ಸುದ್ದಿಗಳು

ಮಹಿಳಾ ಅಭಿಮಾನಿಯ ಅತಿರೇಕದ ವರ್ತನೆ ಕಂಡು ಸಲ್ಮಾನ್ ಏನ್ ಮಾಡಿದ್ರು ನೋಡಿ…!

ಬಾಲಿವುಡ್ ಸೂಪರ್‌ ಸ್ಟಾರ್ ಸಲ್ಮಾನ್ ಖಾನ್ ಎಲ್ಲಿಗೆ ಹೋದರೂ ಅವರ ಜೊತೆ ಬಾಡಿಗಾರ್ಡ್ಸ್ ಸಹ ಪ್ರಯಾಣಿಸುತ್ತಾರೆ ಎಂಬ ವಿಷಯ ಎಲ್ಲರಿಗೂ ಗೊತ್ತಿದೆ. ಅವರ ಜೊತೆ ಯಾಕೆ ಬಾಡಿಗಾರ್ಡ್ಸ್ ಇರುತ್ತಾರೆ ಎಂಬ ವಿಷಯವೂ ನಿಮಗೆ ಗೊತ್ತಿದೆ. ಹೀಗೆ ಸಲ್ಮಾನ್ ಬಾಡಿಗಾರ್ಡ್ಸ್ ಇಟ್ಟುಕೊಂಡರೂ ಅಭಿಮಾನಿಗಳು ಅವರನ್ನು ಲೆಕ್ಕಿಸುತ್ತಿಲ್ಲ ನೋಡಿ.

ಹೌದು, ಇತ್ತೀಚೆಗೆ ಮಹಿಳೆಯೊಬ್ಬರು ಸಲ್ಮಾನ್ ಜೊತೆ ಬಾಡಿಗಾರ್ಡ್ಸ್ ಇದ್ದರೂ ಸಲ್ಮಾನ್ ಕೈಯ್ಯನ್ನು ಹಿಡಿದು ಎಳೆದಿರುವ ವೀಡಿಯೊ ಈಗ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಜನಪ್ರಿಯ ಫೋಟೋ ಜರ್ನಲಿಸ್ಟ್ ವೈರಲ್ ಭಯಾನಿ ತಮ್ಮ ಇನ್ಸ್ಟಾಗ್ರಾಂ ಪುಟದಲ್ಲಿ ಈ ವೀಡಿಯೊ ಹಂಚಿಕೊಂಡಿದ್ದಾರೆ.

ಒಬ್ಬ ಮಹಿಳೆ ಸಲ್ಮಾನ್ ಹತ್ತಿರ ಹೋಗಿ ಸೆಲ್ಫಿ ಪಡೆದುಕೊಳ್ಳಲು ತೋಳನ್ನುಹಿಡಿದು ಬಲವಾಗಿ ಎಳೆದಿದಿದ್ದಾರೆ. ಆಗ ಸಲ್ಮಾನ್ ಮಹಿಳೆ ಕಡೆ ಒಮ್ಮೆ ನೋಡಿ ನಿರ್ಗಮಿಸಿರುವುದು ಈ ವೀಡಿಯೊದಲ್ಲಿ ಕಂಡುಬರುತ್ತದೆ.

ಮುಂಬೈನಲ್ಲಿ ‘ಹಮ್ ಆಪ್ಕೆ ಹೈ ಕೌನ್’ ಚಿತ್ರ ಪ್ರದರ್ಶನದ ವೇಳೆ ಈ ಘಟನೆ ಸಂಭವಿಸಿದ್ದು, ಅಲ್ಲಿ ಮಾಧುರಿ ದೀಕ್ಷಿತ್ ಕೂಡ ಹಾಜರಿದ್ದಾರೆ. ಮಹಿಳೆಯ ಈ ಧೈರ್ಯಕ್ಕೆ ಬೆರಗಾದ ಸೂಪರ್‌ ಸ್ಟಾರ್ ಮಹಿಳೆಯನ್ನು ಕಡೆಗಣಿಸಿ ಅವಳಿಗೆ ಏನೂ ಹೇಳದೆ ಹೊರನಡೆದಿರುವುದು. ಇದರಿಂದ ಅವರು ಕಿರಿಕಿರಿ ಅನುಭವಿಸಿರುವುದು ಸಲ್ಮಾನ್ ಮುಖದಲ್ಲಿ ಸ್ಪಷ್ಟವಾಗಿ ಕಾಣುತ್ತದೆ.

 

View this post on Instagram

 

#SalmanKhan does not appreciate a fan pulling him like this

A post shared by Viral Bhayani (@viralbhayani) on

ನನ್ನ ಅಮ್ಮ ಸಹ ಅಂತಹ ಹೋಲಿಕೆ ಸ್ವೀಕರಿಸುವುದಿಲ್ಲ; ಸಾಹೋ ನಿರ್ದೇಶಕ ಸುಜೀತ್

#balkainews #salmankhan #bollywood #videoviral

Tags