ಸುದ್ದಿಗಳು

ಸಲ್ಲು ಗೆ ಮಗಳು ಹುಟ್ಟಿದರೆ, ನನ್ನ ಮಗನಿಗೆ ತಂದುಕೊಳ್ಳುತ್ತೇನೆ ಎಂದ ಕಿಂಗ್ ಖಾನ್!!

ನಾವು ರಾಣಿ ಮುಖರ್ಜಿಯವರನ್ನು ನಮ್ಮ ಶೋಗೆ ಕರೆಯಬಾರದಿತ್ತು

ಮುಂಬೈ,ಸೆ.09: ಸಲ್ಮಾನ್ ಖಾನ್ ಭಾರತ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ಮದುವೆಯಾಗದೇ ಇರುವುದಕ್ಕೆ ಸುದ್ದಿಯಾಗುತ್ತಿದ್ದಾರೆ

ನಿಮಗೊಂದು ಮಗಳು ಹುಟ್ಟಲಿ

ಇತ್ತೀಚಿಗೆ  ‘ದಸ್ ಕಾ ಧಮ್’ ನಡೆದ ಕಾರ್ಯಕ್ರಮವೊಂದರಲ್ಲಿ ಸಲ್ಮಾನ್ ಖಾನ್, ಶಾರೂಕ್ ಖಾನ್ ಹಾಗೂ ರಾಣಿ ಮುಖರ್ಜಿ ಭಾಗವಹಿಸಿದ್ದರು. ಈ ವೇಳೆ ಮಾತು, ಹಾಸ್ಯ ಚಟಾಕಿ ಎಲ್ಲವೂ ಇತ್ತು. ತಮಾಷೆಯಾಗಿ ಕಾಲೆಳೆಯುವ ಸಂದರ್ಭದಲ್ಲಿ ಶಾರೂಕ್  ಒಂದು ಮಾತು ಹೇಳಿದ್ದಾರೆ. ಸಲ್ಮಾನ್ ನಿಮಗೆ ಮದುವೆಯಾಗಿ ನಿಮಗೊಂದು ಮಗಳು ಹುಟ್ಟಲಿ. ಅವಳು ನಿಮ್ಮ ಹಾಗೆ ಮುದ್ದು ಮುದ್ದಾಗಿರಲಿ. ನಿಮ್ಮ ಮುದ್ದಾದ ಮಗಳನ್ನು ನನ್ನ ಮಗನಿಗೆ ತಂದುಕೊಳ್ಳುತ್ತೇನೆ  ಎಂದು ಹೇಳಿದ್ದಾರೆ. ಇದಕ್ಕೆ ರಾಣಿ ಮುಖರ್ಜಿ ಕೂಡಾ ಸಾಥ್ ನೀಡಿದ್ದಾರೆ.

ಶಾದಿ ಮುಖರ್ಜಿ

ಶಾರೂಕ್ ಸಲ್ಲು ಕಾಲೆಳೆಯುವುದರ ಜೊತೆಗೆ ರಾಣಿ ಮುಖರ್ಜಿಯವರನ್ನು ಬಿಡಲಿಲ್ಲ. ನಾವು ರಾಣಿ ಮುಖರ್ಜಿಯವರನ್ನು ನಮ್ಮ ಶೋಗೆ ಕರೆಯಬಾರದಿತ್ತು. ಅವರು ಜನರಿಗೆ ಮದುವೆ ಮಾಡಿಸುತ್ತಾರೆ. ಮಕ್ಕಳ ಬಗ್ಗೆ ಐಡಿಯಾ ಕೊಡುತ್ತಾರೆ. ಹಾಗಾಗಿ ಅವರನ್ನು ’ಶಾದಿ ಮುಖರ್ಜಿ’ ಎಂದು ಕರೆಯಬೇಕೆಂದು ನಗೆ ಬೀರುತ್ತಾ ಕಾಲೆಳೆದಿದ್ದಾರೆ

Tags

Related Articles