ಸುದ್ದಿಗಳು

ಕೇವಲ ಎರಡು ತಾಸಿನಲ್ಲಿ ತಿರುಪತಿ ಬೆಟ್ಟ ಹತ್ತಿದ ಸ್ಯಾಮ್…!!!

ಹೈದ್ರಾಬಾದ್, ಮಾ.03:

ತಾವು ಅಭಿನಯಿಸಿದ ಸಿನಿಮಾ ಬಿಡುಗಡೆಯಾಗುವ ಸಮಯದಲ್ಲಿ ಸೆಲೆಬ್ರಿಟಿಗಳು ದೇವಸ್ಥಾನಕ್ಕೆ ಭೇಟಿ ನೀಡುವುದು ಸಾಮಾನ್ಯದ ಸಂಗತಿ. ದೇವರ ಕೃಪೆ ಸದಾ ಕಾಲ ನಮ್ಮೊಂದಿಗಿರಲಿ ಎಂದು ಮನಃ ಪೂರ್ವಕವಾಗಿ ಬೇಡಿಕೊಳ್ಳುತ್ತಾರೆ.

ಸಮಂತಾ ಮತ್ತು ನಾಗಚೈತನ್ಯ ಅಭಿನಯದ ಮಜಿಲಿ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು ಇದೀಗ ಈ ಜೋಡಿ ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದೆ.

ಮಜಲಿ ಸಿನಿಮಾ ಇದೇ ಶುಕ್ರವಾರದಂದು ತೆರೆಕಾಣಲಿದ್ದು ಈ ಹಿನ್ನೆಲೆಯಲ್ಲಿ ಸಮಂತಾ ಅವರು ಬರಿಗಾಲಲ್ಲಿ ಬೆಟ್ಟ ಹತ್ತುವ ಮೂಲಕ ದರ್ಶನ ಪಡೆದಿದ್ದಾರೆ. ಸಮಂತಾ ಜೊತೆಗೆ ಮಜಲಿ ಚಿತ್ರತಂಡದ ಎಲ್ಲರೂ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಪುನೀತರಾಗಿದ್ದಾರೆ.

ಕೇವಲ ಎರಡು ಗಂಟೆಗಳಲ್ಲೇ ಅಲಿಪಿರಿಯಿಂದ ಕಾಲ್ನಡಿಗೆಯಲ್ಲಿ ಸಮಂತಾ ಬೆಟ್ಟ ಹತ್ತಿ ಎಲ್ಲರನ್ನೂ ಚಕಿತಗೊಳಿಸಿದ್ದಾರೆ. ಸಮಂತಾ ಬೆಟ್ಟ ಹತ್ತುತ್ತಿರುವ ಫೋಟೋಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಪ್ರಭಾಸ್ ಚಿತ್ರದಲ್ಲಿ ಐಟಂ ಡಾನ್ಸರ್ ಆಗಿ ಹಾಲಿವುಡ್ ಹೀರೋಯಿನ್!!

#balkaninews #tollywood #samantha #samanthaakkineni #tirupathitirumalatemple #nagachaithanya #majilitelugumovie

Tags