ಸುದ್ದಿಗಳು

ಚಿಂದಿ ಉಡಾಯಿಸಿದ ಸಲ್ಲು ಐದು ಅವತಾರಗಳನ್ನೊಳಗೊಂಡ ‘ಭಾರತ್’ ಟ್ರೇಲರ್

ಮುಂಬೈ, ಏ.22:

ದಿನಕ್ಕೊಂದು ಪೋಸ್ಟರ್ ಮೂಲಕ ಸದ್ದು ಮಾಡಿದ್ದ ‘ಭಾರತ್’ ಸಿನಿಮಾದ ಟ್ರೇಲರ್ ಲಾಂಚ್ ಆಗಿದೆ. ಬಹು ನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾದ ‘ಭಾರತ್’ ಸಿನಿಮಾ ಚಿತ್ರೀಕರಣ ಮುಗಿಸಿದ್ದು ಬಿಡುಗಡೆ ಹಂತ ತಲುಪಿದೆ. ಈ ವೇಳೆಯಲ್ಲಿಯೇ ಟ್ರೇಲರ್ ಲಾಂಚ್ ಮಾಡಲಾಗಿದ್ದು, ನಿಜಕ್ಕೂ ಟ್ರೇಲರ್ ನೋಡಿದ ಮಂದಿ ಸಲ್ಲು ಅಭಿನಯಕ್ಕೆ ಮಾರು ಹೋಗಿದ್ದಾರೆ.

ಟ್ರೇಲರ್ ಹೇಗಿದೆ ಗೊತ್ತೆ..?

1964ರಲ್ಲಿ ಕಥೆಯೊಂದು ಶುರುವಾಗಿ ಆ ಕಥೆ 2010ರಲ್ಲಿ ಮುಗಿಯುತ್ತೆ. ಈ ಕಾಲಘಟ್ಟದಲ್ಲಿ ಸಲ್ಮಾನ್ ಖಾನ್ ಅವರ ಒಂದೊಂದು ಪಾತ್ರಗಳು ಕೂಡ ಮುಖ್ಯ ಪಾತ್ರ ವಹಿಸುತ್ತಾರೆ. ಇನ್ನೂ ಈ ಕಾಲಘಟ್ಟದಲ್ಲಿನ ದೇಶದ ಕಥೆ, ದೇಶಕ್ಕಾಗಿ ಹೋರಾಡುವ ರೀತಿ, ದೊಡ್ಡ ಸೆಟ್ ನಲ್ಲಿನ ದೃಶ್ಯಾವಳಿಗಳು, ಬೈಕ್ ರೇಸ್, ಈ ನಡುವೆ ಕತ್ರೀನಾ ಕೈಫ್ ಜೊತೆ ಪ್ರೀತಿ, ಭಾರತ್ ಆಗಿ ದೇಶ ಪ್ರೇಮ ಮೆರೆಯುವ ರೀತಿ, ಸಂಬಂಧಗಳ ಜೊತೆಗಿನ ಹೋರಾಟ, ನೆನಪು, ದೇಶಕ್ಕಾಗಿ ತ್ಯಾಗ, ದೇಶ ಇಬ್ಬಾಗವಾಗುವ ರೀತಿ ಹೀಗೆ ಎಲ್ಲವನ್ನು ಟ್ರೇಲರ್‌ ನಲ್ಲಿ ತೋರಿಸಲಾಗಿದೆ.

ಐದು ಗೆಟಪ್ ನಲ್ಲಿ ಸಲ್ಮಾನ್ ಖಾನ್

ಸುಮಾರು 3 ನಿಮಿಷ 11 ಸೆಕೆಂಡ್ ಇರುವ ಈ ಟ್ರೇಲರ್ ತುಂಬಾ ರಿಚ್ ಆಗಿ ಮೂಡಿ ಬಂದಿದೆ. ಇನ್ನೂ ಈ ಸಿನಿಮಾದಲ್ಲಿ ಐದು ಗೆಟಪ್‌ ಗಳಲ್ಲಿ ಕಾಣುವ ನಟ ಸಲ್ಮಾನ್ ಅಭಿಮಾನಿಗಳಿಗೆ ಸಿನಿಮಾ ಮೂಲಕ ಮತ್ತೆ ತಮ್ಮ ಎಲ್ಲಾ ಲುಕ್‌ ಗಳನ್ನು ನೀಡಿದ್ದಾರೆ. ಇನ್ನೂ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ ಅಲಿ ಅಬ್ಬಾಸ್ ಜಾಫರ್. ಸಿನಿಮಾದಲ್ಲಿ ಜಾಕಿ ಶ್ರಾಫ್, ದಿಶಾ ಪಠಾನಿ ಹಾಗೂ ಸುನಿಲ್ ಗ್ರೋವರ್ ಕೂಡ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ಈದ್ ಗೆ ಈ ಸಿನಿಮಾ ಬಿಡುಗಡೆಯಾಗುತ್ತಿದ್ದು, ಟ್ರೇಲರ್ ಮೂಲಕ ಚಿತ್ರದ ನಿರೀಕ್ಷೆ ಹೆಚ್ಚಿಸುವಂತಿದೆ.

ವಿಜಯ್ ದೇವರಕೊಂಡ ಚಿತ್ರದಲ್ಲಿ ದೂದ್ ಪೇಡಾ ದಿಗಂತ್..!!!

#salmankhan #salmankhanmovies #balkaninews #hinidmovies #salmankhanbharatmovietrailer #salmankhanandkatrinakaif

Tags