ಸುದ್ದಿಗಳು

‘ದಬಾಂಗ್ 3’ ಬರುತ್ತೆ ಎಂದ ಸಲ್ಲು

ಮೋಡಿ ಮಾಡಲಿರುವ ದಬಾಂಗ್ ಜೋಡಿ

ಮುಂಬೈ, ಸೆ.11: ‘ದಬಾಂಗ್’ ಸಿನಿಮಾ ನೋಡಿದ ಪ್ರತಿಯೊಂದು ಪ್ರೇಕ್ಷಕನು ಮುಂದಿನ ದಬಾಂಗ್ ಬಗ್ಗೆ ಚಿಂತೆ ಮಾಡುತ್ತಿದ್ದರು. ‘ದಬಾಂಗ್ ‘2 ಬಂದಾಗಲು ‘ದಬಾಂಗ್ 3’ ಯಾವಾಗ ಬರುತ್ತೆ ಅಂತಾ ಅಭಿಮಾನಿಗಳು ಕಾಯುತ್ತಿದ್ದರು. ಇದೀಗ ಈ ವಿಚಾರವನ್ನು ಸಲ್ಲು ಅಧಿಕೃತವಾಗಿ ಹೇಳಿದ್ದಾರೆ.

ತೆರೆ ಮೇಲೆ ಕಮಾಲ್ ಮಾಡಿದ್ದ ಸಲ್ಲು-ಸೋನಾಕ್ಷಿ

‘ದಬಾಂಗ್’ ಸಿನಿಮಾ 2010 ರಲ್ಲಿ ತೆರೆ ಕಂಡ ಸಿನಿಮಾ. ಆಗಲೇ ಸಲ್ಲು ಈ ಸಿನಿಮಾದ ಮೂಲಕ ಮತ್ತಷ್ಟು ಹೆಸರು ಪಡೆದ್ದರು. ಸಲ್ಲುಗೆ ಜೋಡಿಯಾಗಿ ಸೋನಾಕ್ಷಿ ಸಿನ್ಹಾ ,ಬಾಲಿವುಡ್‌ ಗೆ ಪ್ರವೇಶ ಮಾಡಿದ  ಮೊದಲ ಸಿನಿಮಾ ‘ದಬಾಂಗ್’. ಈ ಸಿನಿಮಾದಲ್ಲಿನ ಈ ಜೋಡಿಯ ನಟನೆ ನೋಡಿದ್ದ ಪ್ರೇಕ್ಷಕರು ಈ ಸಿನಿಮಾದ ಮುಂದುವರೆದ ಭಾಗಕ್ಕೆ ಕಾಯುತ್ತಿದ್ದರು. ಆಗ ಬಂದಿದ್ದೇ ‘ದಬಾಂಗ್ 2’ ಸಿನಿಮಾ. 2012 ರಲ್ಲಿ ‘ದಬಾಂಗ್ 2’ ತೆರೆ ಕಂಡಿತು. ಮೊದಲ ಪಾರ್ಟ್ ನಂತೆಯೇ ಎರಡನೇ ಪಾರ್ಟ್ ನಲ್ಲೂ ಈ ಜೋಡಿ ಯಶಸ್ಸು ಕಂಡರು. ಇದೀಗ ‘ದಬಾಂಗ್ 3’ ಮತ್ತೆ ಯಶಸ್ಸು ಕಾಣಲು ರೆಡಿಯಾಗುತ್ತಿದೆ.8 ವರ್ಷಗಳ ಬಳಿಕ ದಬಾಂಗ್ 3

ಹೌದು, ‘ದಬಾಂಗ್ 3’ ಸಿನಿಮಾ ಬರುತ್ತೆ ಎನ್ನಲಾಗುತ್ತಿತ್ತು. ಇದೀಗ ಮುಂದಿನ ವರ್ಷವೇ ದಬಾಂಗ್ 3 ತೆರೆ ಕಾಣಿಲಿದೆಯಂತೆ. ಸಲ್ಮಾನ್ ಖಾನ್ ಹಾಗೂ ಸೋನಾಕ್ಷಿ ಸಿನ್ಹಾ ಮತ್ತೆ ತೆರೆ ಮೇಲೆ ಕಮಾಲ್ ಮಾಡಲು ರೆಡಿಯಾಗುತ್ತಿದ್ದಾರೆ ಎನ್ನುವುದು ಸದ್ಯ ಅಭಿಮಾನಿಗಳಲ್ಲಿ ಖುಷಿ ಮೂಡಿಸಿದೆ. ಇನ್ನು ದಬಾಂಗ್ ಬಂದು 8 ವರ್ಷಗಳ ಬಳಿಕ ಇದರ ಮುಂದುವರೆದ ಭಾಗವಾಗಿ ‘ದಬಾಂಗ್ 3’ ಬರಲಿದೆ ಅಂತಾ ಸಲ್ಲು ಪೋಸ್ಟ್ ಒಂದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Tags