ಸುದ್ದಿಗಳು

‘ಭಾರತ್’ ಚಿತ್ರಕ್ಕಾಗಿ ಐದು ಅವತಾರಗಳನ್ನು ಎತ್ತಿದ ಸಲ್ಲು ಭಾಯ್

ಮುಂಬೈ, ಏ.20:

ಸಲ್ಮಾನ್ ಖಾನ್ ಅಭಿನಯದ ‘ಭಾರತ್’ ಸಿನಿಮಾ ಈಗಾಗಲೇ ಬಹಳಷ್ಟು ಚರ್ಚೆಯ ಜೊತೆ ಕುತೂಹಲ ಮೂಡಿಸಿವೆ. ದಿನಕ್ಕೊಂದು ಪೋಸ್ಟರ್ ಬಿಡುಗಡೆಯಾಗುತ್ತಿದ್ದು, ಸಿನಿಮಾದಲ್ಲಿ ಸಲ್ಮಾನ್ ಅವರ ಅಭಿನಯದ ಹಾಗೂ ಪಾತ್ರದ ಬಗ್ಗೆ ಚರ್ಚೆಗಳು ಪ್ರಾರಂಭವಾಗಿವೆ. ಪ್ರತಿ ದಿನ ಬಿಡುಗಡೆಯಾಗುತ್ತಿದ್ದ ಎಲ್ಲಾ ಪೋಸ್ಟರ್‌ಗಳು ಕೂಡ ಚರ್ಚೆಯನ್ನು ಹುಟ್ಟುಹಾಕುತ್ತಿವೆ. ಇಂದು ಈ ಎಲ್ಲಾ ಪೋಸ್ಟರ್ ಸೇರಿದ ಮೋಷನ್ ಪೋಸ್ಟರ್ ಒಂದು ಬಿಡುಗಡೆಯಾಗಿದ್ದು ಮತ್ತಷ್ಟು ಕುತೂಹಲ ಮೂಡಿಸಿದೆ.

ಮೋಷನ್ ಪೋಸ್ಟರ್‌ನಲ್ಲಿ 5 ಅವತಾರ

ಹೌದು, ಸಲ್ಮಾನ್ ಖಾನ್ ರ ದಿನಕ್ಕೊಂದು ಪೋಸ್ಟರ್‌ ಗಳು ಬಾರಿ ಸದ್ದು ಮಾಡಿದ್ದವು. ಒಂದು ಪೋಸ್ಟರ್‌ನಲ್ಲಿ ಯುವಕನಾಗಿ ಸಲ್ಮಾನ್ ಅಭಿಮಾನಿಗಳನ್ನು ಸೆಳೆದರೆ, ಮತ್ತೊಂದು ಫೋಸ್ಟರ್‌ ನಲ್ಲಿ ಹುರಿ ಮೀಸೆ ಮತ್ತು ತಲೆ ಮೇಲೆ ಹೆಡ್ಲೈಟ್ ಶಿರಸ್ತ್ರಾಣವನ್ನು ಹೊತ್ತುಕೊಂಡು ಖಡಕ್ ಲುಕ್ ಕೊಟ್ಟಿದ್ದರು. ಇನ್ನೂ ನಂತರ ಬಿಡುಗಡೆಯಾದ ಪೋಸ್ಟರ್‌ ನಲ್ಲಿ ನೌಕಾಸೇನೆ ಹಾಗೂ ಸ್ಟಂಟ್ ಮಾಸ್ಟರ್ ಆಗಿ ಕಾಣಿಸಿದ್ರೆ, ಕೊನೆಯ ಪೋಸ್ಟರ‍್ನಲ್ಲಿ ವೃದ್ಧನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ಹಲವು ದೇಶಗಳ ಸಂಸ್ಕೃತಿಯನ್ನು ವಿವಿಧ ಘಟ್ಟಗಳಲ್ಲಿ ತೋರಿಸಲಾಗುತ್ತದೆ. 70 ವರ್ಷಗಳ ಜರ್ನಿಯನ್ನು ತಿಳಿಸಲಿರುವ ಈ ಸಿನಿಮಾದಲ್ಲಿ ಸಲ್ಮಾನ್ ನೌಕಾ ಪಡೆ ಅಧಿಕಾರಿ, ಸ್ಟಂಟ್ ಮಾಸ್ಟರ್, ಮುದುಕನ ಗೆಟಪ್ ಸೇರಿದಂತೆ ಒಟ್ಟು ಐದು ವಿಭಿನ್ನ ಅವತಾರದಲ್ಲಿ ಕಾಣಿಸುತ್ತಿರುವುದು ವಿಶೇಷ. ಹಲವು ದೇಶಗಳ ಕಥೆಯೊಂದಿಗೆ ದೇಶಭಕ್ತಿಯನ್ನು ಸಾರಲಿರುವ ಭಾರತ್ ಬಾಲಿವುಡ್‌ ನ ಫ್ಯಾನ್ ಸಿನಿಮಾವಾಗಲಿದೆ ಎಂಬ ಮಾತುಗಳು ಈಗಾಗಲೇ ಎಲ್ಲಾ ಕಡೆಗಳಲ್ಲಿ ಕೇಳಿ ಬರುತ್ತಿದೆ.

ಅಲಿ ಅಬ್ಬಾಸ್ ಜಫರ್ ಚಿತ್ರಕ್ಕೆ ನಿರ್ದೇಶನ

ಅಲಿ ಅಬ್ಬಾಸ್ ಜಫರ್ ‘ಭಾರತ್’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಸದ್ಯ ಈ ಚಿತ್ರವು ದಕ್ಷಿಣ ಕೊರಿಯಾದ ಒಡ್ ಟು ಮೈ ಫಾದರ್ ಸಿನಿಮಾ ರೀಮೇಕ್ ಚಿತ್ರ ಎನ್ನಲಾಗಿದೆ. ಇನ್ನೂ ಈ ಚಿತ್ರದಲ್ಲಿ ಸಲ್ಮಾನ್‌ ಗೆ ನಾಯಕಿಯಾಗಿ ಕತ್ರೀನಾ ಕೈಫ್ ಮತ್ತು ದಿಶಾ ಪಠಾಣಿ ಬಣ್ಣ ಹಚ್ಚಿದ್ದಾರೆ. ಇಂಡಿಯಾದ 70 ವರ್ಷಗಳ ಸಂಸ್ಕೃತಿ, ವಿವಿಧ ದೇಶಗಳಲ್ಲಿ ಹರಡಿರುವುದರ ಸಂಬಂಧಿತ ಕಥೆಯಾಗಿದೆಯಂತೆ ಈ ಭಾರತ್ ಸಿನಿಮಾ. ಬಹು ನಿರೀಕ್ಷೆಯ ಈ ಸಿನಿಮಾ ಈದ್ ಅಂದರೆ ಜೂನ್ 5 ರಂದು ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ವಿಭಿನ್ನ ಪಾತ್ರಗಳಲಿ ಸಲ್ಲು ನೋಡಿರುವ ಅಭಿಮಾನಿಗಳು ಸಿನಿಮಾಗಾಗಿ ವೈಟ್ ಮಾಡ್ತಾ ಇದ್ದಾರೆ..

ಕನ್ನಡದ ಕೋಟ್ಯಧಿಪತಿ 4 ರ ಮೊದಲ ಪ್ರಶ್ನೆ ಇಂದು ರಾತ್ರಿ 8 ಕ್ಕೆ..!!

#balkaninews #salmankhan #salmankhanmovies #salmankhanbharatmovie #salmankhanandkatrinakaif

Tags