ಸುದ್ದಿಗಳು

ಸಲ್ಲು ವಿರುದ್ಧ ಆರೋಪ ಮಾಡಿದ ಈ ಗಾಯಕ..

ಬಾಲಿವುಡ್ ಗೆ ಮಾರಕ ಎಂದು ಗಾಯಕ ಅಭಿಜಿತ್

ಮುಂಬೈ,ಅ.06: ಬಾಕ್ಸಾಫೀಸ್ ಸುಲ್ತಾನ ಎಂದೇ ಕರೆಸಿಕೊಳ್ಳುವ ಸಲ್ಮಾನ್ ಖಾನ್ ಚಿತ್ರರಂದಲ್ಲಿ ಹಾಗೂ ಶೋಗಳಲ್ಲಿ ಬ್ಯುಸಿಯಾಗಿದ್ದಾರೆ.. ಇದೀಗ ಸಲ್ಲು ಮೇಲೊಂದು ಆರೋಪ ಕೇಳಿ ಬಂದಿದೆ. ಗಾಯಕ ಅಭಿಜಿತ್ ಭಟ್ಟಾಚಾರ್ಯ ಇದೀಗ ಬಾಕ್ಸಾಫೀಸ್ ಸುಲ್ತಾನ ಎಂದು ಕರೆಸಿಕೊಂಡಿರುವ ಸಲ್ಮಾನ್ ಖಾನ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸಲ್ಲು ಮೇಲೆ ಆರೋಪದ ಹೊರೆ ಇದೇನು ಮೊದಲಲ್ಲ.

Image result for abhijith bhattacharya

ಮೈ ಹೂ ನಾ

ಸಲ್ಮಾನ್ ಖಾನ್ ಪಾಕಿಸ್ತಾನದ ಗಾಯಕರಿಗೆ ಪ್ರಮೋಶನ್ ನೀಡುತ್ತಿದ್ದಾರೆ  ಎಂದು ಆರೋಪಿಸಿದ್ದಾರೆ. ಇಂಥ ನಡವಳಿಕೆ ಬಾಲಿವುಡ್ ಗೆ ಮಾರಕ ಎಂದು ಗಾಯಕ ಅಭಿಜಿತ್ ಹೇಳಿದ್ದಾರೆ. ‘ಮೈ ಹೂ ನಾ’ ಚಿತ್ರದ ನಂತರ ಶಾರುಖ್ ಖಾನ್ ಅವರೊಂದಿಗೆ ಕೆಲಸ ಮಾಡುವುದನ್ನು ಯಾಕೆ ನಿಲ್ಲಿಸಿದೆ ಎಂಬುದನ್ನು ಕೂಡ ಬಿಚ್ಚಿಟ್ಟಿದ್ದಾರೆ.  ನಾನು ಯಾವುದೇ ಖಾನ್ ಗಳ ಜತೆ ಮುಂದೆ ಹಾಡುವುದಿಲ್ಲ. ‘ಮೈ ಹೂ ನಾ’ ಸಮಯದಲ್ಲಿ ಎಲ್ಲರಿಗೂ ಸಲಾಂ ಹೊಡೆದು ಬದುಕಬೇಕಾದ ಸ್ಥಿತಿ ಇತ್ತು ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ಇನ್ನು ಇದಕ್ಕೆ ಸಲ್ಲು ಪ್ರತಿಕ್ರಿಯೆ ಏನಿರುತ್ತೆ ಎಂದು ಜಾದು ನೋಡಬೇಕು..

 

Tags