ಸುದ್ದಿಗಳು

ಪಾದಯಾತ್ರೆ ಮಾಡುತ್ತಲೇ ಸ್ಕ್ರಿಪ್ಟ್ ಮಾಡುತ್ತಿರುವ ನಿರ್ದೇಶಕ

ಹೊಸ ಚಿತ್ರದ ತಯಾರಿಯಲ್ಲಿ ನಿರ್ದೇಶಕ ಸಾಯಿ ಕೃಷ್ಣ

ಬೆಂಗಳೂರು.ಮಾ.16: ಸಾಮಾನ್ಯವಾಗಿ ಒಂದು ಸಿನಿಮಾ ಮಾಡುವಾಗ ಚಿತ್ರತಂಡದವರು ಒಂದು ನಿರ್ದಿಷ್ಟ ಸಮಯವನ್ನು ಮೀಸಲಿಟ್ಟು ಸ್ಕ್ರಿಪ್ಟ್ ತಯಾರಿಸುತ್ತಾರೆ. ಆದರೆ, ಇಲ್ಲೊಬ್ಬ ನಿರ್ದೇಶಕರು ಸ್ವಲ್ಪ ವಿಭಿನ್ನವಾಗಿ ಚಿತ್ರಕಥೆ ರಚನೆ ಮಾಡುತ್ತಿದ್ದಾರೆ.

ಹೌದು, ಈ ಹಿಂದೆ ‘ಕ’ ಮತ್ತು ‘ಗಂಡ ಊರಿಗೆ ಹೋದಾಗ’ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದ ಸಾಯಿಕೃಷ್ಣ ಈಗ ಹೊಸ ಚಿತ್ರದ ತಯಾರಿಯಲ್ಲಿದ್ದಾರೆ. ವಿಶೇಷವೆಂದರೆ, ಅವರು ಪಾದಯಾತ್ರೆಯ ಮೂಲಕ ವಿಭಿನ್ನವಾಗಿ ಚಿತ್ರದ ಚಿತ್ರಕಥೆ ಸೇರಿದಂತೆ ಸಿನಿಮಾದ ಇತರ ಕೆಲಸಗಳನ್ನು ಮಾಡುತ್ತಿದ್ದಾರೆ.

ಅಂದ ಹಾಗೆ ಈ ಹೊಸ ಚಿತ್ರಕ್ಕೆ ‘ಕಸ’ ಎಂದು ಹೆಸರಿಟ್ಟಿರುವ ನಿರ್ದೇಶಕರು, ಚಿತ್ರದ ಮೂಲಕ ಪರಿಸರ ಕಾಳಜಿ ಸಾರುವ ಕಥೆಯನ್ನು ಹೇಳುತ್ತಿದ್ದಾರೆ. ಅಂದ ಹಾಗೆ ಇವರು ಮತ್ತು ಚಿತ್ರತಂಡದವರು ಧರ್ಮಸ್ಥಳಕ್ಕೆ ತೆರಳಿದ್ದು, ಅಲ್ಲಿಯೇ ಚಿತ್ರದ ಕುರಿತಂತೆ ಇತರ ಕೆಲಸಗಳನ್ನು ಮಾಡುತ್ತಿದ್ದಾರೆ.

ಇನ್ನು ಸಾಯಿಕೃಷ್ಣರವರು ಈ ಮೊದಲು ಮಾಡಿದ ‘ಕ’ ಚಿತ್ರವು ನೋಡುಗರಿಂದ ಮೆಚ್ಚುಗೆ ಪಡೆದಿದ್ದು, ಅದರಂತೆ ‘ಗಂಡ ಊರಿಗೆ ಹೋದಾಗ’ ಕಾಮಿಡಿ ಸಿನಿಮಾವಾಗಿದ್ದು, ಇದು ಸಹ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿತ್ತು. ಹೀಗಾಗಿ ‘ಕಸ’ ಚಿತ್ರದ ಬಗ್ಗೆಯೂ ಸಹ ಸಾಕಷ್ಟು ನಿರೀಕ್ಷೆಗಳು ಮೂಡುತ್ತಿವೆ.

ಗಜರಾಜನನ್ನು ಭೇಟಿ ಮಾಡಿದ ಗಜೇಂದ್ರ

#saikkrishna, #kasa, #balkaninews #kannadasuddigalu

Tags