ಸುದ್ದಿಗಳು

ಕನ್ನಡದಲ್ಲಿ ಟ್ವೀಟ್ ಮಾಡಿದ ಸಲ್ಲು ಭಾಯ್, ಫ್ಯಾನ್ಸ್ ಫಿದಾ !

ದಬಾಂಗ್-3 ಚಿತ್ರದ ಟ್ರೈಲರ್ ಕನ್ನಡದಲ್ಲಿ ರಿಲೀಸ್ ಆಗಿದೆ. ಬಾಲಿವುಡ್‍ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಇದೀಗ ದಬಾಂಗ್ 3 ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ಕುರಿತಾದ ಸಮಾರಂಭದಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತಾಡಿರುವ ಸಲ್ಮಾನ್ ಖಾನ್ ಕನ್ನಡದಲ್ಲಿಯೇ ಮಾತಾಡೋ ಮೂಲಕ ಕನ್ನಡಿಗರೆಲ್ಲರ ಮನ ಗೆದ್ದಿದ್ದಾರೆ

ಇನ್ನು ಬೆಂಗಳೂರಿನ ಕೋರಮಂಗಲದಲ್ಲಿ ಕನ್ನಡ ಆವತರಣಿಕೆಯ ದಬಾಂಗ್ -3 ಟ್ರೈಲರ್ ರಿಲೀಸ್ ಆಗಿತ್ತು. ವಿಶೇಷವೆಂದರೆ ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ ಸಲ್ಲು ಭಾಯ್

“ದಯವಿಟ್ಟು, ದಬಾಂಗ್3 ಕನ್ನಡ ಟ್ರೈಲರ್ ನೋಡುವುದಕ್ಕಾಗಿ ನಿಮ್ಮ ಅಮೂಲ್ಯ ಸಮಯದಲ್ಲಿ 3 ನಿಮಿಷಗಳನ್ನು ನಮಗಾಗಿ ಕೊಡಬಹುದಾ” ಎಂದು ಟ್ವೀಟ್ ಮಾಡಿದ್ದಾರೆ. ಸಲ್ಲು ಟ್ವೀಟ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಮತ್ತೆ ಕಾಲಿವುಡ್ ಪ್ರವೇಶಿಸಿದ ರೋಶಿನಿ ಪ್ರಕಾಶ್

#dabangg3 #sandalwood #salmankhan

Tags