ಸುದ್ದಿಗಳು

೨೦೨೦ಕ್ಕೆ `ದಬಾಂಗ್-೩’ ಮುಂದೂಡಿದ ಸಲ್ಮಾನ್ ಖಾನ್?

೨೦೨೦ಕ್ಕೆ `ದಬಾಂಗ್-೩’ ಮುಂದೂಡಿದ ಸಲ್ಮಾನ್ ಖಾನ್?

ಬೆಂಗಳೂರು,ನ.12: ಇತ್ತೀಚೆಗಷ್ಟೇ ಟಿವಿ ಸಂದರ್ಶನವೊಂದರಲ್ಲಿ ನಟ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್, ಮುಂದಿನ ವರ್ಷ ದಬಾಂಗ್-೩ ಚಿತ್ರ ಬಿಡುಗಡೆಯಾಗಲಿದೆ ಎಂದು ಹೇಳಿಕೆ ನೀಡಿದ್ದರು. ಆದರೆ, ಮೂಲಗಳ ಪ್ರಕಾರ, ಈ ಚಿತ್ರ ೨೦೨೦ರವರೆಗೂ ಬಿಡುಗಡೆಯಾಗುವುದಿಲ್ಲ. ಇದಕ್ಕೆ ಕಾರಣ ಸಲ್ಮಾನ್ ಖಾನ್.

ಚಿತ್ರದ ಕಳಪೆ ಪ್ರದರ್ಶನ

ಹೌದು, ಚಿತ್ರಕಥೆಯನ್ನು ಉತ್ತಮವನ್ನಾಗಿಸಲು ತಮ್ಮ ಟೀಂಗೆ ಸೂಚಿಸಿದ್ದಾರಂತೆ ಸಲ್ಮಾನ್. ಇದಕ್ಕೆ ಕಾರಣ, ಇತ್ತೀಚೆಗೆ ಬಿಡುಗಡೆಯಾದ `ಥಗ್ಸ್ ಆಫ್ ಹಿಂದೂಸ್ತಾನ್’ ಚಿತ್ರದ ಕಳಪೆ ಪ್ರದರ್ಶನ. ಈ ಹಿಂದೆ `ಜಬ್ ಹ್ಯಾರಿ ಮೀಟ್ ಸೆಜಲ್, ಟ್ಯೂಬ್‌ಲೈಟ್’, `ರೇಸ್-೩’ ನಿರೀಕ್ಷಿತ ಮಟ್ಟಕ್ಕೆ ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಕಾಣಲಿಲ್ಲ.

Image result for dabang 3

ಉತ್ತಮ ಸ್ಕ್ರಿಪ್ಟ್

ಈ ಕಾರಣಗಳಿಂದಾಗಿ ಸಲ್ಮಾನ್ ಖಾನ್, ಉತ್ತಮ ಸ್ಕ್ರಿಪ್ಟ್ ನತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ಉತ್ತಮ ಸ್ಕ್ರಿಪ್ಟ್ ಸಿದ್ಧವಾಗುವವರೆಗೂ ಚಿತ್ರ ಶೂಟಿಂಗ್ ಚಾಲನೆ ಬೇಡ ಅಂತಾ ಸಲ್ಲು ಸೂಚಿಸಿದ್ದಾರೆ. ಸದ್ಯ ಸಲ್ಮಾನ್ ಖಾನ್ ಅವರು ಅಲಿ ಅಬ್ಬಾಸ್ ಜಫರ್ ಅವರ `ಭಾರತ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ನಾಯಕಿಯಾಗಿ ಕತ್ರಿನಾ ಕೈಫ್ ನಟಿಸುತ್ತಿದ್ದು, ೨೦೧೯ರ ಈದ್ ವೇಳೆ ಬಿಡುಗಡೆಯಾಗಲಿದೆ.

 

Tags

Related Articles