ಸುದ್ದಿಗಳು

ಕಾಮಿಡಿ ಮಹಾರಾಜ ಸಾಧುಕೋಕಿಲರಿಗೆ ಜನ್ಮದಿನದ ಶುಭಾಶಯಗಳ

ಅತಿ ವೇಗವಾಗಿ ಕೀ ಬೋರ್ಡ್ ವಾದಿಸುವವರಲ್ಲೊಬ್ಬರಾಗಿದ್ದರೆ.

ಬೆಂಗಳೂರು.ಮಾ.24: ಇಂದು ನಟ, ನಿರ್ದೇಶಕ ಕಾಮಿಡಿ ಮಹಾರಾಜ ಸಾಧುಕೋಕಿಲ ಜನ್ಮದಿನ. ಇವರು ನಟನೆ, ನಿರ್ದೇಶನ, ನಿರ್ಮಾಣ, ಸಂಗೀತ, ಹಿನ್ನೆಲೆ ಗಾಯನ.. ಹೀಗೆ ಎಲ್ಲಾ ವಿಭಾಗಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಿದ್ದಾರೆ.

ಇಂದು 53 ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ಸಾಧುಕೋಕಿಲರ ಮೂಲ ಹೆಸರು ಸಹಾಯ್ ಶೀಲನ್. ಇವರು ಹಾಸ್ಯ ಪಾತ್ರಗಳಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದು, ಉಪೇಂದ್ರ ನಿರ್ದೇಶನದ ‘ಶ್..’ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾದರು ಹಾಗೆಯೇ ‘ರಕ್ತಕಣ್ಣೀರು’ ಚಿತ್ರದ ಮೂಲಕ ನಿರ್ದೇಶಕರೂ ಆದರು.

ಮೂಲತಃ ಕ್ರಿಶ್ಚಿಯನ್ ಸಮುದಾಯದಲ್ಲಿ ಹುಟ್ಟಿದ ಸಾಧು ಕೋಕಿಲರ ತಂದೆ ಪೋಲೀಸ್ ಇಲಾಖೆಯಲ್ಲಿ ಪಿಟೀಲು ವಾದಕರಾಗಿದ್ದರು. ಇವರ ತಾಯಿ ಮತ್ತು ಅಕ್ಕ ಹಿನ್ನೆಲೆ ಗಾಯಕರಾಗಿದ್ದರು. ಇವರ ಅಣ್ಣ ಲಯೇಂದ್ರ ಕೂಡಾ ಕಾಮಿಡಿ ನಟರಾಗಿದ್ದು, ಜೊತೆಗೆ ಸಂಗೀತ ನಿರ್ದೇಶಕರೂ ಆಗಿದ್ದಾರೆ.

ಇನ್ನು ‘ಶ್’ ಚಿತ್ರದ ಮೂಲಕ ಸಂಗೀತಕಾರರಾಗಿ ವೃತ್ತಿ ಆರಂಭಿಸಿದ ಸಾಧುಕೋಕಿಲ ‘ರಕ್ತಕಣ್ಣೀರು’, ‘ಸುಂಟರಗಾಳಿ’, ‘ಇಂತಿ ನಿನ್ನ ಪ್ರೀತಿಯ’, ‘ನಂಬರ್ 1’, ‘ಮಾಸ್ತಿ ಗುಡಿ’, ‘ಶೌರ್ಯ’, ‘ಎದೆಗಾರಿಕೆ’, ‘ಮೆಜೆಸ್ಟಿಕ್’ ಸೇರಿದಂತೆ ಹಲವು ಚಿತ್ರಗಳಿಗೆ ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ. ಹಾಗೆಯೇ ಇವರು ಭಾರತದಲ್ಲಿ ಅತಿ ವೇಗವಾಗಿ ಕೀ ಬೋರ್ಡ್ ವಾದಿಸುವವರಲ್ಲೊಬ್ಬರಾಗಿದ್ದರೆ.

ಹೀಗೆ ಕನ್ನಡ ಚಿತ್ರರಂಗದಲ್ಲಿ ಹಾಸ್ಯ ನಟನಾಗಿ ಅನೇಕ ಚಿತ್ರಗಳಲ್ಲಿ ಅಭಿನಯಸಿ ಜನರ ಮನಸ್ಸನ್ನು ಗೆದ್ದಿರುವ ಇವರಿಗೆ ಕೋಕಿಲ ಎನ್ನುವ ಹೆಸರನ್ನು ಉಪೇಂದ್ರ ಅವರು ಇಟ್ಟಿದ್ದಾರೆ. 1993 ರಲ್ಲಿ ಇವರು ಸಲೀನ ಎನ್ನುವರನ್ನು ವಿವಾಹವಾದರು.ಇವರು ಹೀಗೆಯೇ ಪ್ರೇಕ್ಷಕರನ್ನು ಮನರಂಜಿಸುತ್ತಿರಲಿ, ನೂರು ಕಾಲ ನಗು ನಗುತ್ತಾ ಬಾಳಲಿ ಎಂದು ಬಾಲ್ಕನಿ ನ್ಯೂಸ್ ಶುಭ ಹಾರೈಸುತ್ತದೆ.

‘ಯಜಮಾನ’ನೊಂದಿಗೆ ಮಿಂಚುತ್ತಿರುವ ‘ಕಿರಿಕ್’ ಹುಡ್ಗಿ ರಶ್ಮಿಕಾ ಕಟೌಟ್..!!!

#sadhukokila, #birthday, #filmnews, #balkaninews filmnews, #kannadasuddigalu, #upendra, #raktakanneru

Tags