ಸುದ್ದಿಗಳು

ಪಾಕ್ ಪ್ರತಿಕಾರಕ್ಕೆ ಮುಂದಾದ ನಟ ಸಲ್ಲು

ಮುಂಬೈ, ಫೆ.20:

ಪುಲ್ವಾಮ ಬಾರೀ ದುರಂತದಲ್ಲಿ 49 ಯೋಧರು ವೀರ ಮರಣಹೊಂದಿದ್ದಾರೆ. ಇದೀಗ ಇಡೀ ದೇಶವೇ ಪಾಕ್ ಮಾಡಿದ ಕೆಲಸವನ್ನು ಖಂಡಿಸುತ್ತಿದೆ. ಅಷ್ಟೇ ಅಲ್ಲ ಎಷ್ಟೋ ಮಂದಿ ನಾಗರೀಕರು ನಾವು ಪಾಕಿಸ್ತಾನ ಮಾಡಿದ ಕೆಲಸಕ್ಕೆ ಪ್ರತಿಕಾರ ತೀರಿಸಿಕೊಳ್ಳಲೇ ಬೇಕು ಅಂತಾ ಎಂದುಕೊಳ್ಳುತ್ತಿದ್ದಾರೆ. ಇದೀಗ ಸಲ್ಲು ಕೂಡ ವಿಭಿನ್ನವಾಗಿ ಪ್ರತಿಕಾರ ತೀರಿಸಿಕೊಳ್ಳುತ್ತಿದ್ದಾರೆ.

ಪಾಕಿಸ್ತಾನ ದೂರ ಇಟ್ಟ ಸಲ್ಲು

ಹೌದು, ಸದ್ಯ ಪಾಕಿಸ್ತಾನ ಮಾಡಿದ ಕೆಲಸಕ್ಕೆ ಇದೀಗ ಅಲ್ಲಿನ ಕಲಾವಿದರನ್ನು ಬ್ಯಾನ್ ಮಾಡಲು ಸಿನಿಮಾ ರಂಗ ಚಿಂತನೆ ನಡೆಸಿದೆ. ಈಗಾಗಲೇ ಕೆಲವೊಂದು ಸಿನಿಮಾಗಳಲ್ಲಿ ಇದ್ದ ಕಲಾವಿದರಿಗೆ ಗೇಟ್ ಪಾಸ್ ಕೂಡ ನೀಡಲಾಗಿದೆ‌ ಎನ್ನಲಾಗಿದೆ. ಇನ್ನು ಸಲ್ಮಾನ್ ಖಾನ್ ಕೂಡ ತಮ್ಮ ಸಿನಿಮಾದ ಕೆಲವೊಂದು ಹಾಡುಗಳನ್ನು ರೀರೆಕಾರ್ಡ್ ಮಾಡಲು ಮುಂದಾಗಿದ್ದಾರೆಂತೆ.

ಹಾಡುಗಳ ರೀ ರೆಕಾರ್ಡ್ ಗೆ ರೆಡಿಯಾದ ಸಲ್ಲು

ಹೌದು, ಸದ್ಯ ‘ನೋಟ್​ಬುಕ್’ ಹಾಗೂ ‘ಭಾರತ್’​ ಚಿತ್ರದಲ್ಲಿ ಕೆಲವೊಂದು ಸಾಂಗ್​ ಪಾಕ್ ಸಿಂಗರ್ ಬಳಿ ಹಾಡಿಸಲಾಗಿದೆಯಂತೆ. ಹೀಗಾಗಿ ರೀ-ರೆಕಾರ್ಡಿಂಗ್​ ಗೆ ಸಲ್ಲು ನಿರ್ಧರಿಸಿದ್ದಾರಂತೆ. ಈ ಎರಡು ಚಿತ್ರಗಳಲ್ಲಿಯೂ ಒಂದೊಂದು ಹಾಡಿಗೆ ಪಾಕ್​ ಗಾಯಕರಾದ ಅತಿಫ್​ ಅಸ್ಲಾಮ್​ ಹಾಗೂ ರಹಾತ್​ ಫತೇಶ್​​ ಅಲಿ ಖಾನ್ ಧ್ವನಿ ನೀಡಿದ್ದಾರೆ.  ಹೀಗಾಗಿ ಈ ಹಾಡುಗಳನ್ನು ರೀ ರೆಕಾರ್ಡ್ ಮಾಡಲು ನಿರ್ಧಾರ ಮಾಡಲಾಗಿದೆ.

ವಜ್ರೇಶ್ವರಿ ಕಂಬೈನ್ಸ್ ನಲ್ಲಿ ‘ಮರಳಿ ಬಂದಳು ಸೀತೆ ‘ ಧಾರಾವಾಹಿ

#mumbai #salmankhan #salmankhanmovies #salmankhanhits #salmankhantwitter #pulwanaterriorstattackfebruary142019 #balkaninews

 

Tags

Related Articles