ಸುದ್ದಿಗಳು

2019ರಲ್ಲಿ ಬಿಡುಗಡೆಯಾಗಲಿರುವ ಸ್ಯಾಮ್ ಮೆಂಡೆಸ್ ನ ‘1917’ ಚಿತ್ರ…!

ಹಾಲಿವುಡ್ ನಿರ್ದೇಶಕ ಸ್ಯಾಮ್ ಮೆಂಡೆಸ್

ಬೆಂಗಳೂರು, ಡಿ.15: ನಿರ್ದೇಶಕ ಸ್ಯಾಮ್ ಮೆಂಡೆಸ್ ಅವರ ‘ವಿಶ್ವ ಸಮರ I ನಾಟಕ 1917’ ಚಿತ್ರ ಡಿಸೆಂಬರ್ 25, 2019ರಂದು ಚಿತ್ರಮಂದಿರಗಳಲ್ಲಿ ತೆರೆ ಕಾಣಲು ಸಿದ್ಧವಾಗಿದೆ.

ಚಿತ್ರವು ಕ್ರಿಸ್ಮಸ್ ದಿನದಂದು ಸೀಮಿತ ಚಿತ್ರಮಂದಿರಗಳಲ್ಲಿ ಮಾತ್ರವೇ ಬಿಡುಗಡೆಯಾಗಲಿದ್ದು, ಎರಡು ವಾರಗಳ ನಂತರ ಅಂದರೆ ಜನವರಿ 10, 2020ರಂದು ಎಲ್ಲಾ ಚಿತ್ರ ಮಂದರಿಗಳಲ್ಲೂ ತೆರೆ ಕಾಣಲಿದೆ ಎಂದು ಪತ್ರಿಕೆಯೊಂದು ವರದಿ ದೃಢಪಡಿಸಿದೆ.

ಕ್ರೆಸ್ಟಿ ವಿಲ್ಸನ್-ಕೇರ್ನ್ಸ್ ಅವರ ಮೂಲ ಕಥೆಯನ್ನು ನಿರ್ದೇಶನ ಮಾಡುತ್ತಿರುವ ಮೆಂಡೆಸ್

ಕ್ರೆಸ್ಟಿ ವಿಲ್ಸನ್ – ಕೇರ್ನ್ಸ್ ಅವರ ಮೂಲ ಕಥೆಯನ್ನು ಮೆಂಡೆಸ್ ನಿರ್ದೇಶನ ಮಾಡುತ್ತಿದ್ದಾರೆ. ಮೆಂಡೆಸ್ ಈ ಹಿಂದೆ ಜೇಮ್ಸ್ ಬಾಂಡ್ ನ ಎರಡು ಚಲನಚಿತ್ರಗಳು, 2015ರಲ್ಲಿ ‘ಸ್ಪೆಕ್ಟರ್’ ಮತ್ತು 2012ರಲ್ಲಿ ‘ಸ್ಕೈಫಾಲ್’ ಮತ್ತು ‘ರೋಡ್ ಟು ಪರ್ಡಿಶನ್’, ‘ರೆವಲ್ಯೂಷನರಿ ರೋಡ್’ ಚಿತ್ರಗಳಿಗೂ ಚಿತ್ರಕಥೆ ಬರೆದಿದ್ದರು.

ಸ್ಟೀವನ್ ಸ್ಪೀಲ್ಬರ್ಗ್ ಅಂಬ್ಲಿನ್ ಪಾರ್ಟ್ನರ್ಸ್ / ಡ್ರೀಮ್ವರ್ಕ್‍ ಸಂಸ್ಥೆ ಈ ಚಿತ್ರದ ನಿರ್ಮಾಣ ಹೊಣೆಯನ್ನು ಹೊತ್ತಿವೆ. ಡ್ರೀಮ್ ವರ್ಕ್ಸ್ ನಲ್ಲಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲೇ ತನ್ನ ಮೊದಲ ಎರಡು ಚಲನಚಿತ್ರಗಳಲ್ಲಿ ಸ್ಪಿಲ್ಬರ್ಗ್‍ ಜೊತೆಗೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Tags