ಸುದ್ದಿಗಳು

ಪ್ರವಾಹ ಸಂತ್ರಸ್ತರಿಗೆ ‘ಸಲಗ’ ತಂಡದಿಂದ ಸಹಾಯ

ಎಲ್ಲರಿಗೂ ತಿಳಿದಿರುವಂತೆ ಕಳೆದ ಒಂದು ವಾರದಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಹಾ ಮಳೆಯಿಂದಾಗಿ ಉತ್ತರ ಕರ್ನಾಟಕದ ಜನತೆ ತತ್ತರಿಸಿ ಹೋಗಿದೆ. ಅನೇಕರು ಮನೆಗಳನ್ನು ಕಳೆದು ಬೀದಿಗೆ ಬಂದಿದ್ದಾರೆ. ಈಗಾಗಲೇ ಸಾಮಾನ್ಯರು ಸೇರಿದಂತೆ ಕಲಾವಿದರು ಮತ್ತು ತಂತ್ರಜ್ಞರು ಸಂತ್ರಸ್ತರಿಗೆ ತಮ್ಮ ಕೈಲಾದ ಸಹಾಯ ನೀಡಿ ಮಾನವೀಯತೆ ಮೆರೆದಿದ್ದಾರೆ.

ಇದೀಗ ‘ದುನಿಯಾ’ ವಿಜಿ ನಟನೆ ಹಾಗೂ ನಿರ್ದೇಶನದ ‘ಸಲಗ’ ಚಿತ್ರತಂಡ ಜನರ ನೋವಿಗೆ ಸ್ಪಂದಿಸಿ, ಜನರಿಗೆ ಅಗತ್ಯ ವಸ್ತುಗಳನ್ನು ತಲುಪಿಸಿದ್ದಾರೆ. ಮೊನ್ನೆಯಷ್ಟೇ ಬೆಂಗಳೂರಿನಿಂದ ಸುಮಾರು 5 ಟ್ರಕ್ ಗಳಲ್ಲಿ ಅಗತ್ಯ ವಸ್ತುಗಳನ್ನು ಉತ್ತರ ಕರ್ನಾಟಕದ ಜನತೆಗೆ ತಲುಪಿಸಲಾಗಿತ್ತು. ಇದೀಗ ಗದಗ ಜಿಲ್ಲೆಯ ರೋಣ ತಾಲೂಕಿನ ಊರುಗಳಿಗೆ ತಲುಪಿಸಲಾಗಿದೆ. ಸದ್ಯ ನಿಧಾನಕ್ಕೆ ನೆರೆ ಪರಿಸ್ಥಿತಿ ಸುಧಾರಿಸುತ್ತಿದೆ.

ವೀಕೆಂಡ್ ನಲ್ಲಿ ಟ್ರೆಕ್ಕಿಂಗ್ ಮಾಡುವವರು ಆಯ್ಕೆ ಮಾಡೋದು ಈ ಹತ್ತು ಸ್ಥಳಗಳನ್ನೇ…!!!

#salagaMovie #Floodvictimspeoples #savenorthkarnataka #kannadafilm, #kannadamovie

Tags