ಸುದ್ದಿಗಳು

ಸಾಯಿಪಲ್ಲವಿ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ನಿರ್ಮಾಪಕರು

ಹೈದ್ರಾಬಾದ್, ಜ.12: ‘ಪ್ರೇಮಂ’ ಚಿತ್ರದ ಮೂಲಕ ಪ್ರೇಕ್ಷಕರಿಗೆ ಮೋಡಿ ಮಾಡಿದ ಸುಂದರಿ ಸಾಯಿ ಪಲ್ಲವಿ ಅಭಿನಯದ ಎರಡು ಚಿತ್ರಗಳು ಕಳೆದ ವರ್ಷದ ಅಂತ್ಯದಲ್ಲಿ ಬಿಡುಗಡೆಯಾಯ್ತು. ತಮಿಳು ಚಿತ್ರ ‘ಮಾರಿ 2’   ಹಾಗೂ ತೆಲುಗಿನ ‘ಪಡಿ ಪಡಿ ಲೆಚ್ಚೆ ಮನಸು’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಡಿಸೆಂಬರ್ 21ರಂದು ಬಿಡುಗಡೆಯಾದ ‘ಮಾರಿ 2’ ಚಿತ್ರದಲ್ಲಿ ಸಾಯಿ ಪಲ್ಲವಿ ಧನುಷ್ ಜೊತೆಗೆ ತೆರೆ ಹಂಚಿಕೊಂಡರೆ, ಚಿತ್ರಕ್ಕೆ ಬಾಲಾಜಿ ಮೋಹನ್ ಆಕ್ಷನ್ ಕಟ್ ಹೇಳಿದ್ದರು.

ಇನ್ನೂ ತೆಲುಗಿನ ‘ಪಡಿ ಪಡಿ ಲೆಚ್ಚೆ ಮನಸು’ ಚಿತ್ರಕ್ಕೆ ಹನು ರಾಘವಪುಡಿ ನಿರ್ದೇಶನ ಮಾಡಿದ್ದರೆ, ಶಾರ್ವಾನಂದ ಹಿರೋ ಆಗಿ ಅಭಿನಯಿಸಿದ್ದರು. ಆದರೆ ತೆಲುಗಿನ ‘ಪಡಿ ಪಡಿ ಲೆಚ್ಚೆ ಮನಸು’ ಚಿತ್ರ ಮಾತ್ರ ದುರಂತ ಅಂತ್ಯಕಂಡಿದೆ. ಹೀಗಾಗಿ ನಿರ್ಮಾಪಕರ ಬೆನ್ನುತಟ್ಟಲು ಮುಂದಾಗಿರುವ ಸಾಯಿ ಪಲ್ಲವಿ ಇದೀಗ ಒಂದು ಮಹತ್ ಕಾರ್ಯ ಮಾಡಿದ್ದು, ಟಾಲಿವುಡ್ ನಲ್ಲಿ ಮತ್ತೆ ಟಾಕ್ ಆಫ್ ದಿ ಟೌನ್ ಆಗಿದ್ದಾರೆ.‘ಮಾರಿ 2’ ಗೆ ಉತ್ತಮ ಪ್ರತಿಕ್ರಿಯೆ

ಅಂದಹಾಗೆ ತಮಿಳಿನ ‘ಮಾರಿ 2’ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯದೇ ಇದ್ದರೂ, ಚಿತ್ರದ ಗಳಿಕೆ ಉತ್ತಮವಾಗಿಯೇ ಇದೆ. ಹಾಕಿದ ಬಂಡವಾಳಕ್ಕೆ ಮೋಸ ಇಲ್ಲ ಎಂಬಂತೆ ಪ್ರೇಕ್ಷಕರು ಥಿಯೇಟರ್ ನತ್ತ ಬಂದು ಚಿತ್ರ ವೀಕ್ಷಿಸುತ್ತಿದ್ದಾರೆ. ಇನ್ನೂ ‘ಪಡಿ ಪಡಿ ಲೆಚ್ಚೆ ಮನಸು’ ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಳಾಗಿತ್ತು.

ಆದರೆ ದುರದೃಷ್ಟ ಎಂಬಂತೆ ಚಿತ್ರ ಅಷ್ಟೊಂದು ಉತ್ತಮ ಪ್ರದರ್ಶನ ಕಾಣುತ್ತಿಲ್ಲ. ಇದು ಚಿತ್ರತಂಡಕ್ಕೆ ಸಿಕ್ಕಾಪಟ್ಟೆ ಬೇಸರವನ್ನುಂಟು ಮಾಡಿದೆಯಂತೆ. ಈ ನಡುವೆ ಚಿತ್ರನಿರ್ಮಾಪಕ ಸುಧಾಕರ್ ಬಾಕಿ ಉಳಿದ ಹಣವನ್ನು ಹಿಂದಿರುಗಿಸುವ ಸಲುವಾಗಿ ನಟಿಯ ಮನೆಗೆ ತೆರಳಿದ್ದರಂತೆ. ಅಂದಹಾಗೆ ನಿರ್ಮಾಪಕರು 40 ಲಕ್ಷ ಬಾಕಿ ಹಣವನ್ನು ನಟಿಗೆ ನೀಡಬೇಕಿತ್ತಂತೆ.  ಆದರೆ ಇದಕ್ಕೆ ನಟಿ ನೋ ಎಂದಿದ್ದಾರೆ ಎನ್ನಲಾಗುತ್ತಿದೆ. ಹಣವನ್ನು ತೆಗೆದುಕೊಳ್ಳಲು ಸಾಯಿಪಲ್ಲವಿ ನಿರಾಕರಿಸಿದ್ದು. ಚಿತ್ರ ಗಳಿಕೆಯಲ್ಲಿ ಸೋತು ಹೋಗಿದ್ದರಿಂದ ತಾನು ಹಣ ಪಡೆಯುತ್ತಿಲ್ಲ ಎಂದವರು ಹೇಳಿದ್ದಾರೆ ಎನ್ನಲಾಗಿದೆ.

ಇನ್ನೂ ಸಾಯಿಪಲ್ಲವಿ ಹಣ ಪಡೆಯಲು ನಿರಾಕರಿಸಿದ್ದರಿಂದ ನಿರ್ಮಾಪಕರು, ಆಕೆಯ ಪೋಷಕರಿಗೆ ಕರೆ ಮಾಡಿ ಹಣ ಪಡೆಯುವಂತೆ ಕೋರಿಕೊಂಡಿದ್ದಾರೆ. ಆದರೆ ಆಕೆಯ ಪೋಷಕರು ಕೂಡ ಇದನ್ನು ನಿರಾಕರಿಸಿದ್ದಾರೆ ಎನ್ನಲಾಗಿದೆ. ಅದೇನೆ ಇರಲಿ ಸಾಯಿಪಲ್ಲವಿ ಅವರ ಈ ನಡೆ ಇದೀಗ ಟಾಲಿವುಡ್ ನಲ್ಲಿ ಟೌಕ್ ಆಫ್ ದಿ ಟೌನ್ ಆಗಿದೆ.

#saipallavi #saipallavimovies #tollywood #kollywood #saipallavipadipadilechemanasu #padipadilechemanasumovie #dhanushandsaipallavi #balkaninews

Tags