ಸುದ್ದಿಗಳು

ವಾಟ್ಸ್ ಆಪ್ ನಲ್ಲಿ ಲೀಕ್ ಆಯ್ತು ಸಮಂತಾ ಫೋಟೋ!!

ಚಿತ್ರೀಕರಣದ ಸಮಯದಲ್ಲಿ ಎಷ್ಟೇ ಭದ್ರತೆಯನ್ನು ಕೊಟ್ಟರು, ಎಷ್ಟೇ ಜಾಗೃತರಾದರೂ,ಕೆಲವೊಮ್ಮೆ ಅಚಾತುರ್ಯಗಳು ನಡೆಯುತ್ತದೆ. ಚಿತ್ರೀಕರಣದ ಸಂದರ್ಭದಲ್ಲಿ ಟೈಟ್ ಸೆಕ್ಯೂರಿಟಿ ನೀಡಲಾಗುತ್ತದೆ. ಕೆಲವೊಂದು ದೃಶ್ಯಗಳನ್ನು ನಟಿಸುವ ಸಂದರ್ಭದ ಫೋಟೋಗಳು, ವಿಡಿಯೋಗಳು ಯಾರಿಗೂ ಸಿಗಬಾರದು ಎಂಬ ಕಾರಣಕ್ಕಾಗಿ ಚಿತ್ರದ ನಿರ್ದೇಶಕರು, ನಿರ್ಮಾಪಕರು ಸಾಕಷ್ಟು ಮುಂಜಾಗೃತಾ ಕ್ರಮವನ್ನು ಕೈಗೊಳ್ಳುತ್ತಾರೆ. ಆದರೆ ಇವೆಲ್ಲಾವನ್ನು ಮೀರಿ, ಕೆಲವೊಮ್ಮೆ ಫೋಟೋಗಳು, ಚಿತ್ರದ ಪ್ರಮುಖ ದೃಶ್ಯಗಳು, ಲೀಕ್ ಆಗುವುದಿದೆ. ಇದೀಗ ಈ ಸರದಿ ಸಮಂತಾ ಅವರದ್ದಾಗಿದೆ.

ಈ ಹಿಂದೆ ರಜನಿಕಾಂತ್ ಅವರ 2.0 ಚಿತ್ರದ ಕೆಲವೊಂದು ದೃಶ್ಯಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಇದೀಗ ಈ ಸರದಿ ಸಮಂತಾ ಅಕ್ಕಿನೇನಿ ಅವರದ್ದು, ಸದ್ಯಕ್ಕೆ ಸಮಂತಾ ಅಕ್ಕಿನೇನಿ, ಯು ಟರ್ನ್ ಟಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಆಕೆಯ ತಮಿಳು ಚಿತ್ರ ಸೀಮಾ ರಾಜ ತಂಡ ಆಕೆಯನ್ನು ಹಾಡೊಂದರಲ್ಲಿ ಪಾಲ್ಗೊಳ್ಳುವಂತೆ ಕೇಳಿಕೊಂಡಿದೆ. ಇದಕ್ಕೆ ಒಪ್ಪಿದ ಸಮಂತಾ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಚಿತ್ರೀಕರಣದ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಫೋಟೋದಲ್ಲಿ ಸಮಂತಾ ಹೂವಿನ ಬೊಕ್ಕೆಯೊಂದಿಗೆ, ಪ್ರಪೋಸ್ ಮಾಡುತ್ತಿದ್ದಾರೆ. ಚಿತ್ರದ ಯಾವುದೇ ದೃಶ್ಯಗಳು ಲೀಕ್ ಆಗದಂತೆ ಸಾಕಷ್ಟು ಮುಂಜಾಗೃತಾ ಕ್ರಮವನ್ನು ಕೈಗೊಳ್ಳಲಾಗಿತ್ತು. ಆದರೂ ಫೋಟೋ ಇದೀಗ ವೈರಲ್ ಆಗಿದೆ.

ಈ ನಡುವೆ ಚಿತ್ರದ ನಾಯಕನಾಗಿ  ಶಿವ ಕಾರ್ತಿಕೇಯನ್ ನಟಿಸುತ್ತಿದ್ದು, ಸಿನಿಮಾವನ್ನು ಪೊನ್ರಾಮ್ ನಿರ್ದೇಶಿಸುತ್ತಿದ್ದಾರೆ. ಎರಡು ಕಡೆಯೂ ಚಿತ್ರದ ಶೂಟಿಂಗ್ ನಲ್ಲಿ ತೊಡಗಿರುವ ಸಮಂತಾ, ಸಮಯ ಹೊಂದಿಸಿಕೊಂಡು , ಬ್ಯುಸಿಯಾಗಿರುವುದಕ್ಕೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದರು ಕೂಡ.

 

Tags

Related Articles

Leave a Reply

Your email address will not be published. Required fields are marked *