ಲುಕ್ಸ್ಸುದ್ದಿಗಳುಸೌಂದರ್ಯ

ಕೊರಿಯನ್ ಭಾಷೆಯಲ್ಲಿ ರಿಮೇಕ್ ಮಾಡಲು ಹೊರಟಿರುವ ಸಮಂತಾ!!!

ತೆಲುಗು ಚಿತ್ರರಂಗದ ಟಾಪ್ ನಟಿಯಲ್ಲಿ ಒಬ್ಬರಾದ ಸಮಂತಾ

ರಿಮೇಕ್ ಸಿನಿಮಾಗಳತ್ತ ಒಲವು ತೋರುತ್ತಿರುವ ಸ್ಯಾಮ್

ಹೈದ್ರಾಬಾದ್, ಸೆ.28: ತೆಲುಗು ಚಿತ್ರರಂಗದ ಟಾಪ್ ನಟಿಯರಲ್ಲಿ ಒಬ್ಬರಾದ ಸಮಂತಾ. ತನ್ನ ನಟನೆಯ ಮೂಲಕ ಹೆಸರು ಮಾಡಿದಲ್ಲದೇ, ನಾಗಚೈತನ್ಯ ಅವರನ್ನು ವಿವಾಹವಾಗಿದ್ದರು. ಕನ್ನಡದಲ್ಲಿ ‘ಯೂಟರ್ನ್’ ಸಿನಿಮಾ ಮಾಡಿ ಯಶಸ್ಸನ್ನು ಕಂಡ  ಪವನ್ ಕುಮಾರ್, ತೆಲುಗು ಮತ್ತು ತಮಿಳಿನಲ್ಲಿ ಯೂಟರ್ನ್ ಸಿನಿಮಾವನ್ನುನಿರ್ದೇಶಿಸಿ ಸೈ ಎನಿಸಿಕೊಂಡಿದಲ್ಲದೇ,  ಸದ್ಯ ಈ ಚಿತ್ರ ರಿಮೇಕ್ ಆಗಿ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದೀಗ ಹೊಸ ವಿಷಯವೇನೇಂದರೆ, ಸಮಂತಾ ರಿಮೇಕ್ ಚಿತ್ರಗಳ ಕಡೆಗೆ ಹೆಚ್ಚಿನ ಒಲವನ್ನು ತೋರುತ್ತಿದ್ದಾರೆ.ಟಾಲಿವುಡ್ ಬೆಡಗಿ ಸಮಂತಾ

ತಮ್ಮ ಸಿನಿಪಯಣದಲ್ಲಿ ಸ್ಯಾಮ್ ಹಲವಾರು ವೈಶಿಷ್ಟ್ಯ  ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದರ ಮೂಲಕ, ತೆಲುಗು, ತಮಿಳು, ಮತ್ತು ಮಲಯಾಳಂ ಚಿತ್ರದ ಸ್ಟಾರ್ ನಟರೊಂದಿಗೆ ನಟಿಸಿದ್ದಾರೆ. ಅದರಲ್ಲಿಯೂ ಇವರು ಅಭಿನಯಿಸಿರುವ ಸಿನೆಮಾಗಳಂತೂ ಬ್ಲಾಕ್ ಬಸ್ಟರ್ ಚಿತ್ರಗಳಾಗಿ ಬಾಕ್ಸ್ ಆಫೀಸ್ ಅನ್ನು ಕೊಳ್ಳೆಹೊಡೆದಿರುವುದು ದಾಖಲೆಯಾಗಿದೆ. ಯೂಟರ್ನ್ ಚಿತ್ರ ಯಶಸ್ಸಿನ ಬೆನ್ನಲ್ಲೇ ಸ್ಯಾಮ್ ಹೊಸ ರಿಮೇಕ್ ಚಿತ್ರದಲ್ಲಿ ನಟಿಸಿಲು ಮುಂದಾಗಿದ್ದಾರೆ.

ಸೌತ್ ಕೋರಿಯನ್

ಸಮಂತಾ ಈಗ ರಿಮೇಕ್ ಮಾಡಲು ಹೊರಟಿರುವುದು ಕೊರಿಯನ್ ಭಾಷೆಯಲ್ಲಿ. ಹೌದು, ತೆಲುಗು ಚಿತ್ರರಂಗದ  ನಿರ್ದೇಶಕಿಯಾದ ನಂದಿನಿ ರೆಡ್ಡಿ ಇದೀಗ ಕೊರಿಯನ್ ಸಿನಿಮಾದಲ್ಲಿ ಯಶಸ್ವಿಯಾದಂತಹ ‘ಮಿಸ್ ಗ್ಯ್ರಾನಿ’ ಎನ್ನುವ ಸೌತ್ ಕೊರಿಯನ್ ಹಾಸ್ಯ ಪ್ರಧಾನ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ 70 ವರ್ಷದ ಅಜ್ಜಿ ಇದ್ದಕ್ಕಿದಂತೆ 20 ವರ್ಷದ ಯುವತಿಯಾಗಿ ಬದಲಾಗುವ ಕಥೆಯನ್ನು ಒಳಗೊಂಡಿದ್ದು,  ಈ ಸಿನಿಮಾವನ್ನು ಮಾಡಲು ಸಮಂತಾ ಸಮ್ಮತಿ ಸೂಚಿಸಿದ್ದು, ಸುರೇಶ್ ಪ್ರೊಡಕ್ಷನ್ ನಲ್ಲಿ ನಂದಿನಿ ರೆಡ್ಡಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಶೂಟಿಂಗ್ ಶುರು ಮಾಡಲಿವೆ ಎನ್ನುತ್ತಿವೆ ಚಿತ್ರತಂಡದ ಮೂಲಗಳು.

Tags