ಸುದ್ದಿಗಳು

ಸೈಫ್ ಅಲಿ ಖಾನ್ ವಿಚ್ಛೇದಿತ ಪತ್ನಿ ಮತ್ತು ನಟಿ ಅಮೃತಾ ಸಿಂಗ್ ಬಗ್ಗೆ ನಿಮಗೆಷ್ಟು ಗೊತ್ತೆ..?

ಮುಂಬೈ, ಮಾ.18:

ನಟಿ ಅಮೃತಾ ಸಿಂಗ್ ಬಾಲಿವುಡ್ ನ ಖ್ಯಾತ ನಟಿ. ಹಲವು ವರ್ಷಗಳ ಕಾಲ ಚಿತ್ರರಂಗದಲ್ಲಿ ಮಿಂಚಿದ ಈ ಪ್ರತಿಭೆ, ಮದುವೆಯಾದ ಬಳಿಕ ಚಿತ್ರರಂಗದಿಂದ ದೂರವುಳಿದರು. ಇರ್ಫಾನ್ ಖಾನ್ ಅಭಿನಯದ ಹಿಂದಿ ಮೀಡಿಯಂ ಚಿತ್ರದಲ್ಲಿ ಆಕೆ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡ ಬಳಿಕ ಯಾವುದೇ ಚಿತ್ರದಲ್ಲಿ ನಟಿಸಿಲ್ಲ. ಸೈಫ್ ಅಲಿಖಾನ್ ಮಾಜಿ ಪತ್ನಿಯೂ ಆಗಿರುವ ಅಮೃತಾ ಸಿಂಗ್ ನಿಮಗೆ ಗೊತ್ತಿಲ್ಲದ ಕೆಲವೊಂದು ವಿಚಾರಗಳನ್ನು ನಾವು ನಿಮಗೆ ತಿಳಿಸುತ್ತೇವೆ ನೋಡಿ.

ಅಂದಹಾಗೆ ಅಮೃತಾ ಸಿಂಗ್ ಅವರ ತಾಯಿ, ಸಂಜಯ್ ಗಾಂಧಿ ಅವರ ಕಾಲದಲ್ಲಿ ರಾಜಕೀಯದಲ್ಲಿ ಸಕ್ರಿಯರಾಗಿದ್ದರು ಹಾಗೂ ಅಮೃತಾ ತಂದೆ ಭದ್ರತಾ ಪಡೆಯ ಅಧಿಕಾರಿಯಾಗಿದ್ದರು. ಅಮೃತಾ ತಂದೆ ಶಿವೇಂದರ್ ಸಿಂಗ್ ಸಿಖ್ ಸಮುದಾಯಕ್ಕೆ ಸೇರಿದ್ದರೆ, ರುಕ್ಷಾನಾ ಸುಲ್ತಾನಾ ಮುಸಲ್ಮಾನ್ ಮಹಿಳೆಯಾಗಿದ್ದಾರೆ.

ಅಮೃತಾ 1983ರಲ್ಲಿ ಚಿತ್ರರಂಗ ಪ್ರವೇಶಿಸಿದರು. ಸನ್ನಿ ಡಿಯೋಲ್ ಅಭಿನಯದ ಸೂಪರ್ ಹಿಟ್ ಚಿತ್ರ ಬೇತಾಳದ ಮೂಲಕ ಅಮೃತಾ ತಮ್ಮ ಸಿನಿ ಪಯಣ ಆರಂಭಿಸಿದರು. ಅಂದಹಾಗೆ ಚಿತ್ರ ಸೂಪರ್ ಹಿಟ್ ಆಗಿದ್ದು ಮಾತ್ರವಲ್ಲದೆ, ಈ ಜೋಡಿ  ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದರು. ಕೆಲವರು ಹೇಳುವಂತೆ ಇವರಿಬ್ಬರು ಪರಸ್ಪರ ಪ್ರೇಮಿಸುತ್ತಿದ್ದರು ಎನ್ನಲಾಗಿತ್ತು.1991ರಲ್ಲಿ ಅಮೃತಾ ಸಿಂಗ್ ತನಗಿಂತ 12 ವರ್ಷ ಕಿರಿಯವನಾದ ಸೈಫ್ ಅಲಿಖಾನ್ ಅವರನ್ನು ವಿವಾಹವಾದರು. ಮದುವೆಯಾದ ಬಳಿಕ ಆಕೆ ಮುಸ್ಲಿಂಗೆ ಮತಾಂತರವಾದರು.

1993ರ ರಂಗ ಚಿತ್ರದ ಬಳಿಕ ಅಮೃತಾ ಸಂಪೂರ್ಣವಾಗಿ ಕೌಟುಂಬಿಕವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ನಿರ್ಧರಿಸಿದರು.

2002ರಲ್ಲಿ ಮತ್ತೆ ಅಮೃತಾ ಚಿತ್ರರಂಗಕ್ಕೆ ಕಮ್ ಬ್ಯಾಕ್ ಆದರು. ಇದಾದ ಬಳಿಕ ಏಕ್ತಾ ಕಪೂರ್ ಅವರ ಸೂಪರ್ ಹಿಟ್ ಶೋ ಕಾವ್ಯಾಂಜಲಿ ನಲ್ಲಿ (2005)ರಲ್ಲಿ ನೆಗೆಟೀವ್ ಪಾತ್ರದಲ್ಲಿ ಅಮೃತಾ ನಟಿಸಿದರು.

2004ರಲ್ಲಿ ಸೈಫ್ ಹಾಗೂ ಅಮೃತಾ ಪರಸ್ಪರ ದೂರವಾಗಲು ನಿರ್ಧರಿಸುತ್ತಾರೆ. ಅಂದಹಾಗೆ ಸೈಫ್ ಅಲಿಖಾನ್ ಹಾಗೂ ಅಮೃತಾಗೆ ಸಾರಾ ಹಾಗೂ ಇಬ್ರಾಹಿಂ ಅಲಿ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಇತ್ತೀಚೆಗೆ ಸಾರಾ ಅಲಿಖಾನ್ ಕೇದಾರನಾಥ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ್ದಾರೆ.

ಸಾಗರಿಯ ಕಿವಿಯಲ್ಲಿ ರೆಕ್ಕೆ ಪುಕ್ಕದ ಚಿತ್ತಾರ…!!!

#bollywood #saifalikhan #balkaninews #saifalikhan #saifalikhanmovies #amritasingh #amritasinghmovies

Tags