ಸುದ್ದಿಗಳು

ಆಕೆ ಅವಕಾಶಕ್ಕಾಗಿ ಸಾವಿರ ಸಲ ಕರೆ ಮಾಡಿದ್ದಳು ಎಂದ ಸಲ್ಮಾನ್ ಖಾನ್!

ಈ ಆಕೆ ಯಾರು?

ಮುಂಬೈ,ಸೆ.10 ಬಾಲಿವುಡ್ ನ ಬಹುನಿರೀಕ್ಷಿತ ಚಿತ್ರ ‘ಭಾರತ್’ ಚಿತ್ರದಿಂದ, ನಟಿ ಪ್ರಿಯಾಂಕ ಚೋಪ್ರಾ ಹೊರಬಂದಿದ್ದು ಆಯಿತು, ಆಕೆಯ  ಸ್ಥಾನಕ್ಕೆ ನಟಿ ಕತ್ರೀನಾ ಕೈಫ್ ಆಯ್ಕೆ ಆಗಿದ್ದು ಆಯ್ತು. ಈ ನಡುವೆ ಪ್ರಿಯಾಂಕ ಚೋಪ್ರಾರ ದಿಡೀರ್ ನಿರ್ಧಾರದಿಂದ ಚಿತ್ರತಂಡ ಬೇಸರಗೊಂಡಿದ್ದರೂ ಆಕೆಗೆ ಒಳ್ಳೆಯದಾಗಲಿ ಎಂದು ಹಾರೈಸಿ ಎಲ್ಲವೂ ಆಗಿದೆ, ಸಲ್ಮಾನ್ ಖಾನ್ ಅಂತೂ ನಾನು ಇನ್ನೂ ಮುಂದೆ ಆಕೆಯೊಂದಿಗೆ ನಟಿಸುವುದಿಲ್ಲ ಎಂದು ಆಪ್ತರೊಂದಿಗೆ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ಈ ನಡುವೆ ಆಕೆಯ ನಿರ್ಗಮನದ  ಬಗ್ಗೆ ಮಾತನಾಡಿರುವ ಸಲ್ಮಾನ್ ಖಾನ್, ಹಾಲಿವುಡ್ ನಿಂದ ವಾಪಾಸ್ಸಾದ ಬಳಿಕ ‘ಭಾರತ್’ ಚಿತ್ರದಲ್ಲಿ ನಟಿಸಲು ಅವಕಾಶ ನೀಡಿ ಎಂದು ಸಾವಿರ ಬಾರಿ ಕರೆ ಮಾಡಿ ಬೇಡಿಕೊಂಡ ಆಕೆ ಬಳಿಕ ಕೈಕೊಟ್ಟಿದ್ದು ಯಾಕೆ ಎಂಬುದು ನನಗೆ ಗೊತ್ತಿಲ್ಲ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.

Related image

ಸಾವಿರ ಬಾರಿ ಕರೆ ಮಾಡಿದ್ದಳು..

ಹಾಲಿವುಡ್ ಗಾಯಕ ನಿಕ್ ಜೋನಸ್ ಜೊತೆಗೆ ಪ್ರಿಯಾಂಕ ಚೋಪ್ರಾ ಮದುವೆಯಾಗುತ್ತಿದ್ದು, ಇದೇ ಕಾರಣಕ್ಕೆ ಆಕೆ ಚಿತ್ರತಂಡದಿಂದ ಹೊರಬಂದರು ಎಂದು ಕೆಲವರು ಹೇಳಿದರೂ, ಖಚಿತ ಕಾರಣ ಮಾತ್ರ ತಿಳಿದಿಲ್ಲ.

ರಿಯಾಲಿಟಿ ಶೋ ನಲ್ಲಿ ಈ ಕುರಿತಂತೆ ಮಾತನಾಡಿರುವ ಸಲ್ಮಾನ್ ಖಾನ್, ಅರ್ಪಿತಾ ಖಾನ್ ಗೆ ಸಾವಿರ ಬಾರಿ ಕರೆ ಮಾಡಿ, ನನಗೆ ಸಲ್ಮಾನ್ ಖಾನ್ ಜೊತೆಗೆ ಕೆಲಸ ಮಾಡಬೇಕಿದ್ದು, ಭಾರತ್ ಚಿತ್ರದಲ್ಲಿ ನಾನೆ ನಟಿಸುವುದಾಗಿ  ಕೇಳಿಕೊಂಡರು, ಚಿತ್ರದ ನಿರ್ದೇಶಕರಿಗೂ ಕರೆ ಮಾಡಿ ಅವಕಾಶ ನೀಡುವಂತೆ ಮನವಿ ಮಾಡಿಕೊಂಡರು. ಆದರೆ ದಿಡೀರ್ ಆಕೆ ಚಿತ್ರದಿಂದ ದೂರ ಉಳಿದಿರುವ ಬಗ್ಗೆ ಅಚ್ಚರಿಯಾಗಿದೆ ಎಂದಿದ್ದಾರೆ.

ಅಷ್ಟೇ ಅಲ್ಲದೆ ಭಾರತ್ ಚಿತ್ರಕ್ಕೆ ಕತ್ರೀನಾ  ಕೈಫ್ ಅವರೇ ಮೊದಲ ಆಯ್ಕೆಯಾಗಿದ್ದರು. ಆದರೆ ಪ್ರಿಯಾಂಕ ತಾನು ನಟಿಸುವುದಾಗಿ ನಿರ್ದೇಶಕರಲ್ಲೂ ಮನವಿ ಮಾಡಿದ್ದರಿಂದ ನಾವು ಆಕೆಗೆ ಅವಕಾಶ ನೀಡಿದೆವು ಎಂದ ಸಲ್ಮಾನ್ ಖಾನ್ ಹೇಳಿದ್ದಾರೆ.

 

Tags