ಸುದ್ದಿಗಳು

ಸೈಫ್ ಅಲಿ ಖಾನ್ ಮಗಳಿಂದ ಫೋಟೋಗ್ರಾಫರ್ ಮೇಲೆ ಗರಂ

ಪೋಟೋಗ್ರಾಫರ್ ಗೆ ಕ್ಲಾಸ್ ತೆಗೆದುಕೊಂಡ ಸಾರಾ

ಮುಂಬೈ, ಸೆ.21: ಅನುಮತಿ ಇಲ್ಲದೆ ಫೋಟೋ ತೆಗೆಯಲು ಮುಂದಾದ ಫೋಟೋಗ್ರಾಫರ್ ಗೆ ಸಾರಾ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಸೈಫ್ ಅಲಿ ಖಾನ್ ಪುತ್ರಿ ಸಾರಾ ಸಿನಿಮಾ ವಿಚಾರಕ್ಕೆ ಬಿಟ್ಟು ಬೇರೆ ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ಫೋಟೋ ವಿಚಾರದ ಸಲುವಾಗಿ ಫೋಟೋಗ್ರಾಫರ್ ಮೇಲೆ ನಟಿ ಸಾರಾ ಗರಂ ಆಗಿ ಕೂಗಾಡಿದ್ದಾರೆಂದು ವರದಿಯಾಗಿವೆ.

ಫೋಟೋ ವಿಚಾರಕ್ಕೆ ಗರಂ

ಹೌದು, ಡಾನ್ಸ್ ಕ್ಲಾಸ್ ಗೆ ಹೋಗುತ್ತಿದ್ದ ಸಾರಾ. ನೃತ್ಯ ತರಗತಿಯನ್ನು ಮುಗಿಸಿ ವಿಶ್ರಾಂತಿಗೆಂದು ಕುಳಿತಿದ್ದರಂತೆ. ಈ ವೇಳೆ ಅನುಮತಿ ಪಡೆಯದೇ ಫೋಟೋಗ್ರಾಫರ್ ಒಬ್ಬ ಫೋಟೋ ಕ್ಲಿಕ್ಕಿಸಲು ಮುಂದಾಗಿದ್ದಾರೆ. ಈ ವೇಳೆ ಗರಂ ಆದ ಸಾರಾ ಏನ್ ಮಾಡ್ತಿದ್ದೀರಾ ಅಂತಾ ಗರಂ ಆಗಿದ್ದಾರಂತೆ. ಆಪ್ ಕ್ಯಾ ಕರ್ ರಹೇ ಹೋ ಅಂತಾ ಕೂಗಾಡಿದ್ದಾರೆ  ಸಾರಾ.ಕ್ಷಮೆ ಕೇಳಿದ ಸಾರ

ಇನ್ನು ಅನುಮತಿ ಪಡೆಯದೇ ಹೇಗೆ ಫೋಟೋ ತೆಗೆಯುತ್ತಿದ್ದೀರಾ ಅಂತಾ ಆ ಫೋಟೋಗ್ರಾಫರ್ ಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಇನ್ನು ಇವರ ವರ್ತನೆ ಹಾಗೂ ಕೂಗಾಡುವುದನ್ನು ಕಂಡ ಇನ್ನಿತರ ಸ್ಥಳೀಯರು  ವಿಡಿಯೋ ಮಾಡುತ್ತಿದ್ದಾರೆ ಅನ್ನುವುದು ಗೊತ್ತಾದ ಕೂಡಲೇ ಕೂಗಾಡುವುದನ್ನು ನಿಲ್ಲಿಸಿ ಬಿಟ್ಟಿದ್ದಾರೆ.  ಅಷ್ಟೇ ಅಲ್ಲ ಕಾರ್ ಹತ್ತಿ ಹೋಗುವಾಗ ಆ ಫೋಟೋಗ್ರಾಫರ್ ಗೆ ಕ್ಷಮೆ ಕೇಳಿದ್ದಾರೆ ಎನ್ನಲಾಗಿದೆ.

 

 

Tags