ಸುದ್ದಿಗಳು

ಫೋಟೋಗ್ರಾಫರ್ ಗಳ ವಿರುದ್ಧ ಗರಂಗೊಂಡ ಸೈಫ್ ಆಲಿ ಖಾನ್

ಮುಂಬೈ, ಏ.17:

ಬಾಲಿವುಡ್ ನಟ ಸೈಫ್ ಆಲಿ ಖಾನ್ ಇದೀಗ  ಫೋಟೋಗ್ರಾಫರ್‌ಗಳ ವಿರುದ್ದ ಕೋಪಗೊಂಡಿದ್ದಾರೆ. ಸೈಫ್, ಕರೀನಾ ದಂಪತಿ ತಮ್ಮ ಮಗ ತೈಮೂರ್‌ ಜತೆಗೆ ವಿಮಾನ ನಿಲ್ದಾಣಕ್ಕೆ ಬಂದಿದ್ದಾಗ ಈ ಘಟನೆ ನಡೆದಿದೆ.

ಸೈಫ್ ಆಲಿ ಖಾನ್ ತೈಮೂರ್ ನನ್ನು ಹೆಗಲ ಮೇಲೆ ಕೂರಿಸಿಕೊಂಡು ವಿಮಾನ ನಿಲ್ದಾಣದಲ್ಲಿ ಹೋಗುತ್ತಿದ್ದರು. ಆಗ ಅಲ್ಲೇ ಇದ್ದ ಫೋಟೋಗ್ರಾಫರ್‌ ಗಳು ತೈಮೂರ್ ನ ಫೋಟೋಗಳನ್ನು ಕ್ಲಿಕ್ಕಿಸಿದರು. ಈ ಘಟನೆಯಿಂದಾಗಿ ಫೋಟೋಗ್ರಾಫರ್‌ಗಳ ಮೇಲೆ ಸೈಫ್ ಕೋಪಗೊಂಡಿದ್ದಾರೆ. “ನಿಲ್ಲಿಸಿ. ಫೋಟೋಗಳನ್ನು ತೆಗೆಯಬೇಡಿ. ಕ್ಯಾಮೆರಾದ  ಲೈಟ್‌ ನಿಂದಾಗಿ ನನ್ನ ಮಗ ಕುರುಡನಾಗುತ್ತಾನೆ” ಎಂದಿದ್ದಾರೆ.

ಈ ಘಟನೆಯಿಂದ ಬೇಸೆತ್ತ ಫೋಟೋಗ್ರಾಫರ್‌ ಗಳು ಕಡೆಗೆ ಕರೀನಾ, ಸೈಫ್‌ರನ್ನು ಪೋಸ್ ನೀಡುವಂತೆ ಮನವಿ ಮಾಡಿದರು. “ನಿಮಗೆ ನಮ್ಮ ಫೋಟೋಗಳು ಬೇಕಿದ್ದರೆ ತೆಗೆದುಕೊಳ್ಳಿ” ಎಂದು ಹೇಳಿದ್ದ ಸೈಫ್ ಸೀದಾ ವಿಮಾನ ನಿಲ್ದಾಣದ ಒಳಗೆ ಹೊರಟು ಹೋಗಿದ್ದಾರೆ. ಬಾಲಿವುಡ್ ನ ಚೆಲುವೆ ಎಂದೇ ಕರೆಸಿಕೊಳ್ಳುವ ಕರೀನಾ ಕಪೂರ್ ಮಾತ್ರ ಫೋಟೋಗಳಿಗೆ ಪೋಸ್ ನೀಡಿ ಹೊರಟು ಹೋದರು.

ಈ ಸಂದರ್ಭದಲ್ಲಿ ಮಾಧ್ಯಮಗಳು ತೆಗೆದಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಕನಸುಗಾರನ ಹಿಂದಿರುವ ದೊಡ್ಡ ಶಕ್ತಿ ನಮ್ಮ ತಾತ: ಮನೋರಂಜನ್ ರವಿಚಂದ್ರನ್

#balkaninews #bollywood #saifalikhan #saifalikhanmovies #taimur #saifalikhanandtaimur

Tags

Related Articles