ಸುದ್ದಿಗಳು

ಸಲ್ಲು ಹೊಸ ಅವತಾರಕ್ಕೆ ಫಿದಾ ಆದ ಅಭಿಮಾನಿಗಳು

ಮುಂಬೈ, ಏ.15:

ದೇಶ ಭಕ್ತಿ ಸಾರುವ ‘ಭಾರತ್’ ಸಿನಿಮಾದಲ್ಲಿ ಬ್ಯಾಡ್ ಬಾಯ್ ಸಲ್ಲು ನಟಿಸುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿದ್ದ ಪೋಸ್ಟರ್‌ ಗಳಿಂದಲೇ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸುವಂತಿದ್ದ, ಚಿತ್ರದ ಮತ್ತೊಂದು ಪೋಸ್ಟರ್ ಇಂದು ರಿಲೀಸ್ ಆಗಿದ್ದು, ಅಭಿಮಾನಿಗಳು ಈ ಲುಕ್‌ಗೆ ಫಿದಾ ಆಗುತ್ತಿದ್ದಾರೆ.

ಜೂನ್‌ ನಲ್ಲಿ ಬಿಡುಗಡೆ..?

ನೈಜ ಘಟನೆಯಾಧಾರಿತ ಭಾರತ್ ಸಿನಿಮಾ ಈಗಾಗಲೇ ಹಲವಾರು ವೀಶೇಷತೆಗಳಿಂದ ಕೂಡಿದೆ. ಈ ಚಿತ್ರದಲ್ಲಿನ ಸಲ್ಲು ಹಾಗೂ ಇತರ ಪಾತ್ರದಾರಿಗಳ ಲುಕ್‌ ಗಳು ಸಿನಿಮಾ ಕುತೂಹಲವನ್ನು ಹೆಚ್ಚಿಸುವಂತಿದೆ. ಸಲ್ಮಾನ್ ಸಿನಿಮಾಗಳು ತೆರೆಗೆ ಬರುತ್ತವೆ ಅಂದರೆ ಅಭಿಮಾನಿಗಳು ಕೂಡ ಕಾತುರರಾಗಿರುತ್ತಾರೆ. ಅದೇ ರೀತಿ ಈ ಸಿನಿಮಾ ಕೂಡ ಕುತೂಹಲ ಮೂಡಿಸಿದೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಈ ಚಿತ್ರ ಬಿಡುಗಡೆಗೂ ರೆಡಿಯಾಗಿದೆ.

ಟ್ವಿಟ್ಟರ್‌ ನಲ್ಲೇನಿದೆ..?

ಸದ್ಯ ಈ ಚಿತ್ರದ ಲುಕ್ ಒಂದು ಬಿಡುಡಗೆಯಾಗಿದೆ. ಈ ಪೋಸ್ಟರ್‌ ನಲ್ಲಿ ಸಲ್ಮಾನ್ ಖಾನ್ ವಯಸ್ಸಾದ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಈ ಪೋಸ್ಟರ್ ಅಭಿಮಾನಿಗಳಿಗೆ ಇಷ್ಟವಾಗಿದ್ದು, ಫುಲ್ ವೈರಲ್ ಆಗುತ್ತಿದೆ. ಇನ್ನು ಈ ಪೋಸ್ಟರ್ ಅನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ ಈ ನಟ. ಇನ್ನೂ ಈ ಫೋಟೋದಲ್ಲಿ ನನ್ನ ತಲೆ ಹಾಗೂ ಗಡ್ಡದಲ್ಲಿ ಎಷ್ಟು ಬಿಳಿ ಕೂದಲಿವೆಯೋ ಅದಕ್ಕಿಂತ  ಎಷ್ಟೋ ಪಟ್ಟು ನನ್ನ ಜೀವನ ಸುಂದರವಾಗಿದೆ ಎಂದು ಬರೆದು ಕೊಂಡಿದ್ದಾರೆ.

 

View this post on Instagram

 

SK in Bharat !! Sk thru my eyes n camera ! @beingsalmankhan @rebello.ashley @prashantroyalty @amritakak @kiren.rijiju

A post shared by Bina Kak (@kakbina) on

ಚಿತ್ರದಲ್ಲಿದೆ ದೊಡ್ಡ ತಾರಾಗಣ

ಇನ್ನೂ ಭಾರತ್ ಚಿತ್ರ ದಕ್ಷಿಣಯ ಕೊರಿಯಾದ ಒಡೇ ಟು ಮೈ ಫಾದರ್ ಚಿತ್ರದ ರಿಮೇಕ್ ಸಿನಿಮಾ ಎನ್ನಲಾಗಿದೆ. ಭಾರತ್ ಸಿನಿಮಾದಲ್ಲಿ, ಮಾಜಿ ವಿಶ್ವಸುಂದರಿ ಕತ್ರಿನಾ ಕೈಫ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ದಿಶಾ ಪಟಾನಿ, ಸುನಿಲ್ ಗ್ರೋವರ್, ಆಸಿಫ್ ಶೇಕ್ ಮತ್ತು ಟಬೂ ಸಹ ಅಭಿನಯಿಸಿದ್ದಾರೆ. ಚಿತ್ರದಲ್ಲಿ 1940  ರಲ್ಲಿ ಭಾರತ ವಿಭಜನೆಯಲ್ಲಿ ನಡೆದ ಘಟನೆಯನ್ನು ಆಧರಿಸಿದ್ದು, 70ರ ದಶಕದ ಶೈಲಿಯಲ್ಲಿ ಚಿತ್ರ ತಯಾರಾಗುತ್ತಿದೆ ಎಂದು ಹೇಳಲಾಗಿದೆ.

‘ರುಸ್ತುಂ’ ಟ್ರೇಲರ್ ಗೆ ಫಿದಾ ಆದ ಪುನೀತ್!!

#balkaninews #bollywood #hindimovies #salmankhan #salmankhanmovies #salmankhanbharaatmovie

Tags