ಸುದ್ದಿಗಳು

ಶಾಕಿಂಗ್ ನ್ಯೂಸ್ ನೀಡಿದ್ರು ನಟಿ ಸಾಯಿಪಲ್ಲವಿ

ಹೈದ್ರಾಬಾದ್, ಫೆ.11:

ಸಾಯಿಪಲ್ಲವಿ, ಸದ್ಯಕ್ಕೆ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಅತ್ಯಂತ ಬೇಡಿಕೆ ಉಳಿಸಿಕೊಂಡಿರುವ ನಟಿ. ತಮ್ಮ ಅಭಿನಯ ಹಾಗೂ ಎಕ್ಸ್ ಪ್ರೇಷನ್ ನಿಂದಲೇ ಗಮನ ಸೆಳೆದಿರುವ ಸಾಯಿಪಲ್ಲವಿ ತನ್ನ ಮೊಣಚು ನೋಟದಿಂದಲೇ ಅಭಿಮಾನಿಗಳನ್ನು ಸೆಳೆಯುತ್ತಾರೆ. ಫಿಢಾ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಯಾದ ಈಕೆ ಬಳಿಕ ಮಿಡಲ್ ಕ್ಲಾಸ್ ಅಬ್ಬಾಯಿ, ಕನಮ್  ಮತ್ತು ಪಡಿ ಪಡಿ ಲೆಚ್ಚಿ ಮನಸ್ಸು ಚಿತ್ರದ ಮೂಲಕ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾದರು. ಸದ್ಯಕ್ಕೆ ಸೂರ್ಯ ನಟನೆಯ ಎನ್ ಜಿಕೆ ಚಿತ್ರದಲ್ಲಿ ಬ್ಯುಸಿಯಾಗಿರುವ ಸಾಯಿ ಪಲ್ಲವಿಗೆ ಸೆಲ್ವಾ ರಾಘವನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮಲೆಯಾಲಂ ನ ಇನ್ನೂ ಹೆಸರಿಡದ ಚಿತ್ರದಲ್ಲೂ ಸಾಯಿಪಲ್ಲವಿ ನಟಿಸುತ್ತಿದ್ದಾರೆ.

ಮದುವೆ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಸಾಯಿಪಲ್ಲವಿ

ಸಾಯಿಪಲ್ಲವಿ ನೇರಾ ನಡೆನುಡಿಯ ನಟಿ. ಆಕೆ ಮುಚ್ಚುಮರೆಯಿಲ್ಲದೆ ಮಾತನಾಡುತ್ತಾರೆ. ಇತ್ತೀಚೆಗೆ ಚಿತ್ರರಗದಲ್ಲಿನ ಮೀ ಟೂ ಅಭಿಯಾನದ ಬಗ್ಗೆಯೂ ಹೇಳಿದ್ದರು. ಅಷ್ಟೇ ಅಲ್ಲದೆ ಪಡಿ ಪಡಿ ಲೆಚ್ಚೆ ಮನಸ್ಸು ಚಿತ್ರ ಸೋತಾಗ ತಾವು ಸಂಭಾವಣೆ ಪಡೆಯದೆ ನಿರ್ಮಾಪಕರ ಸಂಕಷ್ಟದಲ್ಲಿ ಹೆಗಲು ಕೊಡುವ ಕೆಲಸ ಮಾಡಿದ್ದರು.  ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸಾಯಿಪಲ್ಲವಿ ಸದ್ಯಕ್ಕ ಮದುವೆ ಬಗ್ಗೆ ಯಾವುದೇ ಆಲೋಚನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೆ ಇದೀಗ ಮದುವೆಯ ಬಗ್ಗೆ ಸ್ಪಷ್ಟವಾದ ಮಾತೊಂದನ್ನು ಅವರು ಹೇಳಿದ್ದು ಅಚ್ಚರಿಕೆಗೆ ಕಾರಣವಾಗಿದೆ.

ತಾವು ಜೀವನ ಪೂರ್ತಿ ಮದುವೆಯಾಗದೆ ಹೀಗೆ ಉಳಿದುಕೊಳ್ಳುವುದಾಗಿ ಸಾಯಿಪಲ್ಲವಿ ಹೇಳಿದ್ದಾರೆ. ನನಗೆ ಮದುವೆಯಾಗುವ ಆಸಕ್ತಿ ಇಲ್ಲ. ಮದುವೆಯಾದರೆ ನನ್ನ ತಂದೆ ತಾಯಿಯನ್ನು ನೋಡಿಕೊಳ್ಳಲು ಸಾದ್ಯಾವಾಗುವುದಿಲ್ಲ. ಹೀಗಾಗಿ ಪೋಷಕರನ್ನು ನೋಡಿಕೊಳ್ಳುವ ಸಲುವಾಗಿ ಮದುವೆಯಾಗುವುದಿಲ್ಲ ಎಂದಿದ್ದಾರೆ. ನಾನು ಯಾರನ್ನು ಮದುವೆಯಾಗಬಾರದು ಎಂದು ನಿರ್ಧರಿಸಿದ್ದೇನೆ. ನನ್ನ ಪೋಷಕರೊಂದಿಗೆ ನನಗೆ ಇರಲು ಇಷ್ಟ. ಮದುವೆಯಾದರೆ ಅವರ ಬಗ್ಗ ಹೆಚ್ಚಿನ ಕಾಳಜಿ ವಹಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಜೀವನಪೂರ್ತಿ ಮದುವೆಯಾಗದೆ ಇರಲು ನಿರ್ಧರಿಸಿರುವುದಾಗಿ ಸಾಯಿಪಲ್ಲವಿ ಸ್ಪಷ್ಟವಾಗಿ ತಿಳಿಸಿದ್ದಾರೆ.

#saipallavi #tollywood #telugumovies #balkaninews #saipallavimovies #saipallaviteluguandtamilmovies #saipallavipremammovie

Tags