ಸುದ್ದಿಗಳು

‘ಸಾಹೋ’ ಚಿತ್ರದ ರೊಮ್ಯಾನ್ಸ್ ಸೀನ್ ಲೀಕ್!!!

ಹೈದರಾಬಾದ್,ಏ.15: ಬಾಹುಬಲಿಯ ನಂತರ, ತೆಲುಗು ಸೂಪರ್ಸ್ಟಾರ್ ಪ್ರಭಾಸ್ ಅಭಿಮಾನಿಗಳು ಸಾಹಸಮಯ ಕಥೆಯ ಅವತಾರದಲ್ಲಿ ನೋಡಲು ಕಾತುರರಾಗಿದ್ದಾರೆ. ಹೌದು ಈಗಾಗಲೇ ‘ಸಾಹೋ’ ಚಿತ್ರದಲ್ಲಿ ಪ್ರಭಾಸ್ ನಟಿಸುತ್ತಿದ್ದು ಈ ಚಿತ್ರ ಮೇಲೆ ಬಹಳಷ್ಟು ನಿರೀಕ್ಷೆಗಳು ಇವೆ.. ಶ್ರದ್ಧಾ ಕಪೂರ್ ಈ ಚಿತ್ರದ ಮೂಲಕ ಟಾಲಿವುಡ್ ಗೂ ಪಾದಾರ್ಪಣೆ ಮಾಡುತ್ತಿದ್ದಾರೆ.

ಈಗ ಸಾಹೋ ಚಿತ್ರದ ಸೆಟ್ ನಿಂದ  ಫೋಟೋ ಲೀಕ್ ಆಗಿದ್ದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ… ಪ್ರಭಾಸ್ ಮತ್ತು ಶ್ರದ್ಧಾ ಕಪೂರ್ ಪರಸ್ಪರರ ಕಣ್ಣುಗಳನ್ನು ನೋಡುತ್ತಿದ್ದಾರೆ. ಇಬ್ಬರ ನಡುವಿನ ಕೆಮೆಸ್ಟ್ರಿ ಬಹಳ ಚೆನ್ನಾಗಿ ಮೂಡಿ ಬಂದಂತಿದೆ..

ಬಾಹುಬಲಿ ನಂತರ ಥ್ರಿಲ್ಲರ್ ಕಥೆ

ಫೋಟೋ ಹೇಳುವಂತೆ, ಇಬ್ಬರು ಕೂಡ ಒಂದು ರೊಮ್ಯಾಂಟಿಕ್ ಸೀನ್ ನನ್ನು ಚಿತ್ರೀಕರಿಸುತ್ತಿದ್ದಾರೆ ಎಂದು ತಿಳಿದು ಬರುತ್ತಿದೆ.. ಈ ತಂಡವು ಪ್ರಸ್ತುತ ಚಿತ್ರೀಕರಣದ ಅಂತಿಮ ಹಂತದಲ್ಲಿದೆ. ಇತ್ತೀಚೆಗೆ ಮಿಡ್ ಡೇ ಸಂದರ್ಶನವೊಂದರಲ್ಲಿ ಪ್ರಭಾಸ್ ಮಾತನಾಡುತ್ತಾ, “ಜನರು ಸಾಹೋದಲ್ಲಿನ ಆಕ್ಷನ್- ಅವತಾರವನ್ನು ನೋಡಲು ಬಯಸುತ್ತಾರೆ. “ಬಾಹುಬಲಿ ನಂತರ ಥ್ರಿಲ್ಲರ್ ಕಥೆ ಇದಾಗಿದ್ದು, ಜನರು ಆಕ್ಷನ್ ಸಿನೆಮಾದಲ್ಲಿ ನನ್ನನ್ನು ನೋಡಬೇಕೆಂದು ನಾನು ಭಾವಿಸುತ್ತೇನೆ, ಬಾಹುಬಲಿಯ ನಂತರ ಅವರು ಈ ಚಿತ್ರವನ್ನು ಇಷ್ಟಪಡಬಹುದು” ಎಂದು ಪ್ರಭಾಸ್ ಹೇಳಿದರು.

ಆಗಸ್ಟ್ 15 ರಂದು ಬಿಡುಗಡೆ

ಸಾಹೋ ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ಬಿಡುಗಡೆಯಾಗಲಿದೆ. ಜಾಕಿ ಶ್ರಾಫ್, ಚುಂಕಿ ಪಾಂಡೆ, ನೀಲ್ ನಿತಿನ್ ಮುಖೇಶ್ ಮತ್ತು ಮಂಡಿರಾ ಬೇಡಿ ಮೊದಲಾದವರು ಸಹ ಸಾಹೋದಲ್ಲಿ ನಟಿಸಿದ್ದಾರೆ. ಆಗಸ್ಟ್ 15 ರಂದು ಭಾರತದಲ್ಲಿ ಆಕ್ಷನ್-ಥ್ರಿಲ್ಲರ್ ಚಿತ್ರ ಸಾಹೋ ಬಿಡುಗಡೆಯಾಗುತ್ತದೆ.

ನಗು ಮುಖದ ಸುಂದರ ಚೆಲುವೆ ತನುಜಾ ಮೋಹನ್

#bollywood #tollywood #sahoo #kollywood #prabhas

Tags