ಸುದ್ದಿಗಳು

ರಂಜಾನ್ ಮಾಸಕ್ಕಾಗಿ ಸಿನಿಮಾ ಆಫರ್ ಬಿಟ್ಟ ನಟಿ ಸಹೇರಾ…!!!

ಕಳೆದ ಕೆಲವು ವರ್ಷಗಳಿಂದ ರೂಪದರ್ಶಿಯಾಗಿ ಕೆಲಸ ಮಾಡುತ್ತಿರುವ ನಟಿ ಸಹೇರಾ ಅಫ್ಜಾ ಸದ್ಯ ಕನ್ನಡದಲ್ಲಿ‘ಬೀಗ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಂದ ಹಾಗೆ ಇವರು ಕನ್ನಡ ಸೇರಿದಂತೆ ತೆಲುಗು ಭಾಷೆಯಲ್ಲೂ ನಟಿಸುತ್ತಿದ್ದಾರೆ.

ಇನ್ನು ನಟಿ ಸಹೇರಾ ಬಗ್ಗೆ ಹೇಳುವುದಾದರೆ, ಇವರಿಗೆ ಸಿನಿಮಾಗಳಲ್ಲಿ ಹೇರಳವಾದ ಅವಕಾಶಗಳಿವೆ, ಆದರೆ, ರಂಜಾನ್ ಮಾಸಕ್ಕಾಗಿ ಬ್ರೇಕ್ ತೆಗೆದುಕೊಂಡಿದ್ದು, ಅರಸಿ ಬಂದ ಸಿನಿಮಾ ಅವಕಾಶವನ್ನು ಕೈ ಬಿಟ್ಟಿದ್ದಾರೆ.

‘ಹೌದು, ನಾನು ಈ ಹಿಂದೆ ತಲುಗಿನ ‘ಕರ್ತ ಕರ್ಮ ಕ್ರಿಯಾ’ ಸಿನಿಮಾದಲ್ಲಿ ನಟಿಸಿದ್ದೆ, ಆದಾದ ಬಳಿಕ ಆಲ್ಬಂ ಒಂದರಲ್ಲಿ ಕಾಣಿಸಿಕೊಂಡೆ. ಈಗ ತಮಿಳಿನ ಚಿತ್ರವೊಂದರ ಚಿತ್ರೀಕರಣ ಆರಂಭವಾಗಬೇಕಿತ್ತು. ಆದರೆ ರಂಜಾನ್ ಹಬ್ಬದಲ್ಲಿ ಕುಟುಂಬದ ಜೊತೆಗೆ ಇರಬೇಕು ಎಂದು ಬ್ರೇಕ್ ತೆಗೆದುಕೊಂಡಿದ್ದೇನೆ’ ಎಂದು ಹೇಳುತ್ತಾರೆ ಸಹೇರಾ.

ಅಂದ ಹಾಗೆ ಸಹೇರಾ ‘ಬೀಗ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟಿದ್ದು, ‘ಕಥೆ ಚೆನ್ನಾಗಿದ್ದರೆ ಮಾತ್ರ ಅವರು ಓಕೆ ಮಾಡುತ್ತಾರಂತೆ. ‘ಭಾರತದಲ್ಲಿರುವ ಎಲ್ಲಾ ಭಾಷೆಯಲ್ಲಿಯೂ ನಟಿಸಲು ನಾನು ಸಿದ್ಧಳಿದ್ದೇನೆ. ಕಥೆ ಹಾಗೂ ಮತ್ತು ನನ್ನ ಪಾತ್ರ ನನಗೆ ಮುಖ್ಯವಾಗಿರುತ್ತದೆ’ ಎನ್ನುತ್ತಾರೆ.

ಅಂದ ಹಾಗೆ ‘ಬೀಗ’ ಚಿತ್ರವನ್ನು ಶ್ರೀ ನಂದನ್ ನಿರ್ದೇಶನ ಮಾಡುತ್ತಿದ್ದು, ಇವರು ಈ ಹಿಂದೆ ‘ಅಗ್ರಜ’ ಮತ್ತು ‘ಲೀ’ ಚಿತ್ರಗಳನ್ನು ಮಾಡಿದ್ದರು. ಇವರಿಗಿದು ಮೂರನೇ ಚಿತ್ರ. ಮೊದಲೆರೆಡು ಕಮರ್ಶಿಯಲ್ ಚಿತ್ರ ಮಾಡಿದ್ದ ಇವರು ಮೂರನೇ ಚಿತ್ರದಲ್ಲಿ ಥ್ರಿಲ್ಲರ್ ಅಂಶಗಳುಳ್ಳ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಕಿರಿಕ್ ಕೀರ್ತಿ ನಟನೆಯ ‘ಸಿಲಿಂಡರ್ ಸತೀಶ’ ಟೀಸರ್ ಬಿಡುಗಡೆ

#beega, #movie, #saheraafza, #balkaninews #filmnews, #kannadasuddigalu

Tags