ಸುದ್ದಿಗಳು

‘ಸಾಗುತ ದೂರ ದೂರ’ ಚಿತ್ರಕ್ಕೆ ಸಾಥ್ ನೀಡಿದ ನಟಿ ಅನುಪ್ರಭಾಕರ್

ಬೆಂಗಳೂರು.ಮೇ.14: ಸದ್ಯ ಕನ್ನಡ ಸಿನಿಮಾ ರಂಗದಲ್ಲಿ ವಿಭಿನ್ನ ಟೈಟಲ್ ಗಳು ಸಖತ್ ಸದ್ದು ಮಾಡುತ್ತಲೇ ಇವೆ. ಅಷ್ಟೆ ಅಲ್ಲ ಈ ಸಿನಿಮಾಗಳು ಕೆಲವೊಮ್ಮೆ ಟೈಟಲ್ ನಿಂದಲೇ ಸಿನಿಮಾ ಯಶಸ್ವಿಯಾಗಿವೆ. ಇದೀಗ ಅದೇ ಸಾಲಿನಲ್ಲಿ ಅದೇ ನಂಬಿಕೆಯಲ್ಲಿ ತೆರೆ ಕಾಣೋದಿಕ್ಕೆ ರೆಡಿಯಾಗಿದೆ ‘ಸಾಗುತ ದೂರ ದೂರ ಸಿನಿಮಾ’. ಇತ್ತೀಚೆಗೆ ಈ ಸಿನಿಮಾ ಆಡಿಯೋ ಲಾಂಚ್ ಕಾರ್ಯಕ್ರಮ ನಡೆದಿದೆ.

ಅಮ್ಮನಿಗೆ ಸನ್ಮಾನ ಮಾಡಿದ ನಟಿ

ಸದ್ಯ ‘ಸಾಗುತ ದೂರ ದೂರು’ ಸಿನಿಮಾದ ತಾಯಿ ಸೆಂಟಿಮೆಂಟಲ್ ಹಾಡೊಂದನ್ನು ರಿಲೀಸ್ ಮಾಡಿದ್ದಾರೆ ನಟಿ ಅನು ಪ್ರಭಾಕರ್. ಇನ್ನು ಈ ಆಡಿಯೋ ಕಾರ್ಯಕ್ರಮಕ್ಕೆ ಗಾಯತ್ರಿ ಪ್ರಭಾಕರ್ ಕೂಡ ಆಗಮಿಸಿದ್ದರು. ಥ್ರಿಲರ್ ಹಾಗೂ ಸಸ್ಪೆನ್ಸ್ ಸಿನಿಮಾ ಇದಾಗಿದೆ. ಇನ್ನು ಇದೇ ವೇಳೆ ನಟಿ ಅನು ಫ್ರಭಾಕರ್ ಸಿನಿಮಾ ತಂಡಕ್ಕೆ ವಿಶ್ ಮಾಡಿದರು. ಇನ್ನು ವೇದಿಕೆ ಮೇಲೆ ಅವರ ತಾಯಿಗೆ ಸನ್ಮಾನ ಕೂಡ ಮಾಡಿದ್ರು.

ವಿಭಿನ್ನ ಕಥೆಯ ಸಿನಿಮಾ

ಸಾಗುತಾ ದೂರದೂರ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ಅಪೇಕ್ಷಾ ಪವನ್ ಒಡೆಯರ್, ನವೀನ್ ಕುಮಾರ್, ಮಹೇಶ್ ಸಿದ್ದು ಅಭಿನಯಿಸಿದ್ದಾರೆ. ಇನ್ನು ಈ ಚಿತ್ರಕ್ಕೆ ಮಣಿಕಾಂತ್ ಖದ್ರಿ ಮ್ಯೂಸಿಕ್ ಮಾಡಿದ್ದು, ಕರ್ನಾಟಕದಲ್ಲೇ ಸುಮಾರು 200 ವಿಭಿನ್ನ ಲೊಕೇಷನ್‌ ಗಳಲ್ಲಿ ಶೂಟಿಂಗ್ ಮಾಡಿರೋದು ಚಿತ್ರದ ವಿಶೇಷತೆಯಾಗಿದೆ. ಚಿತ್ರಕ್ಕೆ ಅಮಿತ್ ಪೂಜಾರಿ ಬಂಡವಾಳ ಹೂಡಿದ್ದಾರೆ. ಸದ್ಯ ಬಿಡುಗಡೆಗೆ ರೆಡಿಯಾಗಿರುವ ಈ ಚಿತ್ರ ಕುತೂಹಲದ ಜೊತೆಗೆ ನಿರೀಕ್ಷೆ ಹೆಚ್ಚಿಸಿದೆ.

‘ಡಾಟರ್ ಆಫ್ ಪಾರ್ವತಮ್ಮ’ ಟ್ರೇಲರ್ ರಿಲೀಸ್: ಚಿತ್ರಕ್ಕೆ ಸಾಥ್ ನೀಡಿದ ‘ಡಾಲಿ’ ಧನಂಜಯ್

#saguthadooradoora, #anuprabhakar, #balkaninews #filmnews, #kannadasuddigalu

Tags

Related Articles