ಸುದ್ದಿಗಳು

ಭಾರತ್ ಸಿನಿಮಾ ಫಸ್ಟ್ ಲುಕ್ ಬಿಡುಗಡೆ..

ಮೀಸೆ ಬಿಟ್ಟಿರುವ ಸಲ್ಲು..

ದೇಶ ಭಕ್ತಿ ಸಾರುವ ಸಿನಿಮಾದಲ್ಲಿ ೭೦ ವರ್ಷಗಳ ಭಾರತದ ಹಿಂದಿನ  ಇತಿಹಾಸವನ್ನು ಹೇಳಲಾಗುತ್ತಿದೆಯಂತೆ

ಮುಂಬೈ,ಆ.26: ಸಲ್ಮಾನ್ ಖಾನ್ ಬಹು ನಿರೀಕ್ಷಿತ ಚಿತ್ರ ‘ಭಾರತ್’ ಸಿನಿಮಾದ ಫಸ್ಟ್ ಲುಕ್ ಇಂದು ಬಿಡುಗಡೆಯಾಗಿದೆ. ದೇಶಭಕ್ತಿ ಸಾರುವ ಸಿನಿಮಾ ಇದಾಗಿದ್ದು, ಈಗಾಗಲೇ ಕುತೂಹಲದ ಜೊತೆಗೆ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಸಿನಿಮಾ ಹೆಸರಿಂದಲೇ ಹೆಚ್ಚಾಗಿ ಸದ್ದು ಮಾಡಿದ್ದ ‘ಭಾರತ್’ ಇದೀಗ ಫಸ್ಟ್ ಲುಕ್‌ನಿಂದಲೂ ಸದ್ದು ಮಾಡುತ್ತಿದೆ.

ಇತಿಹಾಸವನ್ನು ಸಾರುವ ‘ಭಾರತ್’

ಹೌದು, ಅಲಿ ಅಬ್ಬಾಸ್ ಜಾಫರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಭಾರತ್’ ಸಿನಿಮಾ ಸದ್ಯ ಸಲ್ಮಾನ್ ಸಿನಿಮಾಗಳಲ್ಲಿ ನಿರೀಕ್ಷೆಯ ಸಿನಿಮಾ ಅಂದರೆ ತಪ್ಪಾಗಲಾರದು. ದೇಶ ಭಕ್ತಿ ಸಾರುವ ಈ ಸಿನಿಮಾದಲ್ಲಿ ೭೦ ವರ್ಷಗಳ ಭಾರತದ ಹಿಂದಿನ  ಇತಿಹಾಸವನ್ನು ಹೇಳಲಾಗುತ್ತಿದೆಯಂತೆ. ಇದೀಗ ಈ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಸಿನಿಮಾ ಮೇಲಿನ ನಿರೀಕ್ಷೆಹೆಚ್ಚಿಸಿದೆ.

ಫಸ್ಟ್ ಲುಕ್ ಬಿಡುಗಡೆ

‘ಭಾರತ್’ ಚಿತ್ರದ ಫಸ್ಟ್ ಲುಕ್ ನಲ್ಲಿ ಫೋಟೋ ತುಂಬಾ ಮನಮೋಹಕವಾಗಿದೆ. ಇನ್ನು ಈ ಫೋಟೋದಲ್ಲಿ ಮೀಸೆ ಬಿಟ್ಟಿರುವ ಸಲ್ಲು ಖಡಕ್ಕಾಗಿ ಕಾಣಿಸಿಕೊಂಡಿದ್ದರೆ, ಹಸಿರು ಸೀರೆಯಲ್ಲಿ ಕತ್ರೀನಾ ಕೈಫ್ ಕಂಗೊಳಿಸಿದ್ದಾಳೆ. ಇಬ್ಬರ ಮನಮೋಹಕವಾದ ಈ ಫೋಟೋ ನೋಡಿದ ಅಭಿಮಾನಿಗಳು ಸಿನಿಮಾ ಯಾವಾಗ ತೆರೆ ಕಾಣುತ್ತೋ ಅಂತಿದ್ದಾರೆ.

ದೇಶ ಭಕ್ತಿ ಸಿನಿಮಾ

‘ಭಜರಂಗಿ ಭಾಯಿಜಾನ್’, ‘ಟ್ಯೂಬ್‌ ಲೈಟ್’, ‘ಟೈಗರ್ ಜಿಂದಾ ಹೈ’ ಮುಂತಾದ ದೇಶಭಕ್ತಿ ಸಿನಿಮಾದಲ್ಲಿ ಅಭಿನಯಿಸಿದ ಸಲ್ಮಾನ್ ಇದೀಗ ಮತ್ತೆ ‘ಭಾರತ್’ ಅನ್ನೋ ಮತ್ತೊಂದು ದೇಶಭಕ್ತಿ  ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ‘ಭಾರತ್’ ಸಿನಿಮಾ ಭಾರತದ ೭೦ ವರ್ಷಗಳ ಸಂಸ್ಕೃತಿ, ವಿವಿಧ ದೇಶದಗಳಲ್ಲಿ ಹರಡಿರುವುದರ ಸಂಬಂಧಿತ ಕಥೆಯಾಗಿದೆಯಂತೆ. ಈಗಾಗಲೇ ಸಿನಿಮಾ ಶೂಟಿಂಗ್ ಕೂಡ ಭರದಿಂದ ಸಾಗಿದೆ.

#Bharat @bharat_thefilm

A post shared by Salman Khan (@beingsalmankhan) on

Tags

Related Articles