ಸುದ್ದಿಗಳು

ಸೈರಾ ಚಿತ್ರವನ್ನು ಇನ್ನಷ್ಟು ವಿಭಿನ್ನಗೊಳಿಸುತ್ತಿದ್ದಾರಂತೆ ನಟ ಅಲ್ಲೂ ಅರ್ಜುನ್

ಹೈದ್ರಾಬಾದ್, ಫೆ.12:

ಮೆಘಾಸ್ಟಾರ್ ಚಿರಂಜೀವಿ ಅವರ ಬಹುನಿರೀಕ್ಷಿತ ಚಿತ್ರ ‘ಸೈರಾ ನರಸಿಂಹರೆಡ್ಡಿ’ ಟಾಲಿವುಡ್ ನಲ್ಲಿ ಮತ್ತೊಂದು ದಾಖಲೆ ಬರೆಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಈ ಹಿಂದೆ ಬಾಹುಬಲಿ ಚಿತ್ರ  ದಕ್ಷಿಣ ಭಾರತದ ಚಿತ್ರರಂಗವನ್ನು ಎಲ್ಲರೂ ತಿರುಗಿನೋಡುವಂತೆ ಮಾಡಿತ್ತು. ಈ ದಾಖಲೆಯನ್ನು ಮುರಿಯಲು ಇದೀಗ ಸೈರಾ ಸಿದ್ದವಾಗುತ್ತದೆ ಎಂದೇ ಹೇಳಲಾಗುತ್ತಿದೆ. ಭಾರತದ ಮೊದಲ ಸ್ವಾತಂತ್ರಾಹೋರಾಟಗಾರ ಉಯ್ಯಾಲವಾಡ ನರಸಿಂಹ ರೆಡ್ಡಿ ಅವರ ಜೀವನಕಥೆಯನ್ನು ಬದುಕು ಹಾಗೂ ಹೋರಾಟವನ್ನು ಒಳಗೊಂಡ ಚಿತ್ರ ಸೈರಾ ನರಸಿಂಹ ರೆಡ್ಡಿ.

ಈ ಚಿತ್ರವನ್ನೂ ಬಹಳಷ್ಟು ಅದ್ದೂರಿಯಾಗಿ ಚಿತ್ರೀಕರಿಸಲಾಗಿದ್ದು, ರಾಮ್ ಚರಣ್ ತೇಜಾ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಬಿಗ್ ಬಿ ಅಮಿತಾಬ್ ಬಚ್ಚನ್. ಕಿಚ್ಚಸುದೀಪ್, ವಿಜಯ್ ಸೇತುಪತಿ, ಜಗಪತಿಬಾಬು, ನಯನಾತಾರಾ, ತಮನ್ನಾ ಬಾಟಿಯಾ , ಪ್ರಗ್ಯಾ ಜೈಸ್ವಾಲ್ ಮತ್ತು ಇನ್ನಿತರರು ಚಿತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಬಂದ ಸುದ್ದಿಯಂತೆ ಅನುಷ್ಕಾ ಶೆಟ್ಟಿ ಕೂಡ ಕ್ರೂಷಿಯಲ್ ರೋಲ್ ಒಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸೈರಾ ಚಿತ್ರದಲ್ಲಿ ಅಲ್ಲೂ ಅರ್ಜುನ್…!

ಸೈರಾ ಚಿತ್ರದ ಕುರಿತಂತೆ ದಿನಕ್ಕೊಂದು ಸುದ್ದಿ ಹೊರಬೀಳುತ್ತಲೇ ಇದೆ. ಇತ್ತೀಚೆಗೆ ನಟಿ ಅನುಷ್ಕಾ ಶೆಟ್ಟಿ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ ಎಂಬ ಮಾತು ಹರಿದಾಡಿತ್ತು. ಚಿತ್ರದಲ್ಲಿ ನಯನಾತಾರ ಬದಲಿಗೆ ಅನುಷ್ಕಾ ನಟಿಸಬೇಕಿತ್ತಂತೆ. ಆದರೆ ಆಕೆ ‘ಜಿರೋ’ ಚಿತ್ರಕ್ಕಾಗಿ ಹೆಚ್ಚಿಸಿಕೊಂಡ ತೂಕ ಕಡಿಮೆಯಾಗದ ಕಾರಣ ಅವರಲ್ಲಿ ಗ್ಲಾಮರ್ ಕಡಿಮೆಯಾಗಿದ್ದು ಹೀಗಾಗಿ ಅವರನ್ನು ಚಿತ್ರದಲ್ಲಿ ನಟಿಸುವ ಯೋಜನೆಯನ್ನು ಕೈ ಬಿಡಲಾಗಿತ್ತು.

ಇದೀಗ ಅನುಷ್ಕಾ ಚಿತ್ರದ  ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯ ಜೊತೆ ಜೊತೆಗೆ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ನಟ ಅಲ್ಲೂ ಅರ್ಜುನ್ ಕೂಡ ನಟಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಈ ಬಗ್ಗೆ ಚಿತ್ರನಿರ್ಮಾಪಕರು ಯಾವುದೇ ವಿಚಾರವನ್ನು ಬಿಟ್ಟುಕೊಟ್ಟಿಲ್ಲವಾದರೂ, ಆದರೆ ಖಂಡಿತವಾಗಿಯೂ ಅವರು ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಸುರೇಂದರ್ ರೆಡ್ಡಿ ಸೈರಾ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಮೆಘಾ ಪವರ್ ಸ್ಟಾರ್ ರಾಮ್ ಚರಣ್ ಕೊನಿಡೆಲ್ ಪ್ರೋಡಕ್ಷನ್ ಕಂಪನಿಯ ಮೂಲಕ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.  ಅಮಿತ್ ತ್ರಿವೇದಿ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

‘ಸೈರಾ’ ಚಿತ್ರಕ್ಕೆ ಎಂಟ್ರಿ ಕೊಡಲಿದ್ದಾರೆ ಟಾಲಿವುಡ್ ನ ಮತ್ತೊಬ್ಬ ಟಾಪ್ ನಟಿ…?

#tollywood #telugumovies #syranarasimhareddy #syaranarasimhareddyinalluarjun #balkaninews

Tags

Related Articles