ಸುದ್ದಿಗಳು

‘ನಿಮ್ಮ ಮದುವೆ ಯಾವಾಗ’ ಎಂಬ ಪ್ರಶ್ನೆಗೆ ಸಲ್ಮಾನ್ ಖಾನ್ ಹೇಳಿದ್ದೇನು..?

ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ‘ದಬಾಂಗ್’ ಚಿತ್ರ ಸರಣಿಯ ಬಹುನಿರೀಕ್ಷಿತ ‘ದಬಾಂಗ್ 3’ ಚಿತ್ರ ಇದೇ ಶುಕ್ರವಾರ ದೇಶಾದ್ಯಂತ ಬಿಡುಗಡೆಯಾಗುತ್ತಿದ್ದು ಚಿತ್ರದ ಪ್ರಚಾರಕ್ಕೆಂದು ಚಿತ್ರತಂಡ ಬೆಂಗಳೂರಿಗೆ ಆಗಮಿಸಿತ್ತು. ಇದೇ ವೇಳೆ ಪತ್ರಕರ್ತರು ನಟ ಸಲ್ಮಾನ್ ಖಾನ್ ರಿಗೆ ಮದುವೆಯ ಬಗ್ಗೆ ಪ್ರಶ್ನಿಸಿದರು.

‘ಚಿತ್ರದಲ್ಲಿ ಇಬ್ಬರು ಹೀರೋಯಿನ್ ಗಳ ಜೊತೆ ಕೆಲಸ ಮಾಡಿದ್ದು ಬಹಳ ಖುಷಿ ಕೊಟ್ಟಿತು’ ಎಂದು ಸಲ್ಲು ಹೇಳಿದಾಗ, ಎಂದಿನಂತೆ ‘ನೀವು ಯಾವಾಗ ಮದುವೆಯಾಗುತ್ತೀರಿ.?’ ಎಂದು ಪತ್ರಕರ್ತರೊಬ್ಬರಿಂದ ಪ್ರಶ್ನೆಬಂತು, ಅದಕ್ಕೆ ಒಂದು ಕ್ಷಣ ಸುಮ್ಮನಾಗಿ ಯೋಚಿಸಿ ‘ಸಮಯ ಬಂದಾಗ ಆಗುತ್ತೇನೆ’ ಎಂದರು.

‘ದಬಾಂಗ್-3’ ಕೇವಲ ಹಿಂದಿಯಲ್ಲಿ ಮಾತ್ರವಲ್ಲದೆ ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಸಹ ಬಿಡುಗಡೆಯಾಗುತ್ತಿದ್ದು, ಸ್ವತಃ ಸಲ್ಮಾನ್ ಖಾನ್ ಅವರೇ ಕನ್ನಡ ಭಾಷೆಯಲ್ಲಿ ಡಬ್ ಮಾಡಿರುವುದು ವಿಶೇಷ, ಹೀಗಾಗಿ ಅವರು ಕನ್ನಡದಲ್ಲಿ ಹೇಗೆ ಮಾತನಾಡಿದ್ದಾರೆ ಎಂದು ಕುತೂಹಲದಿಂದ ಒಂದಷ್ಟು ಚಿತ್ರಪ್ರೇಮಿಗಳು ಚಿತ್ರಮಂದಿರಕ್ಕೆ ಬಂದರೆ ಅಚ್ಚರಿಯಿಲ್ಲ.

ಸಾರ್ವಜನಿಕರಿಗೆ ಸುವರ್ಣಾವಕಾಶ : ಇದು ಬಹುಭಾಷಾ ನಟಿ ಧನ್ಯಾರ ಮೊದಲ ಕನ್ನಡ ಚಿತ್ರ

#Salmankhan #SalmankhanMarriage #Dabangg3 #Sudeep #KannadaSuddigalu

Tags