ಸುದ್ದಿಗಳು

ಸಲ್ಮಾನ್ ಖಾನ್ ನೀಡಿದ 3 ದುಬಾರಿ ಉಡುಗೊರೆಗಳು..!

ಮುಂಬೈ, ಫೆ.12:

ಬಾಲಿವುಡ್ ಚಲನಚಿತ್ರೋದ್ಯಮದಲ್ಲಿ ಸಲ್ಮಾನ್ ಖಾನ್ ಅತ್ಯಂತ ಸುಂದರ ಮತ್ತು ಅತ್ಯುತ್ತಮ ನಟ. ಇವರು ಪ್ರಪಂಚದಾದ್ಯಂತ ಬಹಳಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಹಾಗೆಯೇ ಇವರು ಬಹಳ ಶ್ರೀಮಂತರು ಕೂಡಾ ಹೌದು. ಇವರು ತನ್ನ ಪ್ರೀತಿ ಪಾತ್ರರಿಗೆ ನೀಡಿದ ಉಡುಗೊರೆಗಳ ಮೌಲ್ಯ ಕೇಳಿದರೆ ನಿಮಗೆ ಅಚ್ಚರಿ ಎನಿಸುತ್ತದೆ. ಅದ್ಯಾರಿಗೆ ಸಲ್ಲು ಬೈ ದುಬಾರಿ ಗಿಫ್ಟ್ ಕೊಟ್ಟಿದ್ದಾರೆ ಅಂದುಕೊಂಡ್ರಾ..? ಮುಂದೆ ಓದಿ…

ಸೋನಮ್ ಕಪೂರ್:

ಹಲವು ವರ್ಷಗಳಿಂದ ಸಲ್ಮಾನ್ ಮತ್ತು ಅನಿಲ್ ಕಪೂರ್ ಆತ್ಮೀಯ ಸ್ನೇಹಿತರಾಗಿದ್ದಾರೆ. ಸೋನಮ್ ಕಪೂರ್ ವಿವಾಹದ ಸಂದರ್ಭದಲ್ಲಿ ಸಲ್ಮಾನ್ ಖಾನ್  90 ಲಕ್ಷ ರೂಪಾಯಿ ಮೌಲ್ಯದ ಕಾರನ್ನು ಉಡುಗೊರೆಯಾಗಿ ನೀಡಿದ್ದರು.

ಜಾಕ್ವೆಲಿನ್ ಫೆರ್ನಾಂಡಿಸ್:

ಸಲ್ಮಾನ್ ಖಾನ್ ಮತ್ತು ಜಾಕ್ವೆಲಿನ್ ಫೆರ್ನಾಂಡಿಸ್ ಇಬ್ಬರು ಉತ್ತಮ ಸ್ನೇಹಿತರಾಗಿದ್ದಾರೆ. ಜಾಕ್ವೆಲಿನ್ ರನ್ನು ಬಾಲಿವುಡ್ ಗೆ ಪರಿಚಯ ಮಾಡಿದ್ದೇ ಸಲ್ಮಾನ್ ಖಾನ್. ಇವರು ಅನೇಕ ಸಿನೆಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಸಲ್ಮಾನ್ , ಜಾಕ್ವೆಲಿನ್ ಗೆ 2.5 ಕೋಟಿ ಮೌಲ್ಯದ ಪೈಂಟಿಂಗನ್ನು ಉಡುಗೊರೆಯಾಗಿ ನೀಡಿದ್ದರು.

ಅರ್ಪಿತಾ ಖಾನ್:

ಸಲ್ಮಾನ್ ಖಾನ್ ರ ತಂದೆ ಚಿಕ್ಕ ಮಗುವಾಗಿದ್ದಾಗ ಅರ್ಪಿತಾಳನ್ನು ದತ್ತು ತೆಗೆದುಕೊಂಡಿದ್ದರು. ಆದರೆ ಇವರ ಕುಟುಂಬವು ಅರ್ಪಿತಾಗೆ ಯಾವುದೇ ನೋವಾಗದಂತೆ ತಮ್ಮ ಸ್ವಂತ ಕುಟುಂಬದ ಪುತ್ರಿಯಂತೆ ನೋಡಿಕೊಳ್ಳುತ್ತಿದ್ದಾರೆ. ಈಕೆ ಕೂಡಾ ಅಷ್ಟೇ. ಸಲ್ಲು ಬೈಯನ್ನು ತುಂಬಾ ಪ್ರೀತಿಸುತ್ತಾಳೆ. ಅರ್ಪಿತಾ ಮಗುವಿಗೆ ಜನ್ಮ ನೀಡಿದಾಗ ಸಲ್ಮಾನ್ ಖಾನ್ 3 ಕೋಟಿ ರೂಪಾಯಿಗಳ ಕಾರನ್ನು ಉಡುಗೊರೆಯಾಗಿ ನೀಡಿದ್ದರು.

ಸಲ್ಮಾನ್ ಖಾನ್ ಗಿಂತಲೂ ಈ 57 ವರ್ಷದ ನಟನ ದೇಹ ಸೂಪರ್..!

#arpithakhan #salmankhan #salmankhanmovies #salmankhanhits #balkaninews #salmankhantwitter

Tags