ಸುದ್ದಿಗಳು

ತೆರೆ ಮೇಲೆ ಬರಲು ರೆಡಿಯಾಯ್ತು ಸಲ್ಮಾನ್ ಖಾನ್ ‘ತೇರೆ ನಾಮ್’ ಸೀಕ್ವೆಲ್…!!!

ಮುಂಬೈ, ಏ.25:

ಸಲ್ಮಾನ್ ಖಾನ್ ಮತ್ತೊಮ್ಮೆ ಹುಚ್ಚರಾಗುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದೇನಪ್ಪಾ ಅಂದ್ರೆ ಸಲ್ಮಾನ್ ಖಾನ್ ಅಭಿನಯದ ‘ತೇರೆ ನಾಮ್’ ಸಿನಿಮಾದಲ್ಲಿ ಬುದ್ದಿ ಮಾಂದ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಪಾತ್ರ ಮತ್ತೆ ಮರುಕಳಿಸಲಿದೆ ಎನ್ನಲಾಗಿದೆ. ಅಂದರೆ ಈ ತೇರೆ ನಾಮ್ ಸಿನಿಮಾ ಸೀಕ್ವೆಲ್ ತೆರೆಗೆ ಬರಲಿದೆಯಂತೆ. ಹೀಗಂತ ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿವೆ.

ತೇರೆ ನಾಮ್ ಸಿನಿಮಾ ಸೀಕ್ವೆಲ್ ತೆರೆಗೆ..?

ಸಲ್ಮಾನ್ ಖಾನ್ ಮತ್ತು ಭೂಮಿಕಾ ಚಾವ್ಲಾ ನಟನೆಯ ತೇರೆ ನಾಮ್ 2003ರಲ್ಲಿ ಅದ್ಬುತವಾಗಿ ಯಶಸ್ವಿ ಗಳಿಸಿದ್ದ ಚಿತ್ರ. ಈ ಚಿತ್ರದಲ್ಲಿ ನಟ ಸಲ್ಮಾನ್ ಖಾನ್ ತಮ್ಮದೇ ಆದ ನಟನಾ ಶೈಲಿಯಲ್ಲಿ ಅಭಿಮಾನಿಗಳನ್ನು ಸೆಳೆದಿದ್ದರು. ಇನ್ನೂ ಈ ಚಿತ್ರವನ್ನು  ಸತೀಶ್ ಕೌಶಿಕ್ ನಿರ್ದೇಶನ ಮಾಡಿದ್ದರು. ಇದೀಗ ಈ ಚಿತ್ರದ ಸೀಕ್ವೆಲ್ ಬರಲಿದೆಯಂತೆ. ಈ ವಿಚಾರವನ್ನು ನಿರ್ದೇಶಕ ಸತೀಶ್ ಕೌಶಿಕ್ ಹೇಳಿರುವುದು ವರದಿಗಳಾಗಿವೆ.

ಸಲ್ಲುರ ವಿಭಿನ್ನ ಪಾತ್ರ

ತೇರೆ ನಾಮ್ ಸಿನಿಮಾ ಭಾವನಾತ್ಮಕ ಪ್ರೇಮ ಕಥೆ, ರಾಧೆ ಭಯ್ಯಾ ಪಾತ್ರದಲ್ಲಿ ಸಲ್ಲು ಅದ್ಭುತ ಅಭಿನಯ ಮತ್ತು ಅವರ ವಿಶಿಷ್ಟ ಹೇರ್ ಸ್ಟೈಲ್ ನೋಡುಗರನ್ನು ಸೆಳೆದಿತ್ತು. ಇನ್ನೂ ಈ ಚಿತ್ರದ ಸುಂದರ ಹಾಡುಗಳು ಪ್ರೇಕ್ಷಕರನ್ನು ನೋಡಿ ಮಾಡಿತ್ತು.  ಸದ್ಯ ಈ ಸಿನಿಮಾದ ಸಿಕ್ವೆಲ್ ಬರುತ್ತದೆ ಎನ್ನುವ ವಿಚಾರ ಮಾತ್ರ ಹೊರ ಬಿದ್ದಿದೆ. ಆದರೆ ಸಲ್ಮಾನ್ ಖಾನ್ ಈ ಸೀಕ್ವೆಲ್‌ ನಲ್ಲಿ ಇರಲಿದ್ದಾರೆಯೇ ಎಂಬುದು ಬಹಿರಂಗವಾಗಿಲ್ಲ. ಇನ್ನೂ ‘ತೇರೆ ನಾಮ್’ ಚಿತ್ರ ಕನ್ನಡದಲ್ಲಿ ಹುಚ್ಚ ಸಿನಿಮಾವಾಗಿ ತೆರೆ ಕಂಡಿತ್ತು ಭರ್ಜರಿ ಯಶಸ್ವಿ ಗಳಿಸಿತ್ತು.

Related image

Image result for tere naam

Related image

ಭಂಡನ ಮನೆಗೆ ಭೇಟಿ ನೀಡಿದ ರಣಧೀರ

#balkaninews #salmankhan #bhoomika #terenaam #hindimovies #terenaamhindimovie

Tags