ಸುದ್ದಿಗಳು

ಸಾಯಿ ಪಲ್ಲವಿ ಜೊತೆ ಪೈಪೋಟಿಗೆ ನಿಂತಳೇ ರಶ್ಮಿಕಾ??

ರಶ್ಮಿಕಾ ಮಂದಣ್ಣನಿಗೆ ಅವಕಾಶ ಜಾಸ್ತಿ ಬರುತ್ತಿವೆಯಂತೆ..

ರಶ್ಮಿಕಾಳ ಬೆಳವಣಿಗೆ ಟಾಲಿವುಡ್ ನಲ್ಲಿ ಗಟ್ಟಿ ನೆಲೆ ಹೊಂದಿರುವ ನಟಿ ಸಾಯಿ ಪಲ್ಲವಿಗೆ ಪೈಪೋಟಿ ನೀಡುತ್ತಿದೆ ಎಂದು ಟಾಲಿವುಡ್ ನಲ್ಲಿ ಕೇಳಿ ಬರುತ್ತಿದೆ..

ಬೆಂಗಳೂರು,ಆ.31: ಕನ್ನಡದ ಚೆಲುವೆ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ  ಸದ್ಯ ಚಿತ್ರರಂಗದಲ್ಲಿ ನಿರತಳಾಗಿದ್ದಾಳೆ. ಚಂದನವನ ಹಾಗೂ ಟಾಲಿವುಡ್ ನಲ್ಲಿ ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾಳೆ. ​​ದಿನದಿಂದ ದಿನಕ್ಕೆ ತೆಲುಗು ಚಿತ್ರರಂಗದಲ್ಲಿ ರಶ್ಮಿಕಾ ಬೇಡಿಕೆ ಹೆಚ್ಚುತ್ತಿದೆ.

Image result for rashmika

ಬೇಡಿಕೆಯ ನಟಿ ರಶ್ಮಿಕಾ

ಹೌದು, ‘ಚಲೋ’ ಹಾಗೂ ‘ಗೀತ ಗೋವಿಂದಂ’ ಚಿತ್ರಗಳು ‘ಬಾಕ್ಸ್ ಆಫಿಸ್ ನಲ್ಲಿ ಕೊಳ್ಳೆ ಹೊಡೆದಿದ್ದೇ ತಡ, ಕಿರಿಕ್ ಬೆಡಗಿ ರಶ್ಮಿಕಾ ಟಾಪ್ ನಟಿಯಾಗಿದ್ದಾಳೆ. ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಿದ್ದೇ ತಡ, ಸಂಭಾವನೆಯೂ ಹೆಚ್ಚಾಗಿದೆ. ಬಹಳಷ್ಟು ಚಿತ್ರಗಳು ಈಕೆಯನ್ನು ಅರಸಿಕೊಂಡು ಬರುತ್ತಿವೆ. ರಶ್ಮಿಕಾಳ ಬೆಳವಣಿಗೆ ಟಾಲಿವುಡ್ ನಲ್ಲಿ ಗಟ್ಟಿ ನೆಲೆ ಹೊಂದಿರುವ ನಟಿ ಸಾಯಿ ಪಲ್ಲವಿಗೆ ಪೈಪೋಟಿ ನೀಡುತ್ತಿದೆ ಎಂದು ಟಾಲಿವುಡ್ ನಲ್ಲಿ ಕೇಳಿ ಬರುತ್ತಿದೆ. ಇದು ಎಷ್ಟರ ಮಟ್ಟಿಗೆ ಸತ್ಯವೋ ಗೊತ್ತಿಲ್ಲ!!

ಸಾಯಿಪಲ್ಲವಿಗೆ ಸೆಡ್ಡು!!

‘ಫಿದಾ ಹಾಗೂ ‘ಎಂಸಿಎ’ ಚಿತ್ರಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದ ಸಾಯಿ, ಟಾಪ್ ನಟಿಯರ ಸಾಲಿನಲ್ಲಿದ್ದಾರೆ. ಸದ್ಯ ಸಾಯಿ ಪಲ್ಲವಿ ಕೂಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.. ಆದರೆ ಸಾಯಿ ಪಲ್ಲವಿಗೆ ಹೋಲಿಸಿದರೆ, ರಶ್ಮಿಕಾ ಮಂದಣ್ಣನಿಗೆ ಅವಕಾಶ ಜಾಸ್ತಿ ಬರುತ್ತಿವೆಯಂತೆ. ಕಥೆ ಇಷ್ಟವಾದರೆ ಸಾಕು, ಯಾವುದೇ ನಟನ ಜತೆ ನಟಿಸಲು ರಶ್ಮಿಕಾ ಒಪ್ಪಿಕೊಳ್ಳುತ್ತಾರಂತೆ. ಹಾಗಾಗಿ ರಶ್ಮಿಕಾ ಮತ್ತು ಸಾಯಿ ಪಲ್ಲವಿ ಮಧ್ಯೆ ಪೈಪೋಟಿ ನಡೆಯುತ್ತಿದೆ ಎನ್ನಲಾಗುತ್ತಿದೆ..

 

Related image

Tags