ಸುದ್ದಿಗಳು

ತಾಯ್ತನದ ಬಗ್ಗೆ ಮಾತನಾಡಿದ ಸಮಂತಾ, ತಾಯಿಯಾಗುತ್ತಿದ್ದಾರಾ..?

ದಕ್ಷಿಣ ಚಿತ್ರರಂಗದ ಸುಂದರಿ, ಸಮಂತಾ ಕಳೆದ ವರ್ಷ ಅಕ್ಟೋಬರ್ ನಲ್ಲಿ ತಮ್ಮ ಬಹುಕಾಲದ ಗೆಳೆಯ ನಾಗಚೈತನ್ಯ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ದಂಪತಿಗಳು ಹನಿಮೂನ್ ಟೈಮ್ ಅನ್ನು ಮುಗಿಸಿ ಇದೀಗ ಮತ್ತೆ ತಮ್ಮ ಪ್ರೋಫೆಷನ್ ಕಡೆಗೆ ಗಮನಕೊಟ್ಟಿದ್ದು ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯಕ್ಕೆ ಸಮಂತಾ ನಟನೆಯ ರಂಗಸ್ಥಳಂ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ಚಿತ್ರ ಸೂಪರ್ ಹಿಟ್ ಆಗಿದೆ.

ಈ ನಡುವೆ ವಿವಾಹವಾದ ನಂತರ ಸಹಜವಾಗಿಯೇ ಮಗು ಮಕ್ಕಳ ಬಗೆಗೆ ಗಾಸಿಪ್ ಗಳು ಹರಡುವುದು ಸಹಜ. ಇದೀಗ ತಮ್ಮ ಮಗುವಿನ ಕುರಿತಂತೆ ಮೊದಲ ಬಾರಿಗೆ ಮೌನಮುರಿದಿರುವ ನಟಿ ಸಮಂತಾ, ಈ ಬಗ್ಗೆ ನಾಗಚೈತನ್ಯ ಈಗಾಗಲೇ ಪ್ಲಾನ್ ಮಾಡಿದ್ದಾರೆ ಎಂದು ಹೇಳಿದ್ದಾರೆ.

ನಾನು ಹಾಗೂ ನಾಗಚೈತನ್ಯ ನಮಗೆ ಯಾವಾಗ ಮಗುವನ್ನು ಪಡೆಯಬೇಕು, ಮುಂದಿನ ಪ್ಲಾನ್ ಬಗೆಗೆ ಈಗಾಗಲೇ ಚರ್ಚಿಸಿದ್ದೇವೆ. ಮಗು ಯಾವಾಗ ಬರಬೇಕು ಎಂಬ ದಿನವನ್ನು ನಾವು ಈಗಾಗಲೇ ಡಿಸೈಡ್ ಮಾಡಿದ್ದು, ಅದೇ ದಿನಕ್ಕೆ ಮಗು ಹುಟ್ಟಲೇ ಬೇಕು ಎಂಬ ಬಗ್ಗೆ ಅವರು ಪಕ್ಕಾ ಪ್ಲಾನ್ ಮಾಡಿದ್ದಾರಂತೆ. ಈ ಬಗ್ಗೆ ಸಮಂತಾ ಸಂದರ್ಶನವೊಂದಲ್ಲಿ ಹೇಳಿಕೊಂಡಿದ್ದಾರೆ.

ವರ್ಕಿಂಗ್ ಮದರ್ ಗಳ ಕುರಿತಂತೆ ನನಗೆ ವಿಶೇಷವಾದ ಗೌರವವಿದೆ ಎಂದು ಹೇಳಿಕೊಂಡಿರುವ ಸಮಂತಾ, ಮಗು ಹುಟ್ಟಿದಾಗಿನಿಂದ ತಾಯಿಯ ಜವಾಬ್ದಾರಿ ಹೆಚ್ಚಾಗುತ್ತದೆ. ಮಗು ಹುಟ್ಟಿ ಅದು ಬೆಳೆಯುವವರೆಗೂ ಅಷ್ಟು ವರ್ಷಗಳ ಕಾಲ ತಾಯಿ ಎಲ್ಲಿಗೂ ಹೋಗಲು ಸಾಧ್ಯವಾಗುವುದಿಲ್ಲ. ಮಗುವನ್ನು ಕಟ್ಟಲ್ಲಿ ಕಣ್ಣಿಟ್ಟು ಕಾಪಾಡಬೇಕು.. ಅದರ ಜೊತೆಜೊತೆಗೆ ಕುಟುಂಬ ಸದಸ್ಯರ ಬಗೆಗೂ ಗಮನ ಹರಿಸಬೇಕು. ಹೀಗಾಗಿ ನಾನು ನಾಗಚೈತನ್ಯ ಇಬ್ಬರು ತಮ್ಮ ಮಗುವಿನ ಬಗೆಗೆ ಸಮಾನವಾಗಿ ಜವಾಬ್ದಾರಿ ಹೊರುವ ಬಗೆಗೆ ಚಿಂತಿಸಿರುವುದಾಗಿ ಸಮಂತಾ ಹೇಳಿಕೊಂಡಿದ್ದಾರೆ.

 

Tags