ಸುದ್ದಿಗಳು

ಸಲ್ಲು ಗೆ ಅಪ್ಪನಾದ ಜಾಕಿ ಶ್ರಾಫ್..

‘ಭಾರತ್’ ಚಿತ್ರದಲ್ಲಿ ಜಾಕಿ ಶ್ರಾಫ್..

‘ನಾನು ದೀರ್ಘಕಾಲದಿಂದ ಅವರೊಂದಿಗೆ ಕೆಲಸ ಮಾಡಲು ಬಯಸಿದ್ದೆ, ಏಕೆಂದರೆ ಅವರ ನಟನೆ ಪರಿಪೂರ್ಣ ಸಂಯೋಜನೆಯಾಗಿದೆ ಎಂದು ನಾನು ಭಾವಿಸುತ್ತೇನೆ’.

ಮುಂಬೈ,ಸೆ.03: ಸಲ್ಮಾನ್ ಖಾನ್ ಬಿಗ್ ಬಾಸ್ 12  ಸರಣಿ ಕಾರ್ಯಕ್ರಮದಲ್ಲಿ ಸದ್ಯ ನಿರತರಾಗಿದ್ದಾರೆ, ಅಷ್ಟೇ ಅಲ್ಲದೆ ‘ಭಾರತ್’ ಚಿತ್ರದಲ್ಲೂ ಸಲ್ಲು ಬ್ಯುಸಿ. ಮುಂಬೈ ಮಿರರ್ ವರದಿ ಪ್ರಕಾರ, ಜಾಕಿ ಶ್ರಾಫ್ ‘ಭಾರತ್’ ಚಿತ್ರದಲ್ಲಿ ಸಲ್ಲು ತಂದೆಯ ಪಾತ್ರದಲ್ಲಿ ನಟಿಸಲಿದ್ದಾರಂತೆ. 2010 ರಲ್ಲಿ ಬಿಡುಗಡೆಯಾದ ‘ವೀರ್’ ಚಿತ್ರದಲ್ಲಿ ಇವರಿಬ್ಬರು ಒಟ್ಟಾಗಿ ಕೆಲಸ ಮಾಡಿದ್ದರು.

‘ಮಾಲ್ಟಾ’ದಲ್ಲಿ ಚಿತ್ರೀಕರಣ ಪೂರ್ಣ

ನಿರ್ದೇಶಕ ಹೇಳುವ ಪ್ರಕಾರ, “ನಾವು ಲಂಡನ್ನಲ್ಲಿ ಜಗ್ಗು ದಾದಾನನ್ನು ಭೇಟಿ ಮಾಡಿದ್ದೇವೆ ಮತ್ತು ದಿನಾಂಕ ಮತ್ತು  ಲುಕ್ಸ್ ಗಳ ಬಗ್ಗೆ ಚರ್ಚಿಸಿದ್ದೇವೆ. ನಾನು ದೀರ್ಘಕಾಲದಿಂದ ಅವರೊಂದಿಗೆ ಕೆಲಸ ಮಾಡಲು ಬಯಸಿದ್ದೆ, ಏಕೆಂದರೆ ಅವರ ನಟನೆ ಪರಿಪೂರ್ಣ ಸಂಯೋಜನೆಯಾಗಿದೆ ಎಂದು ನಾನು ಭಾವಿಸುತ್ತೇನೆ. ನಾನು ಕಥೆ ಹೇಳಲು ಹೊರಟು ಕೇವಲ 20 ನಿಮಿಷ ಆಗಿದ್ದೇ ತಡ ಚಲನಚಿತ್ರವನ್ನು ಮಾಡಲು ಅವರು ಒಪ್ಪಿಗೆ ನೀಡಿದರು. ನಾನು ಖುಷಿಪಟ್ಟಿದ್ದೆ. “ಸದ್ಯ ಮಾಲ್ಟಾದಲ್ಲಿ ಚಿತ್ರೀಕರಣ ಪೂರ್ಣಗೊಂಡಿದೆ. ಮುಂದೆ, ಜಾಕಿ ಎರಡು ವಾರಗಳ ಕಾಲ ಅಬುಧಾಬಿಗೆ ಹೋಗುತ್ತಾರೆ, ಅಲ್ಲಿ ಕೆಲವು ಸ್ಟಂಟ್ ಮತ್ತು ರೋಮ್ಯಾಂಟಿಕ್ ದೃಶ್ಯಗಳನ್ನು ಮಾಡಲಿದ್ದಾರೆ.  ದೆಹಲಿ ಮತ್ತು ಪಂಜಾಬ್ ನಲ್ಲಿ ಚಿತ್ರೀಕರಣ ನಡೆಯಲಿದೆ” ಎಂದು ನಿರ್ದೇಶಕರು ತಿಳಿಸಿದ್ದಾರೆ..

Image result for bharath movie' bollywood poster salmankhan

ಓಡ್ ಟು ಮೈ ಫಾದರ್

ಭಾರತ್’ ಚಿತ್ರ ದಕ್ಷಿಣ ಕೊರಿಯಾದ ಸಿನಿಮಾ `ಓಡ್ ಟು ಮೈ ಫಾದರ್’ ಚಿತ್ರದ ಕತೆಯನ್ನು ಆಧರಿಸಿದ್ದು ಈ ಸಿನಿಮಾದಲ್ಲಿ ಟಬು, ದಿಶಾ ಪಟಾನಿ, ಜಾಕಿ ಶ್ರಾಫ್, ಸುನಿಲ್ ಗ್ರೋವರ್, ನೋರಾ ಫತೇಹಿ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಮೊದಲು ಪ್ರಿಯಾಂಕಾ ಚೋಪ್ರಾ ಈ ಸಿನಿಮಾದಲ್ಲಿ ನಟಿಸಲು ಆಯ್ಕೆಯಾಗಿದ್ದು ಕೊನೇ ಕ್ಷಣದಲ್ಲಿ ಆಕೆ ಚಿತ್ರದಿಂದ ಹೊರನಡೆದಿರುವುದರಿಂದ ಆ ಜಾಗಕ್ಕೆ ಕತ್ರೀನಾ ಬಂದಿದ್ದಾಳೆ.

Tags