ

ಕನ್ನಡದಲ್ಲಿ ಈಗಾಗಲೇ ಅನೇಕ ಮಹನೀಯರ ಜೀವನಾಧಾರಿತ ಚಿತ್ರಗಳು ಬಂದಿವೆ ಅದೇ ರೀತಿ ಬರುತ್ತಲೇ ಇವೆ. ಅದರಂತೆ ಇದೀಗ ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜೀವನಚರಿತ್ರೆ ಆಧಾರಿತ
ಸಿನಿಮಾ “ಸಾವಿತ್ರಿಭಾಯಿಫುಲೆ ಸದ್ಯದಲ್ಲೇ ತೆರೆಗೆ ಬರಲಿದೆ.

ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ತಾರ ಅವರು “ಸಾವಿತ್ರಿಭಾಯಿಫುಲೆ ಅವರ ಪಾತ್ರವನ್ನು ನಿರ್ವಹಿಸುತ್ತಿದ್ದು,
ಅವರ ಪತಿ ಜ್ಯೋತಿಬಾ ಫುಲೆ ಅವರ ಪಾತ್ರವನ್ನು ಸುಚೇಂದ್ರ ಪ್ರಸಾದ್ ಅವರು ನಿರ್ವಹಿಸಿದ್ದಾರೆ.

ಕನ್ನಡದ ಹೆಸರಾಂತ ಬರಹಗಾರ ಡಾ.ಸರಜೂ ಕಾಟ್ಕರ್ ಅವರ ‘ದೇವರಾಯ’ ಕಾದಂಬರಿಯು  ‘ಇಂಗಳೆ ಮಾರ್ಗ’ ಹೆಸರಿನಲ್ಲಿ ಸಿನಿಮಾವಾಗಿ ಮೂಡಿ ಬಂದಿತ್ತು. ಇದೀಗ ಮತ್ತೊಮ್ಮೆ ಅವರದೇ ಕಾದಂಬರಿಯನ್ನು ಆದರಿಸಿ ಈ ಚಿತ್ರವನ್ನು ಮಾಡಲಾಗುತ್ತಿದೆ.

ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ದೊಡ್ಡ ಕ್ರಾಂತಿಯನ್ನೇ ಹುಟ್ಟು ಹಾಕಿದ ಶಿಕ್ಷ ಕಿ ಸಾವಿತ್ರಿಬಾಯಿ ಫುಲೆಒಂದು ವಿಶ್ವವಿದ್ಯಾಲಯದಂತೆ ಕೆಲಸ ಮಾಡಿದ ಮಹಾನ್‌ ಸಾಧಕಿ. ಅವರ ದಿಟ್ಟ ಹೋರಾಟದ ಬದುಕು-ಬವಣೆ ಕೇಳುವ ಮೂಲಕ ನಮ್ಮಲ್ಲಿ ಕ್ರಾಂತಿಕಾರಿ ವಿಚಾರಗಳನ್ನು ತುಂಬಿದ್ದಾರೆ. ಹಾಗೂ “ಭಾರತದ ಮೊದಲ ಮಹಿಳಾ ಶಿಕ್ಷಕಿ” ಎಂಬ ಬಿರುದನ್ನು ಬ್ರಿಟಿಷರಿಂದ ಪಡೆದಿದ್ದರು.

ಶ್ರೀ ಅಮೋಘ ಸಿದ್ದೇಶ್ವರ ಕ್ರಿಯೇಷನ್ಸ್ ಬ್ಯಾನರ್ ನಡಿಯಲ್ಲಿ ಬಸವರಾಜ.ವಿ.ಭೂತಾಳಿ ಎಂಬುವವರು ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ವಿಶಾಲ್ ರಾಜ್ ಅವರು ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಇವರು ನಟ ಸುಚೇಂದ್ರ ಪ್ರಸಾದ್ ಅವರೊಂದಿಗೆ “ಇಂಗಳೆ ಮಾರ್ಗ’ ಹಾಗೂ ‘ಜುಲೈ 22 1947” ಚಿತ್ರಗಳನ್ನು ನಿರ್ದೇಶನ ಮಾಡಿದ್ದರು.

 

@ sunil javali

Tags

Related Articles

Leave a Reply

Your email address will not be published. Required fields are marked *