ಸುದ್ದಿಗಳು

ಭಾರತದಲ್ಲಿ ಮತ್ತೆ ಆಕೆಯ ಸಿನಿ ಭವಿಷ್ಯ ನೆಲೆಯೂರುವುದೇ?: ಸಲ್ಮಾನ್ ಖಾನ್..

ಚಿತ್ರತಂಡದ ಕಂಗೆಣ್ಣಿಗೆ ಗುರಿಯಾದ ಪಿಗ್ಗಿ

ಹಾಲಿವುಡ್ ನಿಂದ ಕಮ್ ಬ್ಯಾಕ್ ಆಗಿದ್ದ ಪ್ರಿಯಾಂಕ ಚೋಪ್ರಾ, ಭಾರತ್ ಚಿತ್ರದಲ್ಲಿ ನಟಿಸುವುದು ಬಹುತೇಕ ಖಚಿತವಾಗಿತ್ತು.. ಸಲ್ಮಾನ್ ಖಾನ್ ಅಭಿನಯದ ಭಾರತ್ ಗೆ ಪಿಸಿ ಜೋಡಿಯಾಗುವ ಬಗ್ಗೆ ಚಿತ್ರತಂಡ ಖಚಿತಪಡಿಸಿತ್ತು. ಹಲವು ಶರತ್ತುಗಳೊಂದಿಗೆ ಪ್ರಿಯಾಂಕ ಕೂಡ ಚಿತ್ರಕ್ಕೆ ಸಹಿ ಹಾಕಿದ್ದರೂ. ಆದರೆ ಕೊನೆಯ ಕ್ಷಣದ ಬದಲಾವಣೆ ಎಂಬಂತೆ ಪ್ರಿಯಾಂಕ ಚಿತ್ರತಂಡದಿಂದ ದಿಡೀರನೆ ಹೊರನಡೆದಿದ್ದು, ಸಲ್ಮಾನ್ ಖಾನ್ ಸೇರಿದಂತೆ ಚಿತ್ರತಂಡದ ಕೆಂಗಣ್ಣಿಗೆ ಗುರಿಯಾಗಿದೆ.

ಪಿಗ್ಗಿ ಬಗ್ಗೆ ಸಲ್ಲು ಮಾತು

ವೈವಾಹಿಕ ಜೀವನಕ್ಕೆ ಕಾಲಿಡುವ ಸಲುವಾಗಿ ಪಿಸಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂಬುದು ಕೆಲವು ಮೂಲಗಳ ಮಾತು. ಈ ನಡುವೆ ಪ್ರಿಯಾಂಕ ಚೋಪ್ರಾ ರ ಈ ನಿರ್ಧಾರ ನಟ ಸಲ್ಮಾನ್ ಖಾನ್ ಅವರ ಕೋಪಕ್ಕೆ ಕಾರಣವಾಗಿದೆ. ಈ ಕುರಿತಂತೆ ಇತ್ತೀಚೆಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಲ್ಮು ಬಾಯ್, ಭಾರತದಲ್ಲಿ ಆಕೆ ಕೆಲಸ ಮಾಡಲು ಇಚ್ಛಿಸುತ್ತಾರೆಯೇ ? ಎಂದು ಪ್ರಶ್ನಿಸಿದ್ದಾರೆ.ಪಿಗ್ಗಿ ವರ್ತನೆಯಿಂದ ಬೇಸತ್ತ ಭಾರತ್ ಚಿತ್ರತಂಡ

‘ಲವ್ ರಾತ್ರಿ’ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸಲ್ಮಾನ್ ಖಾನ್. ಚಿತ್ರೀಕರಣಕ್ಕೆ ಕೇವಲ 10 ದಿನಗಳು ಬಾಕಿ ಇರುವಂತೆಯೇ ಪ್ರಿಯಾಂಕ ಮಾಡಿದ ರೀತಿ ಹಾಗೂ ಚಿತ್ರತಂಡದಿಂದ ಹೊರನಡೆದ ಬಗೆ ನಿಜಕ್ಕೂ ಬೇಸರ ತರಿಸಿದೆ. ಭಾರತ್ ಚಿತ್ರಕ್ಕೆ ಆಕೆ ಮಾಡಿದ ಮೋಸದಿಂದಾಗಿ, ಭಾರತದಲ್ಲಿ ಮತ್ತೆ ಆಕೆಯ ಸಿನಿ ಭವಿಷ್ಯ ನೆಲೆಯೂರುವುದೇ ಎಂಬ ಪ್ರಶ್ನೆಯನ್ನು ಕೂಡ ಇದೇ ವೇಳೆ ಸಲ್ಲೂ ಹಾಕಿದ್ದಾರೆ.

ಈ ನಡುವೆ ಭಾರತ್ ಚಿತ್ರದಿಂದ ಪ್ರಿಯಾಂಕ ಹೊರನಡೆದಿರುವ ಬಗ್ಗೆ ಬಹಿರಂಗವಾಗಿ ಮಾತನಾಡಬಾರದು ಎಂಬುದು ಚಿತ್ರತಂಡದ ನಿರ್ಧಾರವಂತೆ. ಸಲ್ಮಾನ್ ಖಾನ್ ಕೂಡ ಆಕೆಯ ಬಗ್ಗೆ ಯಾವುದೇ ರೀತಿಯ ಹೇಳಿಕೆ ನೀಡಬಾರದು ಎಂದು ನಿರ್ಧರಿಸಿದ್ದಾರೆ. ಆದರೆ ಮಾಧ್ಯಮಗಳು ಈ ಪ್ರಶ್ನೆ ಕೇಳುತ್ತದೇ ಇರುವುದರಿಂದ ಇದೀಗ ಪ್ರಿಯಾಂಕ ನಿರ್ಧಾರದ ಬಗ್ಗೆ ಬಾಯಿ ಬಿಟ್ಟಿದ್ದಾರೆ.

Tags